Advertisement
ಚಿತ್ರರಂಗ ಒಂದು ಸಿನಿಮಾದ ಸೋಲು-ಗೆಲುವನ್ನು ಹೀರೋ ಮೂಲಕವೂ ನೋಡುತ್ತದೆ. ಸಿನಿಮಾ ಸೋತರೆ, ಅದರಲ್ಲೂ ಹೊಸ ನಾಯಕ ನಟನ ಸಿನಿಮಾ ಸೋತರೆ, ಆತ ಮತ್ತೂಂದು ಅವಕಾಶಕ್ಕಾಗಿ ಗಾಂಧಿನಗರ ತುಂಬಾ ಅಲೆದಾಡಬೇಕಾಗುತ್ತದೆ. ಆತನನ್ನು ಕರೆದು ಸಿನಿಮಾ ಮಾಡುವವರ ಸಂಖ್ಯೆಯೂ ಕಡಿಮೆಯೇ. ಆದರೆ, ನಾಯಕಿಯರ ವಿಷಯದಲ್ಲಿ ಆ ದೃಷ್ಟಿಕೋನ ಬದಲಾಗುತ್ತದೆ. ಒಂದು ಸಿನಿಮಾದಲ್ಲಿ ನಾಯಕಿಯರ ಪರ್‌ಫಾರ್ಮೆನ್ಸ್ ಚೆನ್ನಾಗಿದೆ ಎಂಬ ಮಾತು ಕೇಳಿಬಂದರೆ ಆ ನಾಯಕಿಗೆ ಬೇಡಿಕೆ ಬರುತ್ತದೆ.
“ಜಿಲ್ಕಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕರಾವಳಿ ಪ್ರತಿಭೆ ಪ್ರಿಯಾ ಹೆಗ್ಡೆ ತಮ್ಮ ಮೊದಲ ಕನ್ನಡ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಒಂದಷ್ಟು ಶಾರ್ಟ್‌ಫಿಲಂಸ್, ಮ್ಯೂಸಿಕ್ ಆಲ್ಬಂಗಳಲ್ಲಿ ಪ್ರಿಯಾ ಹೆಗ್ಡೆ ಅಭಿನಯಿಸಿದ ನಂತರ, “ದಗಲ್‌ಬಾಜಿಲು’ ತುಳು ಚಿತ್ರದಲ್ಲಿ ಅಭಿನಯಿಸಿದ ಅನುಭವದೊಂದಿಗೆ “ಜಿಲ್ಕ’ದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಪ್ರಿಯಾ ಕೂಡಾ ಬೆಳಕಿಗೆ ಬಂದಿದ್ದಾರೆ.
Related Articles
ಇತ್ತೀಚೆಗೆ ತೆರೆಕಂಡು ತುಂಬಾನೇ ಮೆಚ್ಚುಗೆ ಪಡೆದ ಚಿತ್ರಗಳಲ್ಲಿ “ದಿಯಾ’ ಕೂಡಾ ಒಂದು. ಈ ಚಿತ್ರದ ಟೈಟಲ್ ರೋಲ್‌ನಲ್ಲಿ ಕಾಣಿಸಿಕೊಂಡ ಖುಷಿಗೆ ಈಗ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಕೆ ಪಾತ್ರವನ್ನು ಜೀವಿಸಿದ ರೀತಿಯನ್ನು ಶ್ಲಾ ಸುತ್ತಿದ್ದಾರೆ. ಈ ಮೂಲಕ ಖುಷಿ ಖುಷಿಯಾಗಿದ್ದಾರೆ. ಹೊಸ ಹೊಸ ಅವಕಾಶಗಳು ಆಕೆಗೆ ಹುಡುಕಿಕೊಂಡು ಬರುತ್ತಿವೆ. ಆದರೆ ಖುಷಿ, “ದಿಯಾ’ ಪಾತ್ರವನ್ನು ಮೀರಿಸುವ ಪಾತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.
Advertisement
ಸಾರಾಮಂಜು ಮಾಂಡವ್ಯ ನಿರ್ದೇಶನ, ನಟನೆಯ “ಭರತ ಬಾಹುಬಲಿ’ ಚಿತ್ರದ ಮೂಲಕ ಚಿತ್ರದ ಎಂಟ್ರಿ ಕೊಟ್ಟ ನಾಯಕಿ ಸಾರಾ. ಮಾಡೆಲಿಂಗ್ ಕ್ಷೇತ್ರದಿಂದ ಬಂದ ಸಾರಾ ಕೂಡಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುವ ಮೂಲಕ ಬಾಲ್ಯದಿಂದಲೇ ಫ್ಯಾಷನ್, ಮಾಡೆಲಿಂಗ್ ಕ್ಷೇತ್ರದ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ ಸಾರಾ ಬಳಿಕ ಅದನ್ನೇ ಕೆರಿಯರ್ ಆಗಿ ಆಯ್ಕೆ ಮಾಡಿಕೊಂಡ ಹುಡುಗಿ. ಮಾಡೆಲಿಂಗ್ ಜೊತೆಗೆ ಸಿನಿಮಾದ ಕಡೆ ಆಸಕ್ತಿ ಇದ್ದ ಸಾರಾಗೆ “ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವ ಮೂಲಕ ಸಾರಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇಷ್ಟೇ ಅಲ್ಲಾ, ಇನ್ನೂ ಸಾಕಷ್ಟು ನಟಿಯರು ಮೊದಲ ಚಿತ್ರದಲ್ಲೇ ಮಿಂಚಿದ್ದಾರೆ. “ಮಾಯಾಬಜಾರ್’ ಚಿತ್ರದಲ್ಲಿ ಚೈತ್ರಾ, ಬಿಲ್‌ಗೇಟ್ಸ್ ರೋಜಾ, ಆರಾಧ್ಯ ಇವರೆಲ್ಲರೂ ಭರವಸೆ ಮೂಡಿಸಿದ್ದಾರೆ. ಇದು ಆರಂಭದ ಎರಡು ತಿಂಗಳಲ್ಲಿ ಭರವಸೆ ಮೂಡಿಸಿದ ನಟಿಮಣಿಯರಾದರೆ, ಇನ್ನೊಂದಿಷ್ಟು ಮಂದಿ ಬಿಡುಗಡೆಯ ಹಾದಿಯಲ್ಲಿದ್ದಾರೆ. ಈ ಮೂಲಕ ಈ ವರ್ಷವೂ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಹೊಸ ನಾಯಕಿಯರು ಸಿಗುವುದರಲ್ಲಿ ಎರಡು ಮಾತಿಲ್ಲ. ಗ್ರೀಷ್ಮಾ
ವಿಜಯ ರಾಘವೇಂದ್ರ ಅಭಿನಯದ “ಮಾಲ್ಗುಡಿ ಡೇಸ್’ ಚಿತ್ರದ ಮೂಲಕ ಬೆಳಕಿಗೆ ಬಂದ ಹುಡುಗಿ ಗ್ರೀಷ್ಮಾ. ಈ ಚಿತ್ರದಲ್ಲಿ ಗ್ರೀಷ್ಮಾಗೆ ಹೆಚ್ಚೇನು ಅವಕಾಶವಿರಲಿಲ್ಲ. ಆದರೆ, ಸಿಕ್ಕ ಅವಕಾಶವನ್ನು ಗ್ರೀಷ್ಮಾ ಚೆನ್ನಾಗಿ ಬಳಸಿಕೊಂಡರು. ಎಲ್ಲೆಲ್ಲಿ ಸ್ಕೋರ್ ಮಾಡಬಹುದೋ ಅಲ್ಲೆಲ್ಲಾ ಚೆನ್ನಾಗಿ ಸ್ಕೋರ್ ಮಾಡುವ ಮೂಲಕ ಭರವಸೆ ಮೂಡಿಸಿದ್ದು ಸುಳ್ಳಲ್ಲ. ರವಿಪ್ರಕಾಶ್ ರೈ