Advertisement

ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಆಯಾಮಗಳು ಬರಲಿ : ಸುನೀತಾ

12:30 AM Nov 26, 2019 | sudhir |

ಮಡಿಕೇರಿ: ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಪರಂಪರೆಯ ಜೊತೆಗೆ ವರ್ತಮಾನದ ಸಂಗತಿಗಳನ್ನು ಮನನ ಮಾಡಿಕೊಂಡು ಹೊಸ ಆಯಾಮಗಳನ್ನು ಸಾಹಿತ್ಯದಲ್ಲಿ ತರುವ ಪ್ರಯತ್ನ ಮಾಡಬೇಕು ಎಂದು ಕವಯತ್ರಿ ಸುನೀತಾ ಅಭಿಪ್ರಾಯಪಟ್ಟಿದ್ದಾರೆ.

Advertisement

ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಚಿಕ್ಕ ಅಳುವಾರದ ಮಂಗಳೂರು ವಿವಿ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ ಜಾಣೆ ಜಾಣೆಯರ ಬಳಗ 2019-20, ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಹಿತ್ಯವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿ ಸಮುದಾಯ ಬರವಣಿಗೆ ಮತ್ತು ಓದಿನ ಅಭಿರುಚಿ ಬೆಳಸಿಕೊಂಡಾಗ ಮಾತ್ರವೇ ಬದುಕಿಗೊಂದು ಸ್ಫೂರ್ತಿ ದೊರಕುತ್ತದೆ.

ಬಡತನದ ಬಾಲ್ಯದಲ್ಲಿ ಸಿಕ್ಕುವ ಅನುಭವಗಳು ವಿಶ್ವವಿದ್ಯಾನಿಲಯದ ಪಠ್ಯಗಳಿಂದ ಸಿಗುವ ಅನುಭವಕ್ಕಿಂತಲು ಮಿಗಿಲಾದುದು. ಹಸಿವು, ಅಪಮಾನ ಹಾಗೂ ಎದುರಿಸಿದ ಹಲವಾರು ಸವಾಲುಗಳು ವ್ಯಕ್ತಿತ್ವದ ಭದ್ರಬುನಾದಿಯಾಗುತ್ತದೆ. ಸವಾಲು ಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿರುತ್ತದೆ. ಅವರಲ್ಲಿ ಹುದುಗಿರುವ ಸೂಪ್ತ ಪ್ರತಿಭೆಯನ್ನು ಹೊರತರಬೇಕು. ಪುಸಕ್ತ ಓದು ಮತ್ತು ಜ್ಞಾನಸ್ಥ ಸ್ಥಿತಿಯು ಸಾಹಿತ್ಯದ‌ಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಜಗತ್ತು ಅನೇಕ ಅನುಭವಗಳನ್ನು ತಂದು ಕೊಡುತ್ತದೆ. ಸಾಹಿತ್ಯದ ಸವಿ ಬಲ್ಲವರಿಗೆ ಸಮಾಜವನ್ನು ಸೂಕ್ಷ್ಮವಾಗಿ ಗ್ರಹಿಸುವ ವಿಶೇಷತೆಯಿರುತ್ತದೆ ಎಂದು ಅವರು ತಿಳಿಸಿದರು.

ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ರಾಜೇಶ್‌, ಪದ್ಮಾವತಿ, ಶ್ರುತಿ, ರೇಷ್ಮಾ, ಮಂಗಳಾ, ಜೀವಿತಾ, ಗಾನಶ್ರೀ, ಸೌಮ್ಯಾ, ಪ್ರೀತಿ ತಮ್ಮ ಮೆಚ್ಚಿನ ಪುಸ್ತಕದ ಕುರಿತು ವಿಷಯ್ನು ಮಂಡಿಸಿ ದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು.

ಹವ್ಯಾಸ ರೂಢಿಸಿಕೊಳ್ಳಿ
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕರಾದ ಪೊ›.ಮಂಜುಳಾ ಶಾಂತರಾಮ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯದಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಜ್ಞಾನದ ಸಂಪತ್ತನ್ನು ಮತ್ತು ಸದಭಿರುಚಿಯನ್ನು ಇಮ್ಮಡಿಗೊಳಿಸುತ್ತದೆ. ಯುವ ಸಮುದಾಯ ಓದಿನ ಬಗ್ಗೆ ಹೆಚ್ಚು ಆಸಕ್ತಿಯನ್ನು ಬೆಳಸಿಕೊಳ್ಳಬೇಕು.

Advertisement

ಓದಿನ ಹವ್ಯಾಸ ಬದುಕಿನಲ್ಲಿ ಅತ್ಯವಶ್ಯಕ ಎಂದು ತಿಳಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಡಾ| ಮಹಂತೇಶ ಪಾಟೀಲ, ಜ‚ಮೀರ್‌ ಅಹಮದ್‌, ಕೆ.ಎಸ್‌ಶ್ರೀನಿವಾಸ್‌, ಅರ್ಪಿತಾ ಹಾಗೂ ಸಹಾಯಕ ಗ್ರಂಥಪಾಲಕ ಕೆ.ಜೆ.ಹರೀಶ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next