ಬೆಂಗಳೂರು: ಸಾರ್ವಜನಿಕರ ನಿರಂತರ ಸಂಪರ್ಕದಿಂದ ಪೊಲೀಸರಲ್ಲೂ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ನಗರದ ದಕ್ಷಿಣ ವಿಭಾಗ ಪೊಲೀಸರು ಕೋವಿಡ್ 19ಗೆ ತಡೆಯೊಡ್ಡಲು “ನೂತನ ವಸ್ತ್ರ ಸಂಹಿತೆ’ ಜಾರಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಸಂಪರ್ಕ, ದೂರುಗಳ ಸ್ವೀಕಾರ, ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಸೇರಿ ಹಲವು ಕಾರ್ಯಗಳಿಂದ ಸೋಂಕು ತಡೆಯಲು ಹೊಸ ಡ್ರೆಸ್ ಕೋಡ್‌ಗೆ ಪೊಲೀಸ್ ಇಲಾಖೆ ಮೊರೆ ಹೋಗಿದೆ.
ಪಿಪಿಇ ಕಿಟ್ ಮಾದರಿಯನ್ನು ಹೋಲುವ ಈ ಉಡುಪು ಕೋವಿಡ್ 19 ಸೋಂಕು ತಡೆಗೆ ರಕ್ಷಣಾ ಕವಚದಂತೆ ಸಿದಪಡಿಸಲಾಗಿದೆ. ಟೋಪಿ ಸಹಿತ ಜಾಕೆಟ್, ಕೈಗಳಿಗೆ ಹ್ಯಾಂಡ್ ಗ್ಲೌಸ್ ಹಾಗೂ ಮುಖಕ್ಕೆ ವೀಜರ್ ಸಹ ನೀಡಲಾಗಿದೆ. ಈಗ ಸಿಬ್ಬಂದಿಗೆ ನೀಡಲಾಗಿರುವ ಜಾಕೆಟ್ ಮರುಬಳಕೆ ಮಾಡಬಹುದಾಗಿದ್ದು, ಬಿಸಿಲಿನಿಂದಲೂ ಸಂರಕ್ಷಿಸಿಕೊಳ್ಳಬಹುದು. ಬೇಸಿಗೆ ಯಲ್ಲೂ ಧರಿಸಲು ಯೋಗ್ಯವಾಗಿದೆ ಎಂದು ಪೊಲೀಸರು ತಿಳಿಸುತ್ತಾರೆ.
ಅಗತ್ಯ ಸಂದರ್ಭದಲ್ಲಿ ಬಳಕೆ: ಕೋವಿಡ್ 19 ತಡೆಗೆ ಸಿದಟಛಿಪಡಿಸಲಾಗಿರುವ ಹೊಸ ಮಾದರಿಯ ಜಾಕೆಟ್ ಹಾಗೂ ಮತ್ತಿತರ ಪರಿಕರಗಳನ್ನು ವಿಭಾಗದ ಪ್ರತಿ ಠಾಣೆಗೆ ಹತ್ತರಂತೆ ನೀಡಲಾಗಿದೆ. ಈ ಉಡುಪು ಆರೋಪಿಗಳ ಬಂಧನ ಕಾರ್ಯ, ವಿಚಾರಣೆ ನಡೆಸುವ ಸಿಬ್ಬಂದಿ, ಸದಾ ಜನ ಸಂಪರ್ಕದಲ್ಲಿರುವ ಸಿಬ್ಬಂದಿಗೆ ಆದ್ಯತೆಯಾಗಿ ನೀಡಲಾಗುತ್ತಿದೆ ಹಾಗೂ ಅಗತ್ಯ ಸಂದರ್ಭಗಳಲ್ಲಿ ಬಳಸಲಾ ಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ಸಿಬ್ಬಂದಿಗಳಿಗೂ ನೀಡಲು ನಿರ್ಧರಿಸಲಾಗಿದೆ.
ಸೋಂಕು ಸಿಬ್ಬಂದಿಗೆ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೊಸ ಮಾದರಿಯ ಡ್ರೆಸ್ ಕೋಡ್ ಸಿದಪಡಿಸಲಾಗಿದೆ. ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
-ಡಾ. ರೋಹಿಣಿ ಕಟೋಚ್ ಸೆಪಟ್, ದಕ್ಷಿಣ ವಿಭಾಗದ ಡಿಸಿಪಿ