Advertisement

ಶ್ರೀ ಚೌಡೇಶ್ವರಿ ಮಾತೆ ಎಲ್ಲರಿಗೂ ಶಕ್ತಿದಾತೆ

01:29 PM Feb 07, 2022 | Team Udayavani |

ತಿಪಟೂರು: ಹೇಗೆ ನಾವು ಮೊದಲು ತಾಯಿಯ ಮೂಲಕ ತಂದೆಯನ್ನು ಕಾಣುವೆವೋ, ಹಾಗೆಸಾಕಾರ ರೂಪದಲ್ಲಿರುವ ದೇವಿಯನ್ನು ಆರಾಧಿಸುವ ಮೂಲಕ ನಿರಾಕಾರ ರೂಪದಲ್ಲಿರುವಪರಬ್ರಹ್ಮ ಚೈತನ್ಯ ಶಕ್ತಿಯನ್ನು ಕಾಣಬೇಕು ಎಂದುಆದಿಚುಂಚನಗಿರಿ ಮಹಾಸಂಸ್ಥಾನ ಮಠದಪೀಠಾಧ್ಯಕ್ಷ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ಆದಿಚುಂಚನಗಿರಿ ಶಾಖಾಮಠ ದಸರೀಘಟದ ಚೌಡೇಶ್ವರಿ ದೇವಸ್ಥಾನದಲ್ಲಿ ಭಾನು ವಾರ ಏರ್ಪಡಿಸಿದ್ದ ದೇವಿಯವರ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಶೀರ್ವಚನ ನೀಡಿದ ಅವರು, ಕಳೆದ 60ವರ್ಷಗಳಿಂದ ದಸರೀಘಟ್ಟ ಗ್ರಾಮದಲ್ಲಿ ದೇವಿಯುತನ್ನ ಅಭಾವ ರೂಪ ತಳೆದು ಎಲ್ಲರಿಗೂ ದರುಶನನೀಡುತ್ತಿದ್ದಾಳೆ. ಯಾವ ರೂಪದಲ್ಲಿ ನಾವುತಾಯಿಯನ್ನು ನೋಡುತ್ತಿದ್ದೆವೋ ಅದೇ ರೂಪದಲ್ಲಿ ಮತ್ತೂಮ್ಮೆ ದೇವಿಯು ನಮ್ಮ ದೃಷ್ಟಿಗೆ ಗೋಚರಿಸುವಂತ ಭೌತಿಕವಾದ ರೂಪದ ಮರುಹುಟ್ಟಿನ ಕಾರ್ಯಕ್ರಮ ಇದಾಗಿದೆ ಎಂದರು.

ತಾಯಿಗೂ ಮರುಹುಟ್ಟು ಇದೆ: ಎಲ್ಲರಿಗೂ ಕೂಡ ಶಕ್ತಿದಾತೆಯಾಗಿರುವ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣೀಭೂತರಾಗಿರುವ ತಾಯಿಗೂ ಕೂಡಮರುಹುಟ್ಟು ಇದೆ. ಯಾವ ಭಕ್ತರಿಗೆ ತನ್ನ ನಿಜ ರೂಪ ಕಾಣಬೇಕೆಂದು ತಾಯಿ ಬಯಸುತ್ತಾಳೆಯೋಅಂತಹ ದೃಷ್ಟಿಗೆ ಮಾತ್ರ ಗೋಚರಿಸುವಳು. ಪಂಚಭೂತ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಇವುಗಳಿಗೆ ನಿಲುಕುವ ರೀತಿಯ ಜಗತ್ತನ್ನು ಹಂಬಲಿಸಿ ನಾವು ಜೀವನ ಮಾಡುತ್ತಿದ್ದೇವೆ. ಇವುಗಳಿಂದಅನಂತ ಹಾಗೂ ಅಗಣ್ಯವಾಗಿರುವ ದೇವಿಶಕ್ತಿಶಾಂತವಾಗಿರುವ ಈ ದಿವ್ಯಚಕ್ಷುಗಳಿಗೆ ಕಾಣುವುದಿಲ್ಲ. ಪಂಚೇಂದ್ರಿಯ ಹತೋಟಿಯಲ್ಲಿಟ್ಟುಕೊಂಡು ಅಂತಃಕರಣಗಳಿಗೆ ಗೋಚರಿಸುವ ರೀತಿಯಲ್ಲಿಯಾರು ದಿವ್ಯ ಸಂಕಲ್ಪ ಮಾಡುತ್ತಾರೆಯೋಅವರಿಗೆ ಮಾತ್ರ ತಾಯಿಯು ಗೋಚರಿಸುವಳು ಎಂದು ತಿಳಿಸಿದರು.

ದಸರೀಘಟ್ಟ ಕ್ಷೇತ್ರದ ಚಂದ್ರಶೇಖರನಾಥ ಸ್ವಾಮೀಜಿ, ಇತರೆ ಶಾಖಾಮಠದ ಸ್ವಾಮೀಜಿ, ಮಾಜಿ ಶಾಸಕ ಕೆ.ಷಡಕ್ಷರಿ, ಮಾಜಿ ಸಂಸದಮುದ್ದಹನುಮೇಗೌಡ ಹಾಗೂ ಇನ್ನಿತರ ಗಣ್ಯರು ಇದ್ದರು. ಚೌಡೇಶ್ವರಿ ದೇವಸ್ಥಾನದಲ್ಲಿದೇವಿಯವರ ನೂತನ ವಿಗ್ರಹ ಪ್ರತಿಷ್ಠಾಪನಾಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು

ದೇವಿ ಬರಹ ನಿಜ ಆಗಿದೆ: ಸ್ವಾಮೀಜಿ :  ದಸರೀಘಟ್ಟದ ದೇವಿಯು ಬರೆಯುವ ಬರಹ ಎಷ್ಟು ನಿಜವಾಗಿರುತ್ತದೆ ಎಂದು ವಿವರಿಸಿದ ಶ್ರೀಗಳು ತಾವು ಸನ್ಯಾಸ ದೀಕ್ಷೆಯನ್ನು ಸ್ವೀಕರಿಸುವುದಕ್ಕೂ ಮೊದಲು ಕ್ಷೇತ್ರದ ದೇವಿಯನ್ನು ನನಗೆ ಈ ವರ್ಷ ದೀಕ್ಷೆ ಸಿಗುತ್ತದೆಯೇ ಎಂದು ಮನಸ್ಸಿನಲ್ಲೇ ಕೇಳಿದಾಗ ದೇವಿಯು ಇಲ್ಲ. ಈ ವರ್ಷ ದೀಕ್ಷೆ ಸಿಗುವುದಿಲ್ಲ ಎಂದು ಬರೆಯಿತು. ದೇವಿಯ ಬರಹ ಸುಳ್ಳು ಮಾಡಬೇಕೆಂದು ಎಷ್ಟೇ ಪ್ರಯತ್ನಪಟ್ಟು ದೀಕ್ಷೆಗೆ ವ್ಯವಸ್ಥೆಮಾಡಿದರೂ ಅದು ಸಾಧ್ಯವಾಗಲಿಲ್ಲ. ಒಂದು ವರ್ಷದ ನಂತರ ಇನ್ನೊಮ್ಮೆ ದೇವಿ ದರುಶನ ಪಡೆದುಇದೇ ಪ್ರಶ್ನೆ ಕೇಳಿದಾಗ ಆಗುತ್ತದೆ ಎಂದು ಬರೆಯಿತು. ಅದರಂತೆ ಆ ವರ್ಷ ಸನ್ಯಾಸ ದೀಕ್ಷೆ ಪಡೆದೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ತಮ್ಮ ಹಳೆಯ ನೆನಪನ್ನು ಬಿಚ್ಚಿಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next