Advertisement

ನೂತನ ಕಾರ್ಮಿಕ ಕಾನೂನು ಜಾರಿ ಸದ್ಯ ಇಲ್ಲ?

12:35 AM Sep 20, 2021 | Team Udayavani |

ಹೊಸದಿಲ್ಲಿ: ರಾಜ್ಯ ಸರಕಾರಗಳು ಕರಡು ನಿಯಮಗಳ ರಚನೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಂತಹ ರಾಜಕೀಯ ಕಾರಣಗಳಿಂದಾಗಿ ಪ್ರಸ್ತಾವಿತ ನಾಲ್ಕು ಕಾರ್ಮಿಕ ಕಾನೂನುಗಳು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ಬರುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

Advertisement

ಈ ಕಾರ್ಮಿಕ ಕಾನೂನು ಗಳು ಜಾರಿಗೆ ಬಂದರೆ ಉದ್ಯೋಗ ದಾತರು ಮತ್ತು ಸಂಸ್ಥೆ ಗಳಿಗೆ ಕಾರ್ಮಿಕ ಭವಿಷ್ಯ ನಿಧಿ ಹೊರೆ ಹೆಚ್ಚಲಿದ್ದು, ಉದ್ಯೋಗಿಗಳ ಕೈಸೇರುವ ವೇತನ ಪ್ರಮಾಣ ಕಡಿಮೆಯಾಗಲಿದೆ. ಕೇಂದ್ರ ಕಾರ್ಮಿಕ ಸಚಿವಾಲಯವು ಈ ನಾಲ್ಕು ಮುಖ್ಯ ಕಾನೂನುಗಳಡಿಯ ನಿಯಮಗಳನ್ನು ಈಗಾಗಲೇ ರೂಪಿಸಿದೆ. ಕಾನೂನುಗಳಿಗೆ ಸಂಸತ್ತಿನಲ್ಲಿ ಅಂಗೀಕಾರವೂ ಲಭಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next