Advertisement

ಒಡಿಶಾ, ಅರುಣಾಚಲದಲ್ಲಿ ನೂತನ ಸಿಎಂಗಳ ಪದಗ್ರಹಣ

01:28 AM May 30, 2019 | mahesh |

ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಡಿ ನಾಯಕ ನವೀನ್‌ ಪಾಟ್ನಾಯಕ್‌ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಾಖಲೆಯ 5ನೇ ಬಾರಿಗೆ ಅವರು ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದಾರೆ. ರಾಜ್ಯಪಾಲ ಗಣೇಶಿ ಲಾಲ್‌ ಅವರು ಪಾಟ್ನಾಯಕ್‌ಗೆ ಗೋಪ್ಯತೆಯ ಪ್ರಮಾಣ ಬೋಧಿಸಿದ್ದು, ಇವರ ಜತೆಗೆ 20 ಮಂದಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಇನ್ನು ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಹಿರಿಯ ನಾಯಕ ಪೆಮಾ ಖಂಡು ಅವರು ರಾಜ್ಯದ 10ನೇ ಮುಖ್ಯಮಂತ್ರಿಯಾಗಿ ಬುಧವಾರವೇ ಪದಗ್ರಹಣ ಮಾಡಿದ್ದಾರೆ. ಚೌನಾ ಮೇನ್‌ ಅವರು ಡಿಸಿಎಂ ಆಗಿ, 11 ಮಂದಿ ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next