Advertisement

ವರ್ಚುವಲ್‌ ರೇಪ್‌ ಆರೋಪ: ಮೆಟಾದಿಂದ ಹೊಸ ಫೀಚರ್‌

08:34 PM Feb 05, 2022 | Team Udayavani |

ವಾಷಿಂಗ್ಟನ್‌: ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಪ್ಲಾಟ್‌ ಫಾರ್ಮ್ಸ್ ನಲ್ಲಿ ತಮ್ಮ ಮೇಲೆ “ವರ್ಚುವಲ್‌ ಗ್ಯಾಂಗ್‌ರೇಪ್‌’ ನಡೆದಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ ಬೆನ್ನಲ್ಲೇ ಸಂಸ್ಥೆಯು, ದೌರ್ಜನ್ಯದಿಂದ ಸುರಕ್ಷತೆ ಒದಗಿಸುವ ಹೊಸ ಫೀಚರ್‌ ಅನ್ನು ಪರಿಚಯಿಸಿದೆ.

Advertisement

ವರ್ಚುವಲ್‌ ರಿಯಾಲಿಟಿ ಪ್ಲಾಟ್‌ಫಾರಂ ಬಳಕೆದಾರರು ಇನ್ನು ಮುಂದೆ ಈ “ಪರ್ಸನಲ್‌ ಬೌಂಡರಿ'(ವೈಯಕ್ತಿಕ ಗಡಿ) ಫೀಚರ್‌ ಅನ್ನು ಬಳಸುವಂತೆ ಸಂಸ್ಥೆ ಸೂಚಿಸಿದೆ. ಈ ಫೀಚರ್‌ನಿಂದಾಗಿ ಬಳಕೆದಾರರಿಗೆ ತಮ್ಮ ವರ್ಚುವಲ್‌ ಅವತಾರಗಳ ನಡುವೆ ಕನಿಷ್ಠ 4 ಅಡಿ ಅಂತರವಿದ್ದಂತೆ ಭಾಸವಾಗುತ್ತದೆ.

ಇದನ್ನೂ ಓದಿ:ಯಕ್ಷಗಾನ ಕಲಾವಿದ ವಾಮನ ಕುಮಾರ್ ಕುಟುಂಬಕ್ಕೆ ಆರ್ಥಿಕ ನೆರವು

ಹಾರಿಜಾನ್‌ ವರ್ಲ್ಡ್ ಮತ್ತು ಹಾರಿಜಾನ್‌ ವೆನ್ಯೂ ಆ್ಯಪ್‌ಗಳನ್ನು ವಿಆರ್‌ ಹೆಡ್‌ಸೆಟ್‌ ಮೂಲಕ ಬಳಸುವವರಿಗೆ ಇದು ಅನುಭವಕ್ಕೆ ಬರುತ್ತದೆ. ಈ ಹೊಸ ಡಿಫಾಲ್ಟ್ ಸೆಟ್ಟಿಂಗ್‌ನಿಂದಾಗಿ ಅನಪೇಕ್ಷಿತ ಸಂವಹನದಿಂದ ದೂರವುಳಿಯಬಹುದು ಎಂದು ಮೆಟಾ ಕಂಪನಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next