Advertisement

ಗ್ರಾಪಂಗೆ ಶಕ್ತಿ ತುಂಬಿದ್ದು ರಾಜೀವ ಗಾಂಧಿ: ಪಾಟೀಲ

08:30 AM Jun 25, 2020 | Suhan S |

ವಿಜಯಪುರ: ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್‌ ಧ್ಯೇಯದಂತೆ ಸ್ಥಳೀಯವಾಗಿ ಆಡಳಿತ ಯಂತ್ರ ಬಲಗೊಳ್ಳಲು ಗ್ರಾಪಂಗಳಿಗೆ ಹೆಚ್ಚಿನ ಶಕ್ತಿ ತುಂಬಿದವರು ರಾಜೀವ ಗಾಂಧಿ ಎಂದು ಮಾಜಿ ಸಚಿವ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.

Advertisement

ಸಾರವಾಡ ಗ್ರಾಮದಲ್ಲಿ ನೂತನ ಗ್ರಾಪಂ ಕಟ್ಟಡ, ರಾಜೀವಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಇಡೀ ದೇಶದಲ್ಲಿಯೇ ಕರ್ನಾಟಕ ಮಾದರಿಯಾಗಿದೆ. ಸೋನಿಯಾ ಗಾಂಧಿಯವರು ಬೇಲೂರು ಘೋಷಣೆಯಂತೆ ಮಹಿಳೆಯರಿಗೆ ಅತೀ ಹೆಚ್ಚಿನ ಪ್ರಾತಿನಿಧ್ಯ ನೀಡಿ ಸ್ಥಳೀಯ ಆಡಳಿತದಲ್ಲಿ ಲಿಂಗ ತಾರತಮ್ಯ ನಿವಾರಿಸಲಾಗಿದೆ. ಆ ಮೂಲಕ ಮಹಿಳಾ ಆಡಳಿತಕ್ಕೆ ನಾಂದಿ ಹಾಡಿದರು ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲರೂ ಜಾಗೃತಿ ವಹಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಮನೆಯಲ್ಲಿಯೇ ತಯಾರಿಸಿದ ಮಾಸ್ಕ್ ಬಳಸಿ ಎಂದು ಜನರಿಗೆ ತಿಳಿಹೇಳಿದರು.

ಈ ಸಂದರ್ಭದಲ್ಲಿ ರುದ್ರಮುನಿ ಶ್ರೀಗಳು, ಜಿಪಂ ಸದಸ್ಯೆ ಸುಜಾತಾ ಕಳ್ಳಿಮನಿ, ಸದಾಶಿವ ಚಿಕರೆಡ್ಡಿ, ರವಿಗೌಡ ಪಾಟೀಲ, ರುದ್ರಗೌಡ ಪಾಟೀಲ, ಧರ್ಮು ಹೂಗಾರ, ಪ್ರಭು ಚಿಕರೆಡ್ಡಿ, ಚಂದ್ರಶೇಖರ ವಾಲಿ, ಚಂದ್ರಶೇಖರ ನಡುವಿನಮನಿ, ಅಪ್ಪುಗೌಡ ಕೋಟಿ, ಗ್ರಾಪಂ ಸದಸ್ಯೆ ರೇಣುಕಾ ಕುಂಬಾರ, ರವೀಂದ್ರ ಕಾಂಬಳೆ, ರೇಣುಕಾಚಾರ್ಯ ಹಿರೇಮಠ, ಶಿವಾನಂದ ಕವಲಗಿ, ಸದಾಶಿವ ಕೊಳುಕುರ, ಚನ್ನು ಅವಟಿ, ಶ್ರೀಶೈಲ ಹೂಗಾರ, ಈಶ್ವರಗೌಡ ಪಾಟೀಲ, ಮುತ್ತು ಬಡಿಗೇರ, ಮಲ್ಲಿಕಾರ್ಜುನ ನಿಂಬಾಳ, ಈಶ್ವರಪ್ಪ ಲೋಕುರಿ, ಸಂತೋಷ ಕಳಸರೆಡ್ಡಿ, ಕರೆಪ್ಪ ಹೂಗಾರ, ಶ್ರೀಶೈಲ ಕರಜಗಿ, ಪ್ರಕಾಶ ಬಿದರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next