Advertisement

2021 ಜುಲೈ-ಸೆಪ್ಟೆಂಬರ್‌ನಲ್ಲಿ 3.10 ಕೋಟಿ ನವೋದ್ಯೋಗ : ಕೇಂದ್ರ ಕಾರ್ಮಿಕ ಸಚಿವಾಲಯ ಮಾಹಿತಿ

08:42 PM Jan 10, 2022 | Team Udayavani |

ನವದೆಹಲಿ : ಕೇಂದ್ರ ಕಾರ್ಮಿಕ ಸಚಿವಾಲಯ ಬುಧವಾರ ತ್ತೈಮಾಸಿಕ ಉದ್ಯೋಗ ಸಮಾಚಾರವನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ 2021ರ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಒಟ್ಟು 3.10 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ.

Advertisement

ಅದೇ ವರ್ಷದ ಏಪ್ರಿಲ್‌ – ಜೂನ್‌ ಅವಧಿಗೆ ಹೋಲಿಸಿದರೆ ಇಲ್ಲಿ 2 ಲಕ್ಷ ರೂ. ಏರಿಕೆಯಾಗಿದೆ. ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್‌ ಯಾದವ್‌ ಈ ಮಾಹಿತಿಯನ್ನು ಸೋಮವಾರ ನೀಡಿದ್ದಾರೆ. ಈ ಬೆಳವಣಿಗೆ ದೇಶ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಸೂಚನೆಯಾಗಿದೆ.

ಆದ್ದರಿಂದಲೇ ಹೊಸ ಉದ್ಯೋಗಗಳ ಸಂಖ್ಯೆಯಲ್ಲಿ ಏರುಗತಿಯಾಗಿದೆ. ಮುಖ್ಯವಾಗಿ ಕೊರೊನಾ ಲಾಕ್‌ಡೌನ್‌ ತೆರವುಗೊಳಿಸಿದ್ದು ಬಹಳ ಪರಿಣಾಮ ಬೀರಿದೆ. ಉತ್ಪಾದನೆ, ನಿರ್ಮಾಣ, ವ್ಯಾಪಾರ, ಸಾರಿಗೆ, ಶಿಕ್ಷಣ, ಆರೋಗ್ಯ, ವಸತಿ, ರೆಸ್ಟೋರೆಂಟ್‌, ಐಟಿ/ಬಿಪಿಒ, ಆರ್ಥಿಕ ಸೇವಾ ವಲಯಗಳಲ್ಲಿ ನವೋದ್ಯೋಗ ಸೃಷ್ಟಿಯಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ; ಒಮಿಕ್ರಾನ್ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next