ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಹಾಗೂ ಬಿಜೆಪಿ ತನ್ನದೇ ಆದ ದಾಳವನ್ನು ಉರುಳಿಸಿದೆ. ಆದರೆ, ಈ ಎರಡು ದಾಳಗಳು ಯಶಸ್ವಿಯಾಗುವುದು ಅನುಮಾನ.
ಜೆಡಿಎಸ್ ಉರುಳಿಸಿರುವ ದಾಳ ಪಕ್ಷದಿಂದ ದೂರ ಸರಿದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನದ ಒಂದು ಭಾಗವಾಗಿದೆ. ಸ್ಥಳೀಯ ಸಂಸ್ಥೆ ಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ ಯಲ್ಲಿ ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲೇ ಇರುವಂತೆ ಒಲಿಸಿಕೊಳ್ಳಲು ಜಿ.ಟಿ.ದೇವೇಗೌಡರ ಪತ್ನಿ ಲಲಿತಾ ದೇವೇಗೌಡರಿಗೆ ಟಿಕೆಟ್ ನೀಡಲು ಮುಂದಾಗಿದೆ.
ಇದನ್ನೂ ಓದಿ:-ಸೆಮಿ ಸೋಲಿನ ಬಳಿಕ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪಾಕ್ ವೇಗಿ ಹಸನ್ ಅಲಿ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಹುಣ ಸೂರು ಕ್ಷೇತ್ರದಿಂದ ಜಿ.ಟಿ.ದೇವೇಗೌಡರ ಪುತ್ರ ಎಂಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರಿಗೂ ಟಿಕೆಟ್ ನೀಡುವ ಭರವಸೆ ನೀಡಿದೆ. ಆದರೆ, ಈ ದಾಳಕ್ಕೆ ಜಿ.ಟಿ.ದೇವೇಗೌಡ ಅವರು ಮಣಿದಿಲ್ಲ. ಜೆಡಿಎಸ್‌ನಲ್ಲಿ ತಮ್ಮನ್ನು ಕಟ್ಟಿ ಹಾಕುವ ಪ್ರಯತ್ನ ಇದು ಎಂಬುದು ಅವರ ಲೆಕ್ಕಾಚಾರವಾಗಿದೆ. ಇನ್ನು ವಿಧಾನಪರಿಷತ್ ಸದಸ್ಯ ಜೆಡಿಎಸ್‌ನ ಸಂದೇಶ್ ನಾಗರಾಜ್ ಅವರು ಮೈಸೂರು- ಚಾಮ ರಾಜನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ.
ಆದರೆ, ಬಿಜೆಪಿ ನಾಯಕರ ಲೆಕ್ಕಾಚಾರ ಬೇರೆಯೇ ಇದೆ. ಸಂದೇಶ ನಾಗರಾಜ್ ಅವರಿಗೆ ಮೈಸೂರು ಬದಲು ಮಂಡ್ಯ ಜಿಲ್ಲಾ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ನೀಡಲು ಬಿಜೆಪಿ ಆಸಕ್ತಿ ತೋರಿದೆ. ಈ ಕುರಿತು ಸಂದೇಶ ನಾಗರಾಜ್ ಅವರ ಜೊತೆ ಚರ್ಚಿಸಿದೆ. ಆದರೆ, ಇದಕ್ಕೆ ಸಂದೇಶ್ ನಾಗರಾಜ್ ಸಿದ್ಧರಿಲ್ಲ. ಬಿಜೆಪಿಯ ಕೆಲವು ಮುಖಂಡರು ಮಂಡ್ಯ ಜಿಲ್ಲಾ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಸ್ಪರ್ಧಿಸುವಂತೆ ನನಗೆ ಆಹ್ವಾನ ನೀಡಿದ್ದಾರೆ. ಆದರೆ, ಇದನ್ನು ನಾನು ಒಪ್ಪಿಲ್ಲ. ಮೈಸೂರು ನನ್ನ ಕಾರ್ಯಕ್ಷೇತ್ರ.
ನಾನೇಕೆ ಮಂಡ್ಯ ಜಿಲ್ಲೆಗೆ ಹೋಗಲಿ? ಎಂದು ಸಂದೇಶ ನಾಗರಾಜ್ ಶನಿವಾರ ಉದಯವಾಣಿ ಜೊತೆ ಮಾತಾಡುತ್ತಾ ಪ್ರಶ್ನಿಸಿದರು. ಜೆಡಿಎಸ್ ತನ್ನಿಂದ ದೂರ ಸರಿದಿರುವ ಜಿ.ಟಿ. ದೇವೇಗೌಡರ ಮನವೊಲಿಕೆಗೆ ಅವರ ಕುಟುಂಬ ದವರಿಗೆ ಟಿಕೆಟ್ ನೀಡಲು ಮುಂದಾಗಿದ್ದರೆ, ಇನ್ನೊಂ ದೆಡೆ ಜೆಡಿಎಸ್ ತೊರೆಯಲು ನಿರ್ಧರಿಸಿ ಬಿಜೆಪಿ ಟಿಕೆಟ್ ಕೇಳುತ್ತಿರುವ ಸಂದೇಶ್ ನಾಗರಾಜ್ ಅವರಿಗೆ ಪಕ್ಕದ ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸುವಂತೆ ಬಿಜೆಪಿ ಆಫರ್ ನೀಡಿದೆ. ಆದರೆ, ಎರಡು ಪಕ್ಷಗಳು ಉರುಳಿಸಿರುವ ಈ ದಾಳಗಳು ಕೈಗೂಡುವುದು ಅನುಮಾನವಾಗಿದೆ.
ಎಂಎಲ್ಸಿ ಚುನಾವಣೆಗೆ ನನ್ನ ಕುಟುಂಬದವರು ಸರ್ಧಿಸಲ್ಲ – ನನ್ನ ಕುಟುಂಬದವರು ಎಂಎಲ್‌ಸಿ ಚುನಾವಣೆಯಲ್ಲಿ ಕಣಕ್ಕಿಳಿಯುವ ಪ್ರಶ್ನೆಯೇ ಇಲ್ಲ. ಜೆಡಿಎಸ್‌ನವರು ನನ್ನನ್ನು ಬಿಟ್ಟೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷದ ಅಧ್ಯಕ್ಷರನ್ನು ನೇಮಿಸಿದ್ದಾರೆ. ನನ್ನ ಗಮನಕ್ಕೆ ಬರದೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಂದು ಹೋಗಿದ್ದಾರೆ. ಜೆಡಿಎಸ್‌ನಿಂದ ನನ್ನನ್ನು ದೂರ ಇಟ್ಟಿದ್ದಾರೆ’ ಎಂದು ಶಾಸಕ ಜಿ.ಟಿ.ದೇವೇಗೌಡರು ತಿಳಿಸಿದ್ದಾರೆ.
ಜಿಟಿಡಿ ನೇತೃತದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ
ಮೈಸೂರು: ಶಾಸಕ ಜಿ.ಟಿ.ದೇವೇಗೌಡರ ನಾಯ ಕತ್ವದಲ್ಲೇ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸು ತ್ತದೆ. ಅವರ ಕುಟುಂಬದವರೇ ಎಂಎಲ್‌ಸಿ ಚುನಾ ವಣೆಗೆ ಜೆಡಿಎಸ್‌ನಿಂದ ಕಣಕ್ಕಿಳಿದರೂ ಆಶ್ಚರ್ಯ ವಿಲ್ಲ ಎಂದು ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತರಾದ ಸಾ. ರಾ.ಮಹೇಶ್ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮೈಸೂರು-ಚಾಮರಾಜನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆ ಯುವ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಬಸಂತ್ ನಂಜಪ್ಪ, ವಿವೇಕಾನಂದ, ಅಭಿಷೇಕ್, ಕೃಷ್ಣ ನಾಯಕ್ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಶಾಸಕ ಜಿ.ಟಿ.ದೇವೇಗೌಡರ ಕುಟುಂಬದಿಂದಲೇ ಅಭ್ಯರ್ಥಿಯಾದರೂ ಆಶ್ಚರ್ಯವಿಲ್ಲ ಎಂದರು. ಶಾಸಕ ಸಂದೇಶ್ ನಾಗರಾಜ್ ಜೆಡಿಎಸ್ ತೊರೆ ಯುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಗಮನ ಸೆಳೆ ದಾಗ, ಸಂದೇಶ್ ನಾಗರಾಜ್ ಕಳೆದ ಚುನಾವಣೆ ಯಲ್ಲಿ ಗೆದ್ದ ದಿನವೇ ಅವರು ಜೆಡಿಎಸ್‌ನಲ್ಲಿ ಮುಂದುವರಿಯುವುದು ಮುಗಿದ ಅಧ್ಯಾಯ ವಾಗಿತ್ತು ಎಂದರು.