Advertisement

ಇಂಗ್ಲೆಂಡ್‌ ಏಕದಿನ ತಂಡದಲ್ಲಿ ಹೊಸ ಮುಖಗಳು

10:00 AM Dec 14, 2019 | Team Udayavani |

ಲಂಡನ್‌: ಮುಂದಿನ ವರ್ಷದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಿಗೆ ಇಂಗ್ಲೆಂಡ್‌ ತಂಡಗಳನ್ನು ಪ್ರಕಟಿಸಲಾಗಿದೆ. ಇಲ್ಲಿ ಬಹಳಷ್ಟು ಹೊಸ ಮುಖಗಳು ಗೋಚರಿಸಿವೆ.

Advertisement

ಸೀಮ್‌ ಬೌಲರ್‌ ಪ್ಯಾಟ್‌ ಬ್ರೌನ್‌, ಬ್ಯಾಟ್ಸ್‌ಮನ್‌ ಟಾಮ್‌ ಬ್ಯಾಂಟನ್‌, ಲಂಕಾಶೈರ್‌ನ ಕ್ರಿಕೆಟಿಗರಾದ ಮ್ಯಾಥ್ಯೂ ಪಾರ್ಕಿನ್ಸನ್‌ ಮತ್ತು ಶಕಿಬ್‌ ಮಹಮೂದ್‌ ಏಕದಿನ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ನ್ಯೂಜಿಲ್ಯಾಂಡ್‌ ಎದುರಿನ ಟಿ20 ಸರಣಿಯಲ್ಲಿದ್ದ ಬ್ಯಾಂಟನ್‌ ಮತ್ತು ಮಹಮೂದ್‌ ಅವರನ್ನು ಆಫ್ರಿಕಾ ಎದುರಿನ ಟಿ20 ಸರಣಿಯಿಂದ ಕೈಬಿಡಲಾಗಿದೆ.

ಇಂಗ್ಲೆಂಡ್‌ ಏಕದಿನ ತಂಡ: ಇಯಾನ್‌ ಮಾರ್ಗನ್‌, ಮೊಯಿನ್‌ ಅಲಿ, ಜಾನಿ ಬೇರ್‌ಸ್ಟೊ, ಟಾಮ್‌ ಬ್ಯಾಂಟನ್‌, ಪ್ಯಾಟ್‌ ಬ್ರೌನ್‌, ಸ್ಯಾಮ್‌ ಕರನ್‌, ಟಾಮ್‌ ಕರನ್‌, ಜೋ ಡೆನ್ಲಿ, ಕ್ರಿಸ್‌ ಜೋರ್ಡನ್‌, ಶಕಿಬ್‌ ಮಹಮೂದ್‌, ಡೇವಿಡ್‌ ಮಾಲನ್‌, ಮ್ಯಾಥ್ಯೂ ಪಾರ್ಕಿನ್ಸನ್‌, ಆದಿಲ್‌ ರಶೀದ್‌, ಜೋ ರೂಟ್‌, ಜಾಸನ್‌ ರಾಯ್‌, ಕ್ರಿಸ್‌ ವೋಕ್ಸ್‌.

ಇಂಗ್ಲೆಂಡ್‌ ಟಿ20 ತಂಡ:
ಇಯಾನ್‌ ಮಾರ್ಗನ್‌, ಮೊಯಿನ್‌ ಅಲಿ, ಜೋಫ‌ ಆರ್ಚರ್‌, ಜಾನಿ ಬೇರ್‌ಸ್ಟೊ, ಜಾಸ್‌ ಬಟ್ಲರ್‌, ಪ್ಯಾಟ್‌ ಬ್ರೌನ್‌, ಸ್ಯಾಮ್‌ ಕರನ್‌, ಟಾಮ್‌ ಕರನ್‌, ಜೋ ಡೆನ್ಲಿ, ಕ್ರಿಸ್‌ ಜೋರ್ಡನ್‌, ಡೇವಿಡ್‌ ಮಾಲನ್‌, ಮ್ಯಾಥ್ಯೂ ಪಾರ್ಕಿನ್ಸನ್‌, ಆದಿಲ್‌ ರಶೀದ್‌, ಜಾಸನ್‌ ರಾಯ್‌, ಬೆನ್‌ ಸ್ಟೋಕ್ಸ್‌, ಮಾರ್ಕ್‌ ವುಡ್‌.

Advertisement

Udayavani is now on Telegram. Click here to join our channel and stay updated with the latest news.

Next