Advertisement

ಆಕಾಶ್‌ ಕ್ಷಿಪಣಿಯನ್ನು ಮತ್ತೆ ಮರುಪರೀಕ್ಷೆ ನಡೆಸಿದ ಡಿಆರ್‌ಡಿಒ

10:28 PM Jul 23, 2021 | Team Udayavani |

ಬಾಲಾಸೋರ್‌ (ಒಡಿಶಾ): ಬುಧವಾರವಷ್ಟೇ, ತನ್ನ ಆಕಾಶ್‌-ಎನ್‌ಜಿ ಹೊಸ ತಲೆಮಾರಿನ ಕ್ಷಿಪಣಿಗಳ ಪರೀಕ್ಷೆ ನಡೆಸಿದ್ದ ಭಾರತೀಯ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಶುಕ್ರವಾರ ಪುನಃ ಅವೇ ಕ್ಷಿಪಣಿಗಳ ಮರುಪರೀಕ್ಷೆಯನ್ನು ಒಡಿಶಾದ ಬಾಲಾಸೋರ್‌ನಲ್ಲಿ ನಡೆಸಿದೆ.

Advertisement

ಬುಧವಾರ ಪರೀಕ್ಷೆ ಯಶಸ್ವಿಯಾದಂತೆ, ಶುಕ್ರವಾರದ ಪರೀಕ್ಷೆಯಲ್ಲೂ ಕ್ಷಿಪಣಿಗಳು ನಿರೀಕ್ಷಿತ ಫ‌ಲಿತಾಂಶ ನೀಡಿವೆ. ವಿವಿಧ ಹವಾಮಾನಗಳಲ್ಲಿ ಕ್ಷಿಪಣಿಗಳ ಕ್ಷಮತೆಯನ್ನು ಪರೀಕ್ಷಿಸುವ ಸಲುವಾಗಿ ಎರಡು ಬಾರಿ ಇವುಗಳ ಪರೀಕ್ಷೆ ನಡೆಸಲಾಯಿತು ಎಂದು ಡಿಆರ್‌ಡಿಒ ತಿಳಿಸಿದೆ.

ಮತ್ತೂಂದೆಡೆ, ಅಮೆರಿಕ ಬೋಯಿಂಗ್‌ ಸಂಸ್ಥೆ ಜೊತೆಗೂಡಿ ನಿರ್ಮಿಸುವ ಎಎಚ್‌-64 ಅಪಾಚೆ ಯುದ್ಧ ವಿಮಾನಗಳಿಗಾಗಿ ತಾನು ತಯಾರಿಸಿರುವ 100ನೇ ಮೂಲ ಆಕೃತಿಯನ್ನು (ಫ್ಯೂಸ್‌ಲೇಜ್‌) ಬಿಡುಗಡೆ ಮಾಡಿರುವುದಾಗಿ ಟಾಟಾ ಬೋಯಿಂಗ್‌ ಏರೋಸ್ಪೇಸ್‌ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next