Advertisement

ನೂತನ ಜಯದೇವ ಆಸ್ಪತ್ರೆ ಉದ್ಘಾಟನೆಗೆ ಸಜ್ಜು

11:31 AM Oct 20, 2021 | Team Udayavani |

ಬೆಂಗಳೂರು: ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ 350 ಹಾಸಿಗೆಗಳುಳ್ಳ ನೂತನ ಆಸ್ಪತ್ರೆ ನಿರ್ಮಾ ಣವಾಗುತ್ತಿದ್ದು, ನವೆಂಬರ್‌ ತಿಂಗಳಲ್ಲಿ ಉದ್ಘಾಟನೆಗೆ ಸಜ್ಜಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆ ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ಹೃದ್ರೋಗ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ.

Advertisement

ಬದಲಾವಣೆ ಗೊಂಡ ಜೀವನ ಶೈಲಿ ಹಾಗೂ ಇನ್ನಿತರ ಕಾರಣ ಗಳಿಂದ ಹೃದಯ ಸಂಬಂಧಿ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರಿಂದಾಗಿ ಪ್ರತಿ ಐದು ನಿಮಿಷಕ್ಕೆ ಒಬ್ಬ ರೋಗಿಯಂತೆ ದಾಖಲಾಗು ತ್ತಿದ್ದಾರೆ. ಆಸ್ಪತ್ರೆಗೆ ಹಾಸಿಗೆಗಳ ಅವಶ್ಯಕತೆ ತುಂಬಾ ಇತ್ತು.

ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಸರಿ ಯಾದ ಸಮಯಕ್ಕೆ ಕೊಡುಗೆ ನೀಡಿರುವುದು ಲಕ್ಷಾಂತರ ರೋಗಿಗಳಿಗೆ ಅನುಕೂಲವಾಗಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್‌. ಮುಂಜುನಾಥ್‌ ತಿಳಿಸಿದ್ದಾರೆ.

ಇದನ್ನೂ ಓದಿ:- ಕೆಟ್ಟುನಿಂತ ಲಾರಿಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ಸಾವು

ನೂತನ ಆಸ್ಪತ್ರೆಯಲ್ಲಿ ಎರಡು ಕಾರ್ಡಿ ಯಾಕ್‌ ಕ್ಯಾಥ್‌ ಲ್ಯಾಬ್‌, ಎರಡು ಆಪರೇಷನ್‌ ಥಿಯೇಟರ್‌, ಒಂದು ಹೈಬ್ರಿಡ್‌ ಆಪರೇಷನ್‌ ಥಿಯೇಟರ್‌, 100 ಐಸಿಸಿಯು ಬೆಡ್‌ಗಳು, 250 ಜನರಲ್‌ ವಾರ್ಡ್‌ ಬೆಡ್‌ಗಳ ಸೌಲಭ್ಯ ಗಳನ್ನು ಒಳಗೊಂಡಿದೆ. ಜಯದೇವ ಆಸ್ಪತ್ರೆ ಯಲ್ಲಿ ನುರಿತ ಒಟ್ಟು 105 ಹೃದ್ರೋಗ ತಜ್ಞರು, 50 ಕಾರ್ಡಿಯೋಥೊರಾಸಿಕ್‌ ಶಸ್ತ್ರ ಚಿಕಿತ್ಸಕರು, 35 ಅರವಳಿಕೆ ತಜ್ಞರು ಮತ್ತು 6 ವ್ಯಾಸ್ಕೂéಲರ್‌ ಶಸ್ತ್ರಚಿಕಿತ್ಸಕರು ಇದ್ದಾರೆ ಎಂದು ಹೇಳಿದ್ದಾರೆ.

Advertisement

ಸಮಾಜದ ಎಲ್ಲಾ ವರ್ಗದ ಹೃದ್ರೋಗಿಗಳಿಗೆ ಕೈಗೆಟಕುವ ದರದಲ್ಲಿ, ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆಯನ್ನು ನೀಡಲಾಗುತ್ತದೆ. ಅರ್ಹ ಬಡವರಿಗೆ ಉಚಿತ ವಾಗಿ ಚಿಕಿತ್ಸೆ ದೊರೆಯುತ್ತದೆ. ವಾರ್ಷಿಕವಾಗಿ 40,000ಕ್ಕಿಂತ ಹೆಚ್ಚು ಕಾರ್ಡಿಯಾಕ್‌ ಕ್ಯಾಥ್‌ ಕ್ಯಾಬ್‌ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ ಆಂಜಿಯೋಗ್ರಾಂ, ಆಂಜಿಯೋ ಪ್ಲಾಸ್ಟಿ, ಸ್ಟಂಟ್‌, ಪೇಸ್‌ ಮೇಕರ್‌, ತೆರೆದ ಹೃದಯ ಶಸ್ತ್ರಚಿಕಿತ್ಸೆ ಸೇರಿ ಅನೇಕ ಚಿಕಿತ್ಸೆಗಳನ್ನು ನೀಡುತ್ತಿ ರುವುದು ದಾಖಲೆಯಾಗಿದೆ ಎಂದರು.

“ಜಯದೇವ ಆಸ್ಪತ್ರೆಯ ಇನ್ಫೋಸಿಸ್‌ ಸಂಕೀರ್ಣವೂ ದೇವರೇ ಕಳುಹಿಸಿದ ಕೊಡುಗೆ. ಇದನ್ನು ಸಿಮೆಂಟ್‌, ಉಕ್ಕಿನಿಂದ ನಿರ್ಮಿಸಿಲ್ಲ. ಬದಲಾಗಿ ಮಾನವೀಯತೆ ಮತ್ತು ಹೃದಯವಂತಿಕೆಯಿಂದ ನಿರ್ಮಿಸಲಾಗಿದೆ.” – ಡಾ. ಸಿ.ಎನ್‌. ಮಂಜುನಾಥ್‌, ನಿರ್ದೇಶಕ,ಜಯದೇವ ಆಸ್ಪತೆ

“ಬಡ ಹೃದ್ರೋಗಿಗಳಿಗೂ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಅತ್ಯುತ್ತಮ ಆಸ್ಪತ್ರೆ ಜಯದೇವ. ಇದನ್ನು ದೇಶದ ಅತಿದೊಡ್ಡ ಆಸ್ಪತ್ರೆಯನ್ನಾಗಿಸಲು ಕೈ ಜೋಡಿಸುತ್ತಿರುವ ಬಗ್ಗೆ ನಮಗೆ ಸಂತೋಷವಿದೆ.” –  ಸುಧಾಮೂರ್ತಿ, ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next