Advertisement

ಬೋರಾಪುರದ ದಾರಿಯಲ್ಲಿ…

08:15 AM Mar 30, 2018 | |

“ಡೇಸ್‌ ಆಫ್ ಬೋರಾಪುರ’ – ಹೀಗೊಂದು ವಿಭಿನ್ನ ಶೀರ್ಷಿಕೆಯ ಸಿನಿಮಾವೊಂದು ಈಗ ಬಿಡುಗಡೆಗೆ ರೆಡಿಯಾಗಿದೆ. ಚಿತ್ರ ಏಪ್ರಿಲ್‌ನಲ್ಲಿ ತೆರೆಕಾಣುತ್ತಿದೆ. ಈಗ ಮೊದಲ ಹಂತವಾಗಿ ಚಿತ್ರದ ಎರಡು ಟ್ರೇಲರ್‌ಗಳು ಬಿಡುಗಡಡೆಯಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಯಿತು. ನಟರಾದ ಕಿಶೋರ್‌ ಹಾಗೂ ಹರೀಶ್‌ ರೈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದರು.

Advertisement

“ಇತ್ತೀಚಿನ ದಿನಗಳಲ್ಲಿ ಹಳ್ಳಿ ಹಿನ್ನೆಲೆಯಲ್ಲಿ ಸಿನಿಮಾ ಮಾಡೋದು ಕಷ್ಟದ ಕೆಲಸ. ಹೀಗಿರುವಾಗಲೂ ಹೊಸಬರ ತಂಡ ಹಳ್ಳಿ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದೆ. ಈ ತರಹದ ಸಿನಿಮಾ ನಿರ್ಮಿಸುವುದು ಖುಷಿಕೊಡುತ್ತದೆ’ ಎಂದು ಕಿಶೋರ್‌ ಹೇಳಿದರು. ಮತ್ತೂಬ್ಬ ನಟ ಹರೀಶ್‌ ರೈ ಮಾತನಾಡಿ, “ಚಿತ್ರದ ಟೈಟಲ್‌ನಂತೆ ಟ್ರೇಲರ್‌ ಕೂಡಾ ವಿಭಿನ್ನವಾಗಿದೆ. ಚಿತ್ರದಲ್ಲಿ ನಟಿಸಿದ ಕಲಾವಿದರು ಅನುಭವಿ ನಟರಂತೆ ಕಾಣುತ್ತಾರೆ’ ಎನ್ನುತ್ತಾ ಚಿತ್ರತಂಡಕ್ಕೆ ಶುಭಕೋರಿದರು. ನಟ ರವಿಚೇತನ್‌ ಕೂಡಾ ಹೊಸಬರ ಹಿಟ್‌ ಸಿನಿಮಾಗಳ
ಸಾಲಿಗೆ “ಡೇಸ್‌ ಆಫ್ ಬೋರಾಪುರ’ ಸೇರಲಿ ಎಂದು ಹಾರೈಸಿದರು.

“ಡೇಸ್‌ ಆಫ್ ಬೋರಾಪುರ’ ಒಂದು ಕುಗ್ರಾಮದಲ್ಲಿ ನಡೆಯುವ ಕಥಾನಕ. ಆದಿತ್ಯ ಕುಣಿಗಲ್‌ ಈ ಚಿತ್ರದ ನಿರ್ದೇಶಕರು. ಅಜಿತ್‌ ಕುಮಾರ್‌ ಗದ್ದಿ ಹಾಗೂ ಮಧು ಬಸವರಾಜ್‌ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್‌ ಸಿ.ಎಂ, ಅನಿತಾ
ಭಟ್‌, ಪ್ರಕೃತಿ ಮತ್ತು ಅಮಿತ್‌ ರಂಗನಾಥ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯ ಬಳಿಯ ಹಳ್ಳಿಯೊಂದರಲ್ಲಿ ಇಡೀ ಚಿತ್ರದ ಚಿತ್ರೀಕರಣವನ್ನು ನಡೆಸಲಾಗಿದೆ. ಚಿತ್ರದಲ್ಲಿ ದಿನೇಶ್‌ ಮಂಗಳೂರು, ಬೆಟ್ಟೇಗೌಡ ಎಂಬ ಪಾತ್ರ ಮಾಡಿದ್ದಾರೆ. ಅವರ ಮಗ
ಸೂರ್ಯ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿ ಅಮಿತಾ ರಂಗನಾಥ್‌, ಭಾಗ್ಯ ಎಂಬ ಪಾತ್ರ ಮಾಡಿದ್ದು, ಅವರು
ಮಾಡುವ ಕಾರ್ಯದಿಂದ ಹಳ್ಳಿಯ ಚಿತ್ರಣವೇ ಬದಲಾಗುತ್ತದೆಯಂತೆ.  ಮತ್ತೂಬ್ಬ ನಟಿ ಅನಿತಾ ಭಟ್‌ ಮಾತನಾಡಿ, ಚಿತ್ರದಲ್ಲಿ ಒಬ್ಬ ಡ್ರಾಮಾ ಆರ್ಟಿಸ್ಟ್‌ ಆಗಿ ಕಾಣಿಸಿಕೊಂಡಿದ್ದಾರಂತೆ. ವಿವೇಕ್‌ ಚಕ್ರವರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next