Advertisement

ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ, ಒಟಿಟಿ ಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

03:36 PM Feb 25, 2021 | Team Udayavani |

ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳು, ಒಟಿಟಿ ಪ್ಲಾಟ್ ಫಾರ್ಮ್, ಡಿಜಿಟಲ್ ಮಾಧ್ಯಮಗಳಿಗೆ ಗುರುವಾರ ಸರ್ಕಾರ ಹೊಸ ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ.

Advertisement

ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿಗಳನ್ನು ಹಂಚಿಕೊಂಡರು. ಹೊಸ ಮಾರ್ಗಸೂಚಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಸಮೂಹ ಸಂವಹನ ಮಾಧ್ಯಮಗಳ ವಿಷಯದ ಮೇಲೆ ನಿಗಾ ಇಡುತ್ತವೆ ಎಂದರು.

ದೇಶದಲ್ಲಿ ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ಎತ್ತಿ ತೋರಿಸಿದ ಸಚಿವರು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಬಳಕೆದಾರರ ಉತ್ತಮ ಪರಿಶೀಲನೆಗಾಗಿ ಯಾಂತ್ರಿಕ ವ್ಯವಸ್ಥೆಯನ್ನು ಪರಿಚಯಿಸಬೇಕೆಂದು ಸರ್ಕಾರ ಬಯಸಿದೆ ಎಂದು ಹೇಳಿದರು.

ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೂಚ್ಯಂಕ ಮತ್ತೆ 51 ಸಾವಿರದ ಗಡಿಗೆ, ನಿಫ್ಟಿ 15,000

ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಭಾರತ ಸ್ವಾಗತಿಸುತ್ತದೆ. ಆದರೆ ಅವುಗಳು ದ್ವಂದ ನಿಲುವು ತಾಳಬಾರದು. ಕ್ಯಾಪಿಟಲ್ ಹಿಲ್ ಮೇಲೆ ದಾಳಿಯಾದಾಗ ಸಾಮಾಜಿಕ ಜಾಲತಾಣಗಳು ಪೊಲೀಸರ ಕ್ರಮವನ್ನು ಸಮರ್ಥಿಸುತ್ತದೆ. ಆದರೆ ಕೆಂಪು ಕೋಟೆ ದಾಳಿಯಾದಾಗ ಅವುಗಳು ಬೇರೆಯದೇ ನಿಲುವು ಪ್ರದರ್ಶಿಸುತ್ತದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

Advertisement

ಸಾಮಾಜಿಕ ಜಾಲತಾಣಗಳ್ಲಲಿ ಮಹಿಳೆಯರ ಘನತೆಗೆ ವಿರುದ್ಧವಾದ ಯಾವುದೇ ಮಾಹಿತಿ, ಅಸಭ್ಯ ಚಿತ್ರಗಳು ಇತ್ಯಾದಿ ಕಂಡು ಬಂದರೆ ಅಂತಹುದನ್ನು ದೂರು ನೀಡಿದ 24 ಗಂಟೆಯೊಳಗೆ ಅಳಿಸಿ ಹಾಕಬೇಕು. ಇದು ಮಹಿಳೆಯರ ಘನತೆ ಕಾಪಾಡುವ ನಿಟ್ಟಿನಲ್ಲಿ ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: PUBG ಮೊಬೈಲ್ 2 ಭಾರತದಲ್ಲಿ ಮುಂದಿನ ವಾರ ಬಿಡುಗಡೆ..!?

ಕುಂದುಕೊರತೆ ನಿರ್ವಹಣೆಗಾಗಿ ಒಬ್ಬ ಅಧಿಕಾರಿಯನ್ನು ( ಭಾರತೀಯ) ನೇಮಿಸಬೇಕು ಎಂದು ಸರ್ಕಾರ ಭಾರತದಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಜಾಲತಾಣಗಳಿಗೆ ಸೂಚನೆ ನೀಡಿದೆ. ಸಾಮಾಜಿಕ ಜಾಲತಾಣಗಳು ಪ್ರತಿ ತಿಂಗಳು ಸ್ವೀಕರಿಸಿದ ದೂರುಗಳು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಬೇಕು ಎಂದರು.

ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ನಾವು ಮೂರು ಸ್ಥರಗಳ ವ್ಯವಸ್ಥೆಯನ್ನು ಹೊಂದಲು ನಿರ್ಧರಿಸಿದ್ದೇವೆ. ಒಟಿಟಿ ಮತ್ತು ಡಿಜಿಟಲ್ ನ್ಯೂಸ್ ಮಾಧ್ಯಮಗಳು ಅವುಗಳ ವಿವರಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಅವುಗಳಿಗೆ ನಾವು ನೋಂದಣಿಯನ್ನು ಕಡ್ಡಾಯಗೊಳಿಸುತ್ತಿಲ್ಲ, ಆದರೆ ನಾವು ಮಾಹಿತಿಯನ್ನು ಬಯಸುತ್ತಿದ್ದೇವೆ” ಎಂದು ಜಾವಡೇಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next