ರಾಯಬಾಗ: ಸಿಂಡಿಕೇಟ್ ಬ್ಯಾಂಕ್ ರೈತರಿಗೆ ಹಾಗೂ ಗ್ರಾಹಕರಿಗೆ ಹಲವಾರು ವಿವಿಧ ಸಾಲ ನೀಡುವ ಯೋಜನೆ ಜಾರಿಗೆ ತಂದು ಉತ್ತಮ ಸೇವೆ ನೀಡುತ್ತಿದೆ. ಬ್ಯಾಂಕ್‌ನಲ್ಲಿ ಕಟಬಾಕಿ ಇರುವ ರೈತರು ಒಂದೇ ಸಲ ಸಾಲವನ್ನು ಬ್ಯಾಂಕ್‌ಗೆ ಮರುಪಾವತಿ ಮಾಡಿದ್ದಲ್ಲಿ ಅವರಿಗೆ ಮತ್ತೆ ಹೊಸ ಸಾಲ ನೀಡಲಾಗುತ್ತಿದೆ ಎಂದು ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ವಿಕಾಸ ವಿಭಾಗದ ಮಹಾಪ್ರಬಂಧಕ ಸಿ.ಬಿ.ಎಲ್. ನರಸಿಂಹರಾವ್ ಹೇಳಿದರು.
ಸಿಂಡಿಕೇಟ್ ಬ್ಯಾಂಕ್ ಕ್ಷೇತ್ರ ಕಾರ್ಯಾಲಯ ಚಿಕ್ಕೋಡಿ ಹಾಗೂ ರಾಯಬಾಗ ಸಿಂಡಿಕೇಟ್ ಬ್ಯಾಂಕ್ ಆಶ್ರಯದಲ್ಲಿ ಮಂಗಳವಾರ ಪಟ್ಟಣದ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಹಮ್ಮಿಕೊಂಡಿದ್ದ ಋಣಮುಕ್ತ ಒಂದೇ ಸಲ ಸಾಲ ವಸೂಲಾತಿ ಕ್ಯಾಂಪ್‌ನಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಿಂಡಿಕೇಟ್ ಬ್ಯಾಂಕ್ ದೇಶದಲ್ಲಿಯೇ ಮೊದಲ 1964ರಲ್ಲಿಯೇ ಕೃಷಿ ಕ್ಷೇತ್ರಕ್ಕೆ ಸಾಲ ನೀಡಿದ ಪ್ರಥಮ ಬ್ಯಾಂಕ್ ಆಗಿದೆ. ರೈತರು ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ, ಅಟಲ್ ಪೆನ್ಶನ್ ಯೋಜನೆ, ಹಾಗೂ ಸಿಂಡ್ ಕಿಸಾನ್ ರುಪೇ ಕಾರ್ಡ್ ಯೋಜನೆಗಳ ಲಾಭಗಳ ಲಾಭ ಪಡೆದುಕೊಂಡು ರೈತರು ಬ್ಯಾಂಕಿನೊಂದಿಗೆ ಉತ್ತಮ ಭಾಂದವ್ಯ ಇಟ್ಟುಕೊಂಡು ಸರಿಯಾಗಿ ಸಾಲ ಮರುಪಾತಿ ಮಾಡಿಕೊಂಡು ಸಿಬಿಲ್ ರಿಪೋರ್ಟ್ ಹೆಚ್ಚಿಕೊಳ್ಳಬೇಕೆಂದು ಹೇಳಿದರು.
ಮುಂಬರುವ ದಿನಗಳಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಆದ್ಯತೆ ಬರುವುದರಿಂದ ಪ್ರತಿಯೊಬ್ಬರೂ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ಹೇಳಿದರು.
ಚಿಕ್ಕೋಡಿ ಸಿಂಡಿಕೇಟ್ ಬ್ಯಾಂಕ್ ಕ್ಷೇತ್ರೀಯ ಪ್ರಬಂಧಕ ಪಿ.ಶ್ರೀನಿವಾಸ, ರಾಯಬಾಗ ಬಾಂಕ್ ಮುಖ್ಯ ಪ್ರಬಂಧಕ ವಿಲಿಯಮ್ಸ ಆಲ್ವರಿಸ್, ಸಾಲ ವಸೂಲಾತಿ ವಿಭಾಗದ ಮುಖ್ಯ ಪ್ರಬಂಧಕ ರಮೇಶ ಚಂದಮ, ಹಿರಿಯ ಪ್ರಬಂಧಕ ವಸಂತ, ಬಸಪ್ಪ ಇಟ್ನಾಳ, ರಾಹುಲ್, ಗೋಪಿಕೃಷ್ಣಾ ಸೇರಿದಂತೆ ಗ್ರಾಹಕರಾದ ಸಂಗಣ್ಣ ದತ್ತವಾಡೆ, ಎಂ.ಎಲ್. ಹೊಂಕಳೆ, ರಮೇಶ ಕುಂಬಾರ, ಕೀರ್ತಿ ದುಗ್ಗೆ, ಶೇಖರ ಹಾರೂಗೇರಿ ಇದ್ದರು.