Advertisement

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ: ಪವಾರ್‌

04:11 PM Jun 12, 2019 | Vishnu Das |

ಮುಂಬಯಿ: ಪಕ್ಷದಲ್ಲಿ ಕೇವಲ ಗ್ರಾಮೀಣ ಮುಖಗಳು ಎಂದು ಗುರುತಿಸಿಕೊಂಡ ಎನ್‌ಸಿಪಿಯು ಬದಲಾವಣೆ ಕಾಣುವ ಜತೆಗೆ ನಗರ ಪ್ರದೇಶಗಳಲ್ಲಿ, ಪಕ್ಷದ ಬಲವನ್ನು ಹೆಚ್ಚಿಸಲು ಅಧಿಕ ಶ್ರಮ ಪಡಬೇಕು. ಹಾಗಾಗಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ.

Advertisement

ಪಕ್ಷದ ಕಾರ್ಯಚಟುವಟಿಕೆ ಪದ್ಧತಿ ಬದಲಾವಣೆ ಮಾಡುವ ಜತೆಗೆ ಸಾಮಾಜಿಕ ಮಾಧ್ಯಮದ ಪ್ರಚಾರ ಮತ್ತು ಸಾರ್ವಜನಿಕರ ಸಂವಾದದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಹೇಳಿದ್ದಾರೆ. ಪಕ್ಷದ 20ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಜತೆ ಸಂವಾದ ನಡೆಸಿದ ಪವಾರ್‌ ಅವರು, ಎನ್‌ಸಿಪಿಯ ಗುರುತಿಸಿಕೊಂಡಿದ್ದು, ಗ್ರಾಮೀಣ ಮುಖಗಳಿಂದ ಆದರೆ ಜನಸಂಖ್ಯೆಯ ಶೇ.50ರಷ್ಟು ನಗರ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಪ್ರಸಕ್ತ ಹೆಚ್ಚಿನ ತಾಲೂಕುಗಳು ನಗರೀಕರಣವಾಗಿದೆ. ಅದಲ್ಲದೆ ಮುಂಬಯಿಯಂಥ‌ ಮಹಾನ ಗರದಲ್ಲಿ ಪಕ್ಷದ ಕಾರ್ಯಗಳಲ್ಲಿ ಕೊರತೆ ಕಾಣುತ್ತಿದೆ ಎನ್ನುವುದನ್ನು ದಯವಿಟ್ಟು ಸ್ವೀಕರಿಸುವ ಜತೆಗೆ ಅದರಲ್ಲಿ ಸುಧಾರಣೆ ಕಂಡುಕೊಳ್ಳುವ ಆವಶ್ಯಕತೆಯಿದೆ.

ಮುಂಬಯಿಯ ಎಲ್ಲ ರಾಜ್ಯಗಳ ನಾಗರಿಕರಿಂದ ಪ್ರತಿನಿಧಿಸುತ್ತಿದ್ದು, ಮುಂಬಯಿಯಲ್ಲಿ ತೆಲುಗು ಸಮುದಾಯದ ಪ್ರಮುಖ ರ ಕೊಡುಗೆ ಇದ್ದು, ಎಲ್ಲ ಸಂಘಟನೆಗಳನ್ನು ಜತೆಗೆ ತೆಗೆದುಕೊಂಡು ಕೆಲಸ ಮಾಡುವ ಎಂದು ಪವಾರ್‌ ಹೇಳಿದ್ದಾರೆ.

ಯುವ ಪೀಳಿಗೆಯು ನಮ್ಮ ಪಕ್ಷದ ಪರವಾಗಿ ಸಿದ್ಧವಾಗಿರಬೇಕು. ನಾಗರಿಕರಿಗಾಗಿ ಪಕ್ಷದಲ್ಲಿ ಬದಲಾವಣೆ ಕಾಣಬೇಕಾಗುತ್ತದೆ ಎಂದು ಹೇಳಿದ್ದಾರೆ.

ಗುಹೆ ಭೇಟಿಗೆ ಟೀಕೆ
ಪ್ರಧಾನಿ ಮೋದಿಯವರ ಕಾರ್ಯ ಪ್ರದ್ಧತಿ ಟೀಕಿಸಿದ ಪವಾರ್‌ ಅವರು, ದೇಶದಲ್ಲಿ ಕೋಮುವಾದವನ್ನು ಹರಡುವ ಕಾರ್ಯ ಆಡಳಿತಾರೂಢ ಪಕ್ಷ ಮಾಡುತ್ತಿದೆ. ನಮ್ಮ ದೇಶದ ಪ್ರಧಾನಿ ಗುಹೆಗೆ ಹೋಗಿ ಕುಳಿತುಕೊಳ್ಳುತ್ತಾರೆ. ಅದರಲ್ಲಿ ಕೇಸರಿಯ ಬಟ್ಟೆ ಧರಿಸಿ ನೀವು ಜಗತ್ತಿಗೆ ಯಾವ ಸಂದೇಶ ನೀಡುತ್ತಿರಿ? ವಿಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಯುವಜನರನ್ನು ಆಧುನೀಕರಣದತ್ತ ಕೊಂಡೊಯ್ಯಬೇಕು. ಅದನ್ನು ಮಾಡುವ ಬದಲು ಕೇಸರಿ ಧರಿಸಿ ಪ್ರಧಾನಮಂತ್ರಿಯು ಗುಹೆಗಳಿಗೆ ಭೇಟಿ ನೀಡುತ್ತಿ¤ದ್ದಾರೆ ಎಂದು ಪವಾರ್‌ ಟೀಕಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next