Advertisement

ಹೊಸ ಮಿಡತೆ ಪ್ರಬೇಧಕ್ಕೆ ಕೇರಳ ಸಂಶೋಧಕನ ಹೆಸರು

11:00 AM Aug 08, 2020 | mahesh |

ಕಲ್ಲಿಕೋಟೆ: ಶ್ರೀಲಂಕಾದ ಸಿನ್ಹರಾಜಾ ಎಂಬ ಅರಣ್ಯದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಟ್ವಿಗ್‌ಹಾಪರ್‌ ಜಾತಿಗೆ ಸೇರಿದ ಹೊಸ ಮಿಡತೆಗೆ ಕೇರಳದ ಸಂರಕ್ಷಣಾ ಜೀವಶಾಸ್ತ್ರಜ್ಞರಾದ ಧನೀಶ್‌ ಭಾಸ್ಕರ್‌ ಅವರ ಹೆಸರನ್ನು ಇಟ್ಟಿರುವುದಾಗಿ, ಮಂಗೋಲಿಯಾದ ಸಂಶೋಧನಾ ನಿಯತಕಾಲಿಕೆಯಾದ ಝೂಟಾಕ್ಸಾ ಪ್ರಕಟಿಸಿದೆ.

Advertisement

ಶ್ರೀಲಂಕಾದ ಅರಣ್ಯಗಳಲ್ಲಿ ಸುಮಾರು ವರ್ಷಗಳಿಂದ ಹೊಸ ಜೀವಿಗಳ ಹುಡುಕಾಟದಲ್ಲಿದ್ದ ಜರ್ಮನಿ ಹಾಗೂ ಕ್ರೊವೇಷಿಯಾದ ಜೀವಶಾಸ್ತ್ರಜ್ಞರು ಈ ಹೊಸ ಮಿಡತೆಯನ್ನು ಪತ್ತೆ ಹಚ್ಚಿದ್ದರು. ಇಂಥದ್ದೊಂದು ಹೊಸ ಅನ್ವೇಷಣೆ ಜರುಗಿದ್ದು 116 ವರ್ಷಗಳ ನಂತರ. ಈ ಮಿಡತೆಯ ಮೇಲೆ ಹಲವಾರು ಅಧ್ಯಯನಗಳನ್ನು ನಡೆಸಿದ ನಂತರ ಇದಕ್ಕೊಂದು ಹೆಸರಿಡಲು ಜೀವಶಾಸ್ತ್ರಜ್ಞರ ಚಿಂತಕರ ಚಾವಡಿಯಲ್ಲಿ ಚರ್ಚೆ ನಡೆಸಲಾಗಿತ್ತು. ಆ ವೇಳೆ, ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಯ ಸಂರಕ್ಷಣೆಗಾಗಿ ಹಗಲಿರುಳೂ ಪರಿಶ್ರಮಿಸುತ್ತಿರುವ ಕೇರಳದ ಧನೀಶ್‌ ಭಾಸ್ಕರ್‌ ಅವರ ಗೌರವಾರ್ಥವಾಗಿ ಈ ಮಿಡತೆಗೆ ಅವರ ಹೆಸರನ್ನಿಡಲು ಅನೇಕ ವಿದ್ವಾಂಸರು ಸೂಚಿಸಿದರು. ಹಾಗಾಗಿ, ಹೊಸ ಮಿಡತೆಗೆ ಅವರ ಹೆಸರನ್ನೇ ಇಡಲಾಗಿದೆ ಎಂದು ನಿಯತಕಾಲಿಕೆಯಲ್ಲಿನ ಲೇಖನದಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next