Advertisement

ನೂತನ ಕೃಷಿ ಮಸೂದೆ ರೈತರ ಆರ್ಥಿಕ ಸ್ಥಿತಿ ಬದಲಾಯಿಸಲಿದೆ: ವಿಪಕ್ಷಗಳಿಗೆ ಪ್ರಧಾನಿ ಚಾಟಿ

03:29 PM Sep 21, 2020 | Nagendra Trasi |

ನವದೆಹಲಿ:ರಾಜ್ಯ ಸಭೆಯಲ್ಲಿ ಅಂಗೀಕಾರಗೊಂಡಿರುವ ನೂತನ ಕೃಷಿ ಮಸೂದೆ ರೈತರ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಲಿದೆ. ಕೃಷಿ ಮಸೂದೆ ಅಂಗೀಕಾರವಾಗುವ ಮೂಲಕ ಕೃಷಿ ಕ್ಷೇತ್ರ ಬದಲಾವಣೆಯತ್ತ ಸಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಸೆಪ್ಟೆಂಬರ್ 21, 2020) ಪ್ರತಿಕ್ರಿಯೆ ನೀಡಿದ್ದಾರೆ.

Advertisement

ನೂತನ ಕೃಷಿ ಮಸೂದೆಯಿಂದಾಗಿ ಈಗ ರೈತರು ತಮ್ಮ ಉತ್ಪನ್ನವನ್ನು ಎಲ್ಲಿ ಬೇಕಾದರೂ ಯಾವುದೇ ಬೆಲೆಗೆ ಮಾರಾಟ ಮಾಡಬಹುದಾಗಿದೆ ಎಂದರು.

ಅಲ್ಲದೇ ಕೃಷಿ ಮಸೂದೆ ಕೃಷಿ ಮಾರುಕಟ್ಟೆ(ಮಂಡಿ )ಯ ವಿರುದ್ಧವಲ್ಲ ಎಂದು ಪ್ರಧಾನಿ ಮೋದಿ ರೈತರಿಗೆ ಭರವಸೆ ನೀಡಿದ್ದಾರೆ. ರೈತರ ಉತ್ಪನ್ನಗಳ ಸರ್ಕಾರಿ ಸಂಗ್ರಹ ಮತ್ತು ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಈ ಹಿಂದಿನಂತೆಯೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಟಿಪ್ಪರ್ ಹರಿದು ತಾಯಿ, ಮಗು ದುರ್ಮರಣ: ಪವಾಡಸದೃಶ ರೀತಿಯಲ್ಲಿ ಪಾರಾದ ಪತಿ

ಭಾನುವಾರ ವಿಪಕ್ಷಗಳ ಭಾರೀ ಕೋಲಾಹಲ, ಗದ್ದಲದ ನಡುವೆ ರಾಜ್ಯಸಭೆಯಲ್ಲಿ ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ-2020,  ರೈತರ(ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಒಪ್ಪಂದ ಮತ್ತು ರೈತ ಸೇವೆಗಳ ಮಸೂದೆ 2020 ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತ್ತು.

Advertisement

ಲೋಕಸಭೆಯಲ್ಲಿಯೂ ಎರಡೂ ಮಸೂದೆಗಳು ಅಂಗೀಕಾರಗೊಂಡಿದ್ದವು. ನಾನು ನನ್ನ ರೈತ ಬಾಂಧವರನ್ನು ಅಭಿನಂದಿಸುತ್ತೇನೆ. ಈ ಬದಲಾವಣೆ ಕೃಷಿ ಕ್ಷೇತ್ರಕ್ಕೆ ಅಗತ್ಯವಾಗಿರುವುದರಿಂದ ನಮ್ಮ ಸರ್ಕಾರ ರೈತರಿಗಾಗಿ ಈ ಬದಲಾವಣೆ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಕೃಷಿ ಮಸೂದೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರು ಮುಕ್ತವಾಗಿ ಮಾರಾಟ ಮಾಡುವ ಅಧಿಕಾರವನ್ನು ನೀಡಲಿದೆ. ನಾನು ಮತ್ತೊಂದು ವಿಚಾರವನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ, ಈ ಮಸೂದೆಗಳು ಕೃಷಿ ಮಾರುಕಟ್ಟೆ ವಿರುದ್ಧವಲ್ಲ. ರೈತರು ತಮ್ಮ ಉತ್ಪನ್ನವನ್ನು ಸೂಕ್ತ ಬೆಲೆಗೆ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಎನ್ ಎಲ್ ಎಟಿ-2020 ಪ್ರವೇಶ ಪರೀಕ್ಷೆ ಅಧಿಸೂಚನೆ ರದ್ದುಪಡಿಸಿದ ಸುಪ್ರೀಂಕೋರ್ಟ್

ವಿರೋಧ ಪಕ್ಷಗಳು ರೈತರ ದಿಕ್ಕು ತಪ್ಪಿಸುತ್ತಿದೆ: ಮೋದಿ

ನೂತನ ಕೃಷಿ ಮಸೂದೆಗೆ ಸಂಬಂಧಿಸಿದಂತೆ ದೇಶಾದ್ಯಂತ ಇರುವ ರೈತರ ದಿಕ್ಕನ್ನು ವಿಪಕ್ಷಗಳು ತಪ್ಪಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು. ನೂತನ ಕೃಷಿ ಮಸೂದೆ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ಚಾಟಿ ಬೀಸಿರುವ ಅವರು, ನೂತನ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಯಾವತ್ತೂ ಸ್ವಾಮಿನಾಥನ್ ಸಮಿತಿಯ ವರದಿಯನ್ನು ಜಾರಿಗೊಳಿಸಲು ಪ್ರಯತ್ನಿಸಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next