Advertisement
ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಶೆಡ್ ನಿರ್ಮಾಣ ಮತ್ತು ನರ್ಸರಿ ಅಭಿವೃದ್ಧಿಗೆ 2 ಲಕ್ಷ ರೂ. ಹಾಗೂ ಸಂಜೀವಿನಿ ಒಕ್ಕೂಟವೂ 50 ಸಾವಿರ ರೂ. ಸೇರಿದಂತೆ ಒಟ್ಟು 2.5 ಲಕ್ಷ ರೂ. ನಲ್ಲಿ ನರ್ಸರಿ ನಿರ್ಮಾಣ ಮಾಡಲಾಗಿದೆ. ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಸ್ವಚ್ಛ ಸಂಕೀರ್ಣ ಘಟಕಕ್ಕೆ ಕೋರಿಗದ್ದೆ ಎಂಬಲ್ಲಿ ಮೀಸಲಿರಿಸಿದ ಜಮೀನಿನ ಪಕ್ಕದಲ್ಲೇ ಸುಮಾರು 300 ಚ.ಮೀ. ಜಾಗದಲ್ಲಿ ವ್ಯವಸ್ಥಿತ ವಾಗಿ ನರ್ಸರಿ ಶೆಡ್ ಅನ್ನು ನಿರ್ಮಿಸಲಾಗಿದೆ.
Related Articles
Advertisement
ಡೇ-ಎನ್‌ಆರ್‌ಎಲ್‌ಎಂ ಯೋಜನೆ ಯಡಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸ್ವ-ಸಹಾಯ ಸಂಘದ ಮೂವರು ಸದಸ್ಯರಿಗೆ ಉದ್ಯೋಗ ಸೃಷ್ಟಿಯಾಗಿದೆ. ಬೀಡಿಕಟ್ಟುವ ಕಸುಬನ್ನು ಮಾಡುತ್ತಿದ್ದ ನೆಟ್ಟಣಿಗೆ ಮುಟ್ನೂರು ಗ್ರಾಮದ ರಮ್ಯಾ, ಸಾವಿತ್ರಿ ಹಾಗೂ ರಾಜೇಶ್ವರೀ ಅವರು ಈಗ ನರ್ಸರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.
84 ಸಾವಿರ ರೂ. ಕೂಲಿ ಆದಾಯ
ಬೀಜಗಳ ಬಿತ್ತನೆಗೆ ಬೇಕಾದ ಮಿಶ್ರಣ (ಮರಳು, ಮಣ್ಣು ಮತ್ತು ಗೊಬ್ಬರ) ವನ್ನು ತಯಾರಿಸುವುದು, ಬೀಜಗಳನ್ನು ಪೋಲಿತಿನ್ ಚೀಲಗಳಿಗೆ ತುಂಬುವುದು, ಕಳೆ ಕೀಳುವುದು, ನೀರು ಹಾಕುವುದು, ಗೊಬ್ಬರ ಹಾಕುವುದು ಹೀಗೆ ಗಿಡಗಳ ಪೋಷಣೆಯ ಕೆಲಸಗಳನ್ನು ಮಾಡುತ್ತಾರೆ. 10 ಸಾವಿರ ಗಿಡಗಳನ್ನು ಬೆಳೆಸಿದರೆ ಸುಮಾರು 84 ಸಾವಿರ ರೂ.ನಷ್ಟು ಕೂಲಿ ಹಣವನ್ನು ಈ ನರ್ಸರಿಯ ನಿರ್ವಹಣೆಯಿಂದ ಪಡೆಯಲಿದ್ದಾರೆ.
ವ್ಯವಸ್ಥಿತ ಶೆಡ್ ರಚನೆ
ಗ್ರೀನ್ ಶೇಡ್ ನೆಟ್ ಆವೃತ್ತ ನರ್ಸರಿ ಶೆಡ್ ನಿರ್ಮಿಸಿದ್ದು ಇದರಲ್ಲಿ ಸರಿಸುಮಾರು 50 ಸಾವಿರದಷ್ಟು ನರ್ಸರಿ ಗಿಡಗಳನ್ನು ಬೆಳೆಸಬಹುದಾಗಿದೆ. ನರೇಗಾ ಯೋಜನೆಯಡಿ ಸಿಎಲ್‌ಎಫ್ ನರ್ಸರಿ ಅಭಿವೃದ್ಧಿಪಡಿಸುವ ಮೂಲಕ ಸಂಜೀವಿನಿ ಒಕ್ಕೂಟಕ್ಕೆ ಸೊÌàದ್ಯೋಗದ ಮೂಲಕ ಜೀವನೋಪಾಯ ನಿರ್ವಹಣೆಗೆ ಅನುಕೂ ಲವಾಗುವಂತೆ ನರ್ಸರಿ ಘಟಕವನ್ನು ರಚಿಸಿಕೊಡಲಾಗುತ್ತದೆ. ಪ್ರತೀ ವರ್ಷ ಕನಿಷ್ಠ 10 ಸಾವಿರ ಗಿಡ ಗಳನ್ನು ಮಾರಾಟ ಮಾಡುವುದು ಕಡ್ಡಾಯವಾಗಿರುತ್ತದೆ. ಇದರ ಹೊರತಾಗಿ ಪ್ರತ್ಯೇಕವಾಗಿ ಸಂಜೀವಿನಿ ಒಕ್ಕೂಟದ ಸದಸ್ಯರು ವಿವಿಧ ತಳಿಯ ಮತ್ತಷ್ಟು ಗಿಡಗಳನ್ನು ಬೆಳೆಸಿ ಮಾರಾಟ ಮಾಡಬಹುದಾಗಿದೆ.
ನರೇಗಾ ಯೋಜನೆಯಡಿ ಸಾಮುದಾಯಿಕ, ವೈಯಕ್ತಿಕ ಕಾಮಗಾರಿಗಳ ಜತೆಗೆ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ವಿವಿಧ ರೀತಿಯಲ್ಲಿ ಉದ್ಯೋಗವನ್ನು ನೀಡುವ ಮೂಲಕ ಮಹಿಳೆಯರ ಭಾಗವಹಿಸುವಿಕೆಗೆ ಮತ್ತಷ್ಟು ಉತ್ತೇಜನವನ್ನು ನೀಡುತ್ತಿದೆ. – ನವೀನ್ ಕುಮಾರ್ ಭಂಡಾರಿ, ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಪುತ್ತೂರು
ನರೇಗಾ ಯೋಜನೆ ಮತ್ತು ಸಂಜೀವಿನಿ ಒಕ್ಕೂಟವು ನೀಡುವ ಬಂಡವಾಳದೊಂದಿಗೆ, ನರ್ಸರಿ ಅಭಿವೃದ್ಧಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಂಡು, ಅದರಲ್ಲಿ ಗಿಡ ಬೆಳೆಸಿ ಮಾರಾಟ ಮಾಡಿ ಒಕ್ಕೂಟಗಳು ಆರ್ಥಿಕ ಸ್ವಾವಲಂಬನೆ ಪಡೆದುಕೊಳ್ಳಬಹುದು. ವರ್ಷ ಪೂರ್ತಿ ಉದ್ಯೋಗವನ್ನು ಪಡೆಯಬಹುದಾಗಿದೆ. – ಶೈಲಜಾ ಭಟ್, ಸಹಾಯಕ ನಿರ್ದೇಶಕರು (ಗ್ರಾ.ಉ.), ತಾ.ಪಂ.