Advertisement

ಶಿರಸಿ: ಸಂಭ್ರಮದಿಂದ ನಡೆದ ಶ್ರೀ ಲಕ್ಷ್ಮೀ ನರಸಿಂಹ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ

06:00 PM Feb 06, 2022 | Team Udayavani |

ಶಿರಸಿ: ತಾಲೂಕಿನ ಬರೂರಿನ ಯೋಗ ಭಂಗಿಯ ಶ್ರೀ ಲಕ್ಷ್ಮೀ ನರಸಿಂಹ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆಯು ಭಾನುವಾರ ಭಕ್ತಿ ಸಂಭ್ರಮದಿಂದ ನೆರವೇರಿತು.

Advertisement

ಕಳೆದ 9 ತಿಂಗಳಲ್ಲಿ ನಿರ್ಮಾಣವಾಗಿರುವ ನೂತನ ದೇವಾಲಯದಲ್ಲಿ ಲಕ್ಷ್ಮೀ ನರಸಿಂಹ ದೇವರ ನೂತನ ವಿಗ್ರಹವನ್ನು ವೈದಿಕ ಪ್ರಮುಖರ ನೇತೃತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ 9.26 ರ ಶುಭಲಗ್ನದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.

ಮಂಜಗುಣಿಯ ವೇದಮೂರ್ತಿ ಶ್ರೀನಿವಾಸ ಭಟ್, ವಿ.ಕುಮಾರ ಭಟ್, ವಿ.ಗಣಪತಿ ಭಟ್ ಕಿಬ್ಬಳ್ಳಿ, ವಿ.ಶ್ರೀನಿಧಿ ದೀಕ್ಷಿತ್ ಸೇರಿದಂತೆ 19 ವೈದಿಕರು ಯಗ್ನ, ಯಾಗಗಳನ್ನು ನೇರವೇರಿಸಿ ವಿಗ್ರಹ ಪ್ರತಿಷ್ಠಾಪಿಸಿದರು.

ನಂತರ ನೂತನ ವಿಗ್ರಹವನ್ನು ಅಲಂಕರಿಸಿ, ಆರತಿಯೊಂದಿಗೆ ಪೂಜೆ ಸಲ್ಲಿಸಲಾಯಿತು. ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು. ಇಡೀ ದೇವಾಲಯವನ್ನು ಹೂವಿನಿಂದ ಸಿಂಗಾರ ಮಾಡಲಾಗಿತ್ತು. ಶ್ರೀದೇವರ ಉತ್ಸವ ಮೂರ್ತಿಯ ಉತ್ಸವ  ಕೂಡ ನಡೆಯಿತು.

Advertisement

ನಂತರ   ದೇವಾಲಯ ನಿರ್ಮಿಸಲು ಸಹಕರಿಸಿದ ಪ್ರಮುಖರನ್ನು ಸಮ್ಮಾನಿಸಲಾಯಿತು. ಈ ವೇಳೆ ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ದೇವಾಲಯದ ಮೊಕ್ತೇಸರ ಮಂಜುನಾಥ ಭಟ್ ಬೆಳಖಂಡ, ಊರಿನ ಪ್ರಮುಖರಾದ ಜಿ.ಎ.ಹೆಗಡೆ ಕಾಗೇರಿ, ಎಮ್.ವಿ.ಜೋಶಿ ಕಾನಮೂಲೆ, ಪರಮೇಶ್ವರ ಹೆಗಡೆ, ಮಹೇಶ ಹೆಗಡೆ ನೇಗಾರ, ಬಿ.ಜಿ.ಹೆಗಡೆ, ಶಿಲ್ಪಿ ಜಿ.ಎಲ್.ಭಟ್ಟ ಇಡಗುಂಜಿ ಇತರರು ಇದ್ದರು.

ಈ ಮೊದಲು ಬರೂರಿನ ವಿಶೇಷ ಕಲೆಯಾದ ಸಾಂಪ್ರದಾಯಿಕ ಡೊಳ್ಳು ಕುಣಿತವನ್ನು ಪ್ರದರ್ಶನ ಮಾಡಲಾಯಿತು. ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು ನಾಳೆ ಮಂಗಲವಾಗಲಿದ್ದು, ಮಂಗಳವಾರದಿಂದ ಶ್ರೀದೇವರಿಗೆ ಪೂಜೆ ಸಲ್ಲಿಸಲು ಭಕ್ತಾದಿಗಳಿಗೆ ಅವಕಾಶ ನೀಡಲಾಗಿದೆ.

ಈ ಮೊದಲು ಬರೂರಿನ ವಿಶೇಷ ಕಲೆಯಾದ ಸಾಂಪ್ರದಾಯಿಕ ಡೊಳ್ಳು ಕುಣಿತವನ್ನು ಪ್ರದರ್ಶನ ಮಾಡಲಾಯಿತು. ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು ನಾಳೆ ಮಂಗಲವಾಗಲಿದ್ದು, ಮಂಗಳವಾರದಿಂದ ಶ್ರೀದೇವರಿಗೆ ಪೂಜೆ ಸಲ್ಲಿಸಲು ಭಕ್ತಾದಿಗಳಿಗೆ ಅವಕಾಶ ನೀಡಲಾಗಿದೆ.

ತಾಲೂಕಿನ ಬರೂರಿನ ಶ್ರೀ ಲಕ್ಷ್ಮೀ ನರಸಿಂಹ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆಯ ಮುನ್ನ ನಡೆದ  ಬರೂರಿನ ಯುವಕರ  ಸಾಂಪ್ರದಾಯಿಕ ಡೊಳ್ಳು ಕುಣಿತವನ್ನು ಪ್ರದರ್ಶನದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಹೆಜ್ಜೆ ಹಾಕಿದರು.

ಡೊಳ್ಳು ಕುಣಿತದ ತಂಡದವರೊಂದಿಗೆ ಹೆಜ್ಜೆ ಹಾಕಿ, ಗಿಲಿಗಚ್ಚಿಯನ್ನು ಬಾರಿಸಿ ಸಂಭ್ರಮಿಸಿದರು.

ಸ್ವತಃ ಕಾಗೇರಿ ಅವರ ಊರಿನ‌ ಸಮೀಪ ಇರುವ ಗ್ರಾಮ ದೇವರೂ ಆದ ಬರೂರು ಶ್ರೀಲಕ್ಷ್ಮೀ ನರಸಿಂಹ ದೇವರಸ್ಥಾನದ ಅಷ್ಟಬಂಧ, ನೂತನ ಆಲಯ ನಿರ್ಮಾಣ‌ ಸಮಿತಿಯ ಗೌರವಾಧ್ಯಕ್ಷರೂ  ಆಗಿದ್ದಾರೆ. ಊರ ಯುವ ತಂಡದ ಜೊತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಈಚೆಗಷ್ಟೇ ಕಾಗೇರಿ ಊರವರ ಜೊತೆ ಕ್ರಿಕೆಟ್ ಆಡಿದ್ದು, ಅಡಿಕೆ ಕೊನೆ ಹಿಡಿದದ್ದೂ ಸುದ್ದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next