Advertisement
ನವರಾತ್ರಿ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಹಬ್ಬ. ರವಿವಾರದಿಂದಲೇ ನವರಾತ್ರಿ ರಂಗು ಕಳೆಗಟ್ಟಲಿದ್ದು, ದಸರಾ ವೈಭವಕ್ಕೆ ಇಡೀ ನಾಡು ಸಾಕ್ಷಿಯಾಗಲಿದೆ. ಮಂಗಳೂರಿನಲ್ಲಿಯೂ ಮಂಗಳೂರು ದಸರಾವನ್ನು ಕಣ್ತುಂಬಿಕೊಳ್ಳಲು ಜನ ಉತ್ಸುಕರಾಗಿದ್ದಾರೆ. ಈ ನಡುವೆ ನವರಾತ್ರಿಗೆಂದೇ ಖರೀದಿ ಭರಾಟೆಯೂ ಜೋರಾಗಿದೆ. ಈ ನವರಾತ್ರಿಗೆ ಹೊಸತನ್ನು ಮನೆ ತುಂಬಿಸುವ ಆಲೋಚನೆಯಲ್ಲಿ ಜನರಿದ್ದಾರೆ.
ಮಂಗಳೂರಿನ ಮಾರುಕಟ್ಟೆಗಳಲ್ಲಿ ಕಾರು, ಬೈಕ್ ಜತೆಗೆ ಮೊಬೈಲ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಜನ ವಿಚಾರಿಸುತ್ತಿರುವುದು ಹೆಚ್ಚುತ್ತಿದೆ. ಹೊಸ ಫೀಚರ್ಗಳನ್ನು ಒಳಗೊಂಡ ಮೊಬೈಲ್ ಫೋನ್‌ಗಳಿಗಾಗಿ ಜನರು ಹುಡುಕಾಡುತ್ತಿದ್ದಾರೆ. ಮಂಗಳೂರಿನ ಪ್ಲಾನೆಟ್ ಜಿ ಸಂಸ್ಥೆಯ ಸಿಬಂದಿ ಹೇಳುವ ಪ್ರಕಾರ, ವಿವೋ ವಿ17 ಪ್ರೊ ಮೊಬೈಲ್ ಫೋನ್ ಬಗ್ಗೆ ಯುವಕರು ಹೆಚ್ಚಾಗಿ ವಿಚಾರಿಸುತ್ತಾರಂತೆ. ಫ್ರಂಟ್ ಡ್ಯುವಲ್ ಕೆಮ ರಾ ಹೊಂದಿರುವ ಈ ಮೊಬೈಲ್‌ನಲ್ಲಿ ಮುಂಭಾಗದಲ್ಲಿ 32, 8 ಎಂಪಿ ಮತ್ತು ಹಿಂಭಾಗದಲ್ಲಿ 48, 13 ಮೆಗಾ ಫಿಕ್ಸೆಲ್ ಕೆಮ ರಾಗಳಿವೆ. ಉತ್ತಮ ಪ್ರೋಸೆಸರ್, ರ್ಯಾಮ್, ಸ್ಟೋರೇಜ್ ಸಾಮರ್ಥ್ಯ, ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಮೊಬೈಲ್ ಖರೀದಿಗೆ ಈಗಾಗಲೇ ಜನ ಮುಗಿಬೀಳುತ್ತಿದ್ದಾರೆ.
Related Articles
Advertisement
ಗೂಡುದೀಪ, ಲೈಟಿಂಗ್ಸ್‌ಗೂ ಬೇಡಿಕೆಇವೆಲ್ಲ ಕಾರು, ಬೈಕು, ಮೊಬೈಲ್‌ಗಳ ಮಾತಾದರೆ, ನವರಾತ್ರಿ, ದೀಪಾವಳಿಗೆ ಮನೆಯ ಸುತ್ತಮುತ್ತ ಲೈಟಿಂಗ್ಸ್ ಅಳವಡಿಕೆಗೂ ಪೇಟೆ ಮಂದಿ ಉತ್ಸುಕರಾಗಿದ್ದು, ಈಗಾಗಲೇ ವೈವಿಧ್ಯ ಲೈಟಿಂಗ್ಸ್‌ಗಳನ್ನು ಖರೀದಿಸುತ್ತಿದ್ದಾರೆ. ಈ ನಡುವೆ ವಿವಿಧ ಅಂಗಡಿಗಳ ಮುಂಭಾಗದಲ್ಲಿ ವೈವಿಧ್ಯ ಗೂಡುದೀಪಗಳ ಹೊಸ ಲೋಕವೇ ತೆರೆದುಕೊಂಡು ನವರಾತ್ರಿಯ ರಂಗನ್ನು ಹೆಚ್ಚಿಸಿದೆ. ವಿವಿಧ ಶೈಲಿಯಲ್ಲಿರುವ ಈ ಗೂಡುದೀಪಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಕಾರುಗಳಿಗೆ ಭರ್ಜರಿ ಡಿಸ್ಕೌಂಟ್
ದಸರಾ, ದೀಪಾವಳಿಗೆಂದೇ ಮಾರುತಿ, ಟಾಟಾ, ಹುಂಡೈ ಕಾರು ಸಂಸ್ಥೆಗಳಿಂದ ಭಾರೀ ಆಫರ್‌ಗಳನ್ನು ಪ್ರಕಟಿಸಲಾಗಿದ್ದು, 1.50 ಲಕ್ಷ ರೂ. ಗಳವರೆಗೂ ರಿಯಾಯಿತಿಯನ್ನು ಕಲ್ಪಿಸಲಾಗುತ್ತಿದೆ. ಆಲ್ಟೋ 800, ಆಲ್ಟೋ ಕೆ10, ಸ್ವಿಪ್ಟ್ ಡೀಸೆಲ್, ಸೆಲೆರಿಯೋ ಮುಂತಾದ ಕಾರುಗಳ ಮೇಲೆ ದರ ತಗ್ಗಿಸಲಾಗಿದೆ. ಈ ಬಗ್ಗೆ ಈಗಾಗಲೇ ಗ್ರಾಹಕರು ವಿಚಾರಿ ಸುತ್ತಿದ್ದು, ಕೆಲವರು ತಮ್ಮಿಷ್ಟದ ಕಾರುಗಳನ್ನು ಮುಂಗಡ ಬುಕ್ಕಿಂಗ್ ಮಾಡಿ ದ್ದಾರೆ ಎನ್ನುತ್ತಾರೆ ಮಂಗಳೂರಿನ ಮಾರುತಿ ಸುಝುಕಿ ಸಿಬಂದಿ. ರಿಯಾಯಿತಿಗಳ ಸುರಿಮಳೆ
ಎಲೆಕ್ಟ್ರಾನಿಕ್ ಅಂಗಡಿಗಳು, ಬಟ್ಟೆ ಅಂಗಡಿಗಳು, ಕಾರು, ಬೈಕ್, ಸ್ಮಾರ್ಟ್ ಫೋನ್ ಶೋರೂಂಗಳು ವಿವಿಧ ರಿಯಾಯಿತಿ ಮಾರಾಟಗಳನ್ನು ದಸರಾ ಹಬ್ಬಕ್ಕೆಂದೇ ಪ್ರಕಟಿಸಿವೆ. ಶೇ.5, ಶೇ. 10ರಷ್ಟು ಕ್ಯಾಶ್‌ಬ್ಯಾಕ್ ಆಫರ್‌ಗಳು, ಎಲೆಕ್ಟ್ರಾನಿಕ್ ಐಟಂಗಳ ಮೇಲೆ ಶೇ.5ರಿಂದ ಶೇ.25ರವರೆಗೆ ರಿಯಾಯಿತಿ, ಬಟ್ಟೆಗಳ ಮೇಲೆ ಶೇ. 50ರ ವರೆಗೂ ರಿಯಾಯಿತಿಗಳನ್ನು ಈಗಾಗಲೇ ಪ್ರಕಟಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಚಿನ್ನಾಭರಣದ ಬೆಲೆ ಸದ್ಯಕ್ಕೆ ಕೊಂಚ ಇಳಿಕೆಯಾಗಿದ್ದು, ಪ್ರತಿ ಗ್ರಾಂ ಮೇಲೆ 100 ರೂ. ಗಳನ್ನು ಇಳಿಸುವ ಮೂಲಕ ಹೆಚ್ಚಾದ ಬೆಲೆಯನ್ನು ತಗ್ಗಿಸಿ ಗ್ರಾಹಕರನ್ನು ಸೆಳೆಯಲು ಚಿನ್ನದಂಗಡಿಗಳು ಮುಂದಾಗಿವೆ. ಎಲ್ಲವೂ ನವರಾತ್ರಿಯ ನವರಂಗನ್ನು ಜನಸಾಮಾನ್ಯರೂ ಅನುಭವಿಸಬೇಕೆಂಬ ಕಾರಣದಿಂದ ಆಗಿದೆ. - ಧನ್ಯಾ ಬಾಳೆಕಜೆ