Advertisement
ತಾಂತ್ರಿಕವಾಗಿ ಭಾರೀ ಬದಲಾವಣೆ ಡಿ-ಮ್ಯಾಕ್ಸ್ ಪಿಕ್ ಅಪ್ ವಾಹನವನ್ನು ಆಧುನಿಕ ತಾಂತ್ರಿಕವಾಗಿ ಮಾರ್ಪಾಡು ಮಾಡಿದ್ದು, ಮುಂಭಾಗದ ವಿನ್ಯಾಸದಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ ಗ್ರಿಲ್ ಮತ್ತು ಕ್ರಾ$Âಶ್ ಬಂಪರ್ ವಿನ್ಯಾಸದಲ್ಲಿ ಬದಲಾವಣೆ ತಂದಿದೆ.
ಈ ವಾಹನ ಭಾರತದಲ್ಲಿ ಮಾತ್ರವಲ್ಲದೇ ಥೈಲ್ಯಾಂಡ್ ಸೇರಿದಂತೆ ಆಗ್ನೇಯ ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲೂ ಬಿಡುಗಡೆಯಾಗಲಿದ್ದು, ಈ ಹಿನ್ನಲೆ ಭಾರೀ ಬದಲಾವಣೆ ಪಡೆದಿರುವ ಹೊಸ ಪಿಕ್ ಅಪ್ ವಾಹನವು ಪ್ರಯಾಣಿಕರ ಸುರಕ್ಷೆತೆಗಾಗಿ ಗರಿಷ್ಠ ಮಟ್ಟದ ಸೆಫ್ಟಿ ಫೀಚರ್ ಹೊಂದಿದೆ. ಎರಡು ಮಾದರಿಯಲ್ಲಿ ಲಭ್ಯ
ಸದ್ಯ ಡಿ-ಮ್ಯಾಕ್ಸ್ ಪಿಕ್ ಅಪ್ ವಾಹನ ವಾಣಿಜ್ಯ ಬಳಕೆ ಮತ್ತು ವೈಯಕ್ತಿಕ ಬಳಕೆಗಾಗಿ ಉಪಯುಕ್ತವಾಗುವಂತಹ ಎರಡು ಮಾದರಿಯಲ್ಲಿ ಮಾರಾಟವಾಗುತ್ತಿದ್ದು, ಮುಂದಿನ ಆವೃತ್ತಿಯ ಮಾದರಿಯಲ್ಲೂ ಎರಡು ವಿಧಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ.ಜತೆಗೆ 9.0 ಇಂಚಿನ ಇನೊ³àಟೈನ್‌ಮೆಂಟ್, ನ್ಯಾವಿಗೇಶನ್, ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇಯೊಂದಿಗೆ ನ್ಯೂ ಡಿಜಿಟಲ್ ಮಲ್ಟಿ ಇನಾ#ರ್ಮೆಷನ್ ಡಿಸ್‌ಪ್ಲೇಯನ್ನು ನೀಡಲಾಗಿದೆ.
Related Articles
ಇಸುಝು ಸಂಸ್ಥೆಯು 1.9-ಲೀಟರ್ ಎಂಜಿನನ್ನು ಮಾತ್ರವೇ ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು , ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.19.99 ಲಕ್ಷ ಆಗಲಿದೆ.
Advertisement