Advertisement

ದಿಲ್ಲಿ ಹೈಕೋರ್ಟಿಗೆ ಹೊಸ ನ್ಯಾಯಾಧೀಶ; ಒಟ್ಟು ಸಂಖ್ಯೆ 39, ಕೊರತೆ 22

12:22 PM Nov 20, 2018 | udayavani editorial |

ಹೊಸದಿಲ್ಲಿ : ದಿಲ್ಲಿ ಹೈಕೋರ್ಟಿನ ಹೊಸ ನ್ಯಾಯಾಧೀಶರಾಗಿ ಮನೋಜ್‌ ಕುಮಾರ್‌ ಓಹಿರಿ ಅವರು ಇಂದು ಮಂಗಳವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದು  ಈ ಮೂಲಕ ಹೈಕೋರ್ಟಿನ ನ್ಯಾಯಾಧೀಶರ ಸಂಖ್ಯೆ 39ಕ್ಕೇರಿದೆ. 

Advertisement

ಆದರೆ ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶರ ಪೂರ್ಣ ಬಲ 60 ಇರಬೇಕಿದ್ದು  ಈಗಲೂ 22 ನ್ಯಾಯಾಧೀಶರ ಕೊರತೆಯನ್ನು ಅನುಭವಿಸುತ್ತಿದೆ. 

ನೂತನ ನ್ಯಾಯಾಧೀಶ ಮನೋಜ್‌ ಕುಮಾರ್‌ ಒಹಿರಿ ಅವರಿಗೆ ಮುಖ್ಯ ನ್ಯಾಯಾಧೀಶ ಜಸ್ಟಿಸ್‌ ರಾಜೇಂದ್ರ ಮೆನನ್‌ ಅವರು ಪ್ರಮಾಣ ವಚನ ಬೋಧಿಸಿದರು.

ದಿಲ್ಲಿ ಹೈಕೋರ್ಟಿನಲ್ಲಿ ವಕೀಲರಾಗಿ ದುಡಿಯುತ್ತಿದ್ದ ಒಹಿರಿ ಅವರ ಹೆಸರನ್ನು ನ್ಯಾಯಾಧೀಶರ ಹುದ್ದೆಗೆ ಸರಕಾರ ಶಿಫಾರಸು ಮಾಡಿದ ತರುವಾಯ  ಕಳೆದ ನ.17ರಂದು ರಾಷ್ಟ್ರಪತಿಗಳು ನೇಮಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next