ಮುಂಬಯಿ: ಬಾಂಬೆ ಸೌತ್ ಕೆನರಾ ಬ್ರಾಹ್ಮೀಣ್ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳು ಸಯಾನ್ ಪೂರ್ವದಲ್ಲಿ ಅತ್ಯಾಧುನಿಕ ಸೌಲಭ್ಯ ಗಳೊಂದಿಗೆ ಪುನರ್ ನಿರ್ಮಿಸಿದ ಗೋಕುಲ ಕಟ್ಟಡದ ಉದ್ಘಾಟನ ಕಾರ್ಯಕ್ರಮಕ್ಕೆ ಮಂಗಳವಾರ ಸಂಜೆ ಚಾಲನೆ ದೊರಕಿದ್ದು, ವಿವಿಧ ಪೂಜಾವಿಧಿಗಳು ನೆರವೇರಿದವು.
ಗೋಕುಲದ ಹಿರಿಯ ಪುರೋಹಿತ ವೇ| ಮೂ| ಗುರುರಾಜ ಉಡುಪ ಅವರು ಸೂರ್ಯಾಸ್ತದ ವೇಳೆಗೆ ದೇವತಾ ಪ್ರಾರ್ಥನೆ, ಸಪ್ತ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿ, ಪ್ರಾಕಾರ ಬಲಿ ಇತ್ಯಾದಿ ಪೂಜಾವಿಧಿಗಳನ್ನು ನೆರವೇರಿಸಿದರು. ಧರೆಗುಡ್ಡೆ ಶ್ರೀನಿವಾಸ ಭಟ್, ನಾಗರಾಜ ಉಡುಪ, ರಾಘವೇಂದ್ರ ಅಲೆವೂರು, ದಿನೇಶ್ ಉಪರ್ಣಾ, ಗೋಪಾಲ ಭಟ್, ಜನಾರ್ದನ ಅಡಿಗ, ಶ್ರೀಪತಿ ಗೋಡಂಚ, ರವಿ ಐತಾಳ, ನಾಗರಾಜ ಐತಾಳ, ಗಿರಿಧರ ಉಡುಪ ಅವರು ಸಹ ಪುರೋಹಿತರಾಗಿ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಪ್ರಸಾದವನ್ನಿತ್ತು ಹರಸಿದರು.
ಬಿಎಸ್‌ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಸುರೇಶ್ ರಾವ್ ಪ್ರಧಾನವಾಗಿ ಹಾಗೂ ಕೋಶಾಧಿಕಾರಿ ಸಿಎ ಹರಿದಾಸ ಭಟ್ ಮತ್ತು ಆಶಾ ಹರಿದಾಸ್ ದಂಪತಿ ಪೂಜಾವಿಧಿಗಳ ಯಜಮಾನತ್ವ ವಹಿಸಿದರು.
ಈ ಸಂದರ್ಭದಲ್ಲಿ ಬಿಎಸ್‌ಕೆಬಿಎ ಉಪಾಧ್ಯಕ್ಷ ರಾದ ವಾಮನ ಹೊಳ್ಳ ಮತ್ತು ಶೈಲಿನಿ ಎ. ರಾವ್, ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಜತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್. ರಾವ್ ಮತ್ತು ಚಿತ್ರಾ ಮೇಲ್ಮನೆ, ಜತೆ ಕೋಶಾಧಿಕಾರಿ ಪಿ.ಬಿ. ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಐ.ಕೆ. ಪ್ರೇಮಾ ಎಸ್. ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ವಿಶ್ವಸ್ತ ಸದಸ್ಯರಾದ ಎ. ಎಸ್. ರಾವ್, ಕೃಷ್ಣ ಆಚಾರ್ಯ, ಎಸ್. ಎನ್. ಉಡುಪ, ಬಿ. ರಮಾನಂದ ರಾವ್, ಅವಿನಾಶ್ ಶಾಸ್ತ್ರಿ ಸಹಿತ ಭಕ್ತರು ಉಪಸ್ಥಿತರಿದ್ದರು.
– ಚಿತ್ರ-ವರದಿ: ರೋನ್ಸ್ ಬಂಟ್ವಾಳ್