ಭಾರತೀಯ ಸಂಸ್ಕೃತಿಯಲ್ಲಿ ಚಾಪೆಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಡೈನಿಂಗ್ ಟೇಬಲ್ಗಳು ಮನೆಗೆ ಆಗಮನಿಸುವ ಮುನ್ನ ನೆಲದಲ್ಲಿ ಕುಳಿತುಕೊಳ್ಳಲು ಚಾಪೆಗಳನ್ನು ಹಾಸುತ್ತಿದ್ದರು. ಮನೆಗೆ ಅತಿಥಿಗಳು ಬಂದಾಗ ಚಾಪೆಗಳಲ್ಲಿ ಕುಳ್ಳಿರಿಸುವ ಸಂಪ್ರದಾಯ ಭಾರತದ್ದು. ಆದರೆ ಮನೆಯ ಅಲಂಕಾರಕ್ಕೆ ಆಧುನಿಕ ಟಚ್ ಬಂದ ಬಳಿಕ ಚಾಪೆ ಮೂಲೆಗುಂಪಾಗಿದೆ.
ಅದು ಏನೇ ಇರಲಿ ಇಂದು ಅದೇ ಚಾಪೆ ತನ್ನ ಅಸ್ತಿತ್ವವನ್ನು ಮತ್ತೆ ಕಂಡುಕೊಳ್ಳಲಾರಂಭಿಸಿದೆ. ಈಗ ಮನೆ ಮನೆಗಳಲ್ಲಿ ಚಾಪೆಯಿಂದ ವಿನೂತನ ಶೈಲಿಯ ವಿನ್ಯಾಸಗಳನ್ನು ಮಾಡಲಾರಂಭಿಸಿದ್ದಾರೆ. ಅಲ್ಲದೆ ಅವುಗಳಿಗೆ ಹೊಸ ಹೊಸ ಬಣ್ಣ ನೀಡುವ ಮೂಲಕ ಅದನ್ನು ಟ್ರೇಂಡಿಯಾಗಿಸುತ್ತಿದ್ದಾರೆ.
ಭಾರತೀಯರ ಅಚ್ಚು ಮೆಚ್ಚಾಗಿದ್ದ ಚಾಪೆ ಈಗ ಪ್ರಾನ್ಸ್, ಯುಕೆ ಗಳಲ್ಲಿ ಚಾರ್ಪಾಯ್ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಇದನ್ನು ಒಳಾಂಗಣ, ಟೇರೆಸ್ ಮತ್ತು ಗಾರ್ಡ್‌ನ್‌ಗಳಲ್ಲಿ ಹೆಚ್ಚಾಗಿ ಬಳಸಲು ಆರಂಭಿಸಿದ್ದಾರೆ.
ಮರಗೆಲಸ ಮಾಡುವವರ ಬಳಿ ಹಾಸಿಗೆ ಬೇಕಾದಲ್ಲಿ ಹಾಸಿಗೆ ಮಾದರಿಯಲ್ಲಿ ಅಥವಾ ಕುಳಿತುಕೊಳ್ಳಲು ಚೇರ್‌ನಂತೆ ಬೇಕಾದಲ್ಲಿ ಮಾಡಿಸಿಕೊಳ್ಳಬಹುದು ಅಥವಾ ಖರೀದಿಸಬಹುದಾಗಿದೆ. ಮನೆಯಲ್ಲಿರುವ ಕಾಟ್‌ಗಳ ಮೇಲೆ ಹಲಗೆಗಳನ್ನು ಹಾಕುವ ಬದಲು ಗಟ್ಟಿಯಾಗಿ ಚಾಪೆಯನ್ನು ನೇಯ್ದು ಅದನ್ನು ಬಳಸಿಕೊಳ್ಳಬಹುದು.
ಇನ್ನು ಕೆಲವು ಮನೆಗಳಲ್ಲಿ ಆರಾಮ ಕುರ್ಚಿಗಳಿರುತ್ತವೆ. ಈಗಿನ ತೂಗು ಜೋಕಾಲಿಗಳ ರೀತಿಯಾಗಿಯೂ ಚಾಪೆಗಳನ್ನು ಬಳಸಿಕೊಂಡು ಜೋಕಾಲಿಗಳನ್ನು ತಯಾರಿಸಿಕೊಳ್ಳಬಹುದು. ಅದಲ್ಲದೆ ಚಾಪೆಗಳನ್ನು ಡೈನಿಂಗ್ ಟೇಬಲ್ ಮತ್ತು ಸ್ಟೂಲ್ಗಳ ತಯಾರಿಕೆ ವೇಳೆಯೂ ಬಳಸಬಹುದು. ಆದರೆ ಇದನ್ನು ಸಂಪೂರ್ಣವಾಗಿ ಚಾಪೆಗಳಿಂದ ಮಾಡಲಾಗುವುದಿಲ್ಲ. ಬದಲಾಗಿ ಡೈನಿಂಗ್ ಟೇಬಲ್ ಅಥವಾ ಸ್ಟೂಲ್ಗಳನ್ನು ತಯಾರಿಸಿ ಚಾಪೆ ಹೆಣೆಯಬೇಕು
•ಪ್ರೀತಿ ಭಟ್ ಗುಣವಂತೆ