Advertisement

ಸಂಸದರಿಗೆ ಹೊಸ ವಸತಿ ಸಮುಚ್ಚಯ

12:03 AM Aug 20, 2019 | mahesh |

ಹೊಸದಿಲ್ಲಿ: ಲೋಕಸಭೆಗೆ ಇದೇ ಮೊದಲ ಬಾರಿಗೆ ಚುನಾಯಿತರಾಗಿರುವ ಸಂಸದರಿಗಾಗಿ ದಿಲ್ಲಿಯ ಲ್ಯೂಟೆನ್ಸ್‌ ಪ್ರಾಂತ್ಯದಲ್ಲಿ ನಿರ್ಮಿಸಲಾಗಿರುವ 36 ಅತ್ಯಾಧುನಿಕ ಸರಕಾರಿ ಫ್ಲ್ಯಾಟುಗಳನ್ನು ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಲೋಕಾರ್ಪಣೆಗೊಳಿಸಿದರು.

Advertisement

ದಶಕಗಳಷ್ಟು ಹಳೆಯದಾದ ಸಂಸದರ ಸರಕಾರಿ ನಿವಾಸಗಳನ್ನು ಕೆಡವಿ, ಆಧುನಿಕ ಸೌಲಭ್ಯಗಳುಳ್ಳ ಹೊಸ ಫ್ಲ್ಯಾಟ್‌ಗಳನ್ನು ಕಟ್ಟುವ ಕಾಮಗಾರಿಗೆ 2017ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಕೇಂದ್ರ ಲೋಕೋಪ ಯೋಗಿ ಇಲಾಖೆಯಡಿ, ಮೊದಲ ಹಂತದಲ್ಲಿ 36 ನಿವಾಸಗಳನ್ನು ನಿರ್ಮಿಸಲು 92 ಕೋಟಿ ರೂ. ಮಂಜೂರು ಮಾಡಲಾಗಿತ್ತು. 80 ಕೋಟಿ ರೂ.ಗಳಲ್ಲೇ ಈ ಮನೆಗಳನ್ನು ನಿರ್ಮಿಸಲಾಗಿದೆ.

ರಾಷ್ಟ್ರಪತಿ ಭವನಕ್ಕೆ ಅಭಿಮುಖವಾಗಿರುವ ಈ ಫ್ಲ್ಯಾಟ್‌ಗಳಿರುವ ಪ್ರತಿ ಸಂಕೀರ್ಣದಲ್ಲಿ, ಸೋಲಾರ್‌ ಪ್ಯಾನೆಲ್‌ಗ‌ಳು, ಎಲ್‌ಇಡಿ ದೀಪ ಗಳು, ಪ್ರತಿ ಫ್ಲ್ಯಾಟ್‌ಗೆ ಎರಡು ಕಾರುಗಳ ಲೆಕ್ಕಾ ಚಾರದಲ್ಲಿ ಬೇಸ್‌ಮೆಂಟ್‌ ಪಾರ್ಕಿಂಗ್‌ ಸೇರಿ ದಂತೆ ಎಲ್ಲ ಆಧುನಿಕ ಸೌಲಭ್ಯಗಳಿವೆ.

ಮನೆ ತೊರೆಯದ ಮಾಜಿ ಎಂಪಿಗಳಿಗೆ ನೀರಿಲ್ಲ!: ಅವಧಿ ಮುಗಿದಿದ್ದರೂ ತಮಗೆ ನೀಡ ಲಾಗಿರುವ ಸರಕಾರಿ ಬಂಗಲೆಗಳನ್ನು ಬಿಡದಿ ರುವ 200ಕ್ಕೂ ಹೆಚ್ಚು ಮಾಜಿ ಸಂಸದರಿಗೆ ಚಾಟಿ ಬೀಸಿರುವ ಕೇಂದ್ರ ಸರಕಾರ, ಇನ್ನು 7 ದಿನಗಳ ಒಳಗಾಗಿ ಬಂಗಲೆಗಳನ್ನು ಖಾಲಿ ಮಾಡುವಂತೆ ತಾಕೀತು ಮಾಡಿದೆ. ಇಲ್ಲವಾದರೆ, ಬಂಗಲೆಗೆ ನೀಡಲಾಗಿ ರುವ ನೀರು, ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿ ಸಿದೆ. ನಿಯಮ ಗಳ ಪ್ರಕಾರ, 16ನೇ ಲೋಕಸಭೆ ವಿಸರ್ಜನೆಗೊಂಡ ಒಂದು ತಿಂಗಳೊಳಗೆ ಬಂಗಲೆ ಗಳನ್ನು ತೊರೆಯ ಬೇಕು. ಅದಕ್ಕೆ ಮಾಜಿ ಸಂಸ ದರು ಮನಸ್ಸು ಮಾಡಿಲ್ಲ. ಇದರಿಂದಾಗಿ, ಹೊಸ ಸಂಸದರಿಗೆ ನಿವಾಸ ನೀಡುವುದು ಕಷ್ಟ ವಾಗಿದೆ. ಹಾಗಾಗಿಯೇ, ಕೇಂದ್ರದ ಮಾಜಿ ಸಂಸದರನ್ನು ತೆರವುಗೊಳಿಸಲು ಕೇಂದ್ರ ಬಿಗಿಕ್ರಮ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next