Advertisement

“ಸಸಿಹಿತ್ಲು ಬೀಚ್‌ಗೆ ಹೊಸ ಆಯಾಮ’

09:39 PM May 31, 2019 | Team Udayavani |

ಸಸಿಹಿತ್ಲು: ಇಲ್ಲಿನ ಮುಂಡ ಬೀಚ್‌ಗೆ ಹೊಸ ಆಯಾಮವನ್ನು ನೀಡಿ, ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಒದಗಿಸುವ ಪ್ರಯತ್ನ ನಡೆಸಲಾಗುವುದು. ಇದಕ್ಕೆ ಪೂರ್ವ ಭಾವಿಯಾಗಿ ಅದಕ್ಕಿರುವ ಅಪಾಯದ ಬಗ್ಗೆ ತ್ವರಿತ ಕಾಮಗಾರಿ ನಡೆಸಲಾಗುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

Advertisement

ಸಸಿಹಿತ್ಲು ಕದಿಕೆ ಸೇತುವೆಯಲ್ಲಿ ಎರಡನೇ ಹಂತದ ಕಾಮಗಾರಿಯಾಗಿ ಹೂಳೆತ್ತಲು ವಿವಿಧ ಯಂತ್ರಗಳನ್ನು ಬಳಸಲಾಗುತ್ತಿರುವುದನ್ನು ಸ್ಥಳ ವೀಕ್ಷಣೆ ನಡೆಸಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಸಸಿಹಿತ್ಲುವಿನ ಮುಂಡ ಬೀಚ್‌ನಲ್ಲಿ ತೀವ್ರವಾದ ನದಿ ಕೊರೆತಕ್ಕೆ ಪರೋಕ್ಷವಾಗಿ ಕಾರಣವಾಗಿರುವ ವಿವಿಧ ಸೇತುವೆಗಳ ಹೂಳು ತೆರವುಗೊಳಿಸುವ ಕಾರ್ಯ ಕಳೆದ ಇಪ್ಪತ್ತೈದು ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ. ಸೇತುವೆ ನಿರ್ಮಾಣ ಮಾಡಿದ ಅನಂತರವೇ ತೆರವು ಮಾಡಿದ್ದಲ್ಲಿ ಇಷ್ಟೊಂದು ಸುದೀರ್ಘ‌ ಕಾಮಗಾರಿ ಅಗತ್ಯವಿರಲಿಲ್ಲ. ಆದರೆ ಮಳೆಗಾಲದ ಮುಂಚೆ ಎಲ್ಲ ಹೂಳನ್ನು ತೆರವು ಮಾಡಲು ಜಿಲ್ಲಾಧಿಕಾರಿಗಳ ಮೂಲಕ ಸೂಚನೆ ನೀಡಲಾಗಿದೆ ಎಂದರು.

ಬೃಹತ್‌ ಕ್ರೇನ್‌ ಮೂಲಕ ಹಿಟಾಚಿಯನ್ನು ನದಿಯ ಸೇತುವೆಯ ಮೇಲಿನಿಂದ ಕೆಳಗಿಳಿಸಿ, ಹಿಟಾಚಿಯ ಬಕೆಟ್‌ನ ಮೂಲಕ ಮಣ್ಣನ್ನು ತೆರವು ಮಾಡಲಾಗುತ್ತಿರುವುದನ್ನು ವೀಕ್ಷಿಸಿದ ಶಾಸಕರು ಈ ಕಾರ್ಯಾಚರಣೆ ಮುಗಿದ ಅನಂತರ ಮತ್ತೂಮ್ಮೆ ಭೇಟಿ ನೀಡಿ ಮುಂದಿನ ಹಂತದ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಭರವಸೆಯನ್ನು ಸ್ಥಳೀಯರಿಗೆ ನೀಡಿದರು. ಜಿ.ಪಂ.ಸದಸ್ಯ ವಿನೋದ್‌ ಬೊಳ್ಳೂರು ಹಾಗೂ ಮೀನುಗಾರಿಗಾ ಪ್ರಕೋಷ್ಠದ ಶೋಭೇಂದ್ರ ಸಸಿಹಿತ್ಲು ಕಾಮಗಾರಿಯ ವಿವರನ್ನು ಶಾಸಕರಿಗೆ ತಿಳಿಸಿದರು.

ತಾ.ಪಂ. ಸದಸ್ಯ ಜೀವನ್‌ಪ್ರಕಾಶ್‌ ಕಾಮೆರೊಟ್ಟು, ಹಳೆಯಂಗಡಿ ಗ್ರಾ.ಪಂ.ನ ಸದಸ್ಯರಾದ ಅಶೋಕ್‌ ಬಂಗೇರ, ಚಿತ್ರಾ ಸುಖೇಶ್‌, ವಿನೋದ್‌ಕುಮಾರ್‌ ಕೊಳುವೈಲು, ಸುಕೇಶ್‌ ಪಾವಂಜೆ, ಪಿಸಿಎ ಬ್ಯಾಂಕ್‌ನ ನಿರ್ದೇಶಕ ಹಿಮಕರ್‌ ಕದಿಕೆ, ಸ್ಥಳೀಯರಾದ ಅನಂದ ಸುವರ್ಣ, ಸೂರ್ಯ ಕಾಂಚನ್‌, ಅನಿಲ್‌, ವಾಸುದೇವ, ಮನೋಜ್‌ಕುಮಾರ್‌, ಎಚ್‌. ರಾಮಚಂದ್ರ ಶೆಣೈ, ಮಹಾಬಲ ಅಂಚನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next