Advertisement

ಅತಿಥಿ ಶಿಕ್ಷಕರ ನೇಮಕಾತಿಗೆ ಆಹ್ವಾನ

09:44 AM Aug 03, 2019 | Nagendra Trasi |

1. ಅತಿಥಿ ಶಿಕ್ಷಕರ ನೇಮಕಾತಿಗೆ ಆಹ್ವಾನ
ರಾಜ್ಯದ ವಿವಿಧ ಜಿಲ್ಲೆಗಳ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ 22,150 ಅತಿಥಿ ಶಿಕ್ಷಕರ ನೇಮಕಾತಿಗೆ ಸರಕಾರ ಅಧಿಸೂಚನೆ ಹೊರಡಿಸಿದೆ. ಉಡುಪಿ ಜಿಲ್ಲೆಯಲ್ಲಿ 306 ಮತ್ತು ದ.ಕ. ಜಿಲ್ಲೆಯಲ್ಲಿ 739 ಹುದ್ದೆಗಳು ಖಾಲಿ ಇವೆ. ಆಸಕ್ತರು ಆಗಸ್ಟ್‌ 30ರ ಒಳಗೆ ಅರ್ಜಿಯನ್ನು primarydpi@gmail. ನಲ್ಲಿ ಸಲ್ಲಿಸಬಹುದು.

Advertisement

2. ರಾಜ್ಯ ಪೊಲೀಸ್‌ ಇಲಾಖೆ
ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್‌ ಸಬ್‌-ಇನ್‌ಸ್ಪೆಕ್ಟರ್‌ (ಪುರುಷ, ಮಹಿಳೆ) ಅರ್ಜಿ ಆಹ್ವಾನಿಸಿದ್ದು, 21 ವಯಸ್ಸಿನ ಮೇಲಿನವರು, ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ದೇಹದಾಡ್ಯ, ಲಿಖೀತ ಮತ್ತು ಮೌಖೀಕ ಪರೀಕ್ಷೆಗಳಿವೆ. ಆಗಸ್ಟ್‌ 5 ಕೊನೆಯ ದಿನಾಂಕವಾಗಿದೆ. ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. www.ksp.gov.in ನಲ್ಲಿ ಅರ್ಜಿ ಸಲ್ಲಿಸಬಹುದು.

3. ಸಶಸ್ತ್ರ ಮೀಸಲು ಪಡೆಯಲ್ಲಿ
ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳು ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮೀಸಲು ಪಡೆಯ 40 ಸಬ್‌ ಇನ್‌
ಸ್ಪೆಕ್ಟೆರ್‌ ಹುದ್ದೆಗಳು ಖಾಲಿ ಇದ್ದು, ವಿವಿಧ ವರ್ಗಗಳಿಗೆ ವಿವಿಧ ವಯೋಮಿತಿ ಇದ್ದು, ಯುಜಿಸಿ ಮಾನ್ಯತೆ ಪಡೆದ ವಿಶ್ವ ವಿ ದ್ಯಾನಿಲಯದಿಂದ ಯಾವುದೇ ಪದವಿ ಪಡೆದಿರಬೇಕು. ದೇಹದಾರ್ಢ್ಯ, ಲಿಖೀತಮತ್ತು ಮೌಖೀಕ ಪರೀಕ್ಷೆಗಳಿವೆ. ಅರ್ಜಿ ಸಲ್ಲಿ ಸಲು ಆಗಸ್ಟ್‌ 5 ಕೊನೆಯ ದಿನಾಂಕವಾಗಿದ್ದು, , www.ksp.gov.in ನಲ್ಲಿ ಅರ್ಜಿ ಸಲ್ಲಿಸಬೇಕು.

4 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ
ಬಾಗಲಕೋಟೆ ಮತ್ತು ಚಿತ್ರ ದುರ್ಗ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾ ನಿಸಲಾಗಿದ್ದು, ಆಗಸ್ಟ್‌ 3 ಕೊನೆಯ ದಿನಾಂಕವಾಗಿದೆ. www.anaganwadirecruit.kar.nic.in ನಲ್ಲಿ ಅರ್ಜಿ
ಸಲ್ಲಿಸಬೇಕು.

5.ಬೋಧಕ -ಬೋಧಕೇತರ ಹುದ್ದೆಗಳು
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವ್ಯಾಪ್ತಿಗೆ ಬರುವ ಸ್ವಾಯತ್ತ ಸಂಸ್ಥೆ ನವೋ ದಯ ಸಮಿತಿ ಯಲ್ಲಿ ಖಾಲಿ ಇರುವ ಬೋಧಕ -ಬೋಧಕೇತರ ಹುದ್ದೆ ಗಳಿಗೆ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಹತೆ ಮತ್ತು ವಯೋಮಿತಿ ಹುದ್ದೆಗಳಿಗೆ ಅನುಸಾರವಾಗಿ ಇದ್ದು, ಅರ್ಜಿಗಳನ್ನು
www.navodaya.gov.in ನಲ್ಲಿ ಸಲ್ಲಿಸಬೇಕು.

Advertisement

6. ಭಾಭಾ ಅಟಾಮಿಕ್‌ ರಿಸರ್ಚ್‌ ಸೆಂಟರ್‌
ಕಲ್ಪಾಕಂನಲ್ಲಿ ವಿವಿಧ ಹುದ್ದೆ ಸರಕಾರದ ಅಧೀನಕ್ಕೆ ಒಳಪಟ್ಟ ನ್ಯೂಕ್ಲಿಯರ್‌ ರಿಸೈಕಲ್‌ ಬೋರ್ಡ್‌ನ ಭಾಭಾ ಆಟೋಮಿಕ್‌ ರಿಸರ್ಚ್‌ ಸೆಂಟರ್‌ ಕಲ್ಪಾಕಂನಲ್ಲಿ ಫಿಟ್ಟರ್‌, ವೆಲ್ಡರ್‌,
ಎಲೆಕ್ಟ್ರಿಷಿಯನ್‌ ಸೇರಿದಂತೆ ತಾಂತ್ರಿಕ ವಿಭಾಗದಲ್ಲಿ ವಿವಿಧ 43 ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಿದೆ. ಐಟಿಐ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. www.barc.gov.in ನಲ್ಲಿ ಆಗಸ್ಟ್‌ 7 ಒಳಗೆ ಅರ್ಜಿ ಸಲ್ಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next