Advertisement

ನವದೆಹಲಿಯ ಕರ್ನಾಟಕ ಭವನದ ಖಾಲಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

05:53 PM Aug 28, 2021 | Team Udayavani |

ನವದೆಹಲಿ: ನವದೆಹಲಿಯ ಕರ್ನಾಟಕ ಭವನದ ವಿವಿಧ ವೃಂದದ ಖಾಲಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಾಯುವಿಕೆ ಎರಡನೇ ಪಟ್ಟಿ  ಇಂದು (ಆ.28) ಪ್ರಕಟವಾಗಿದೆ.

Advertisement

ಕರ್ನಾಟಕ ಭವನದಲ್ಲಿ ವಿವಿಧ ವೃಂದಗಳಲ್ಲಿ ಖಾಲಿಯಿರುವ 32 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದಕ್ಕಾಗಿ ದಿನಾಂಕ: 20-02-2021 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಧಿಸೂಚನೆಯನುಸಾರ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆಪಟ್ಟಿಯಂತೆ 2021ರ ಆಗಸ್ಟ್ 24 ರಂದು ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ದಾಖಲೆ ಪರಿಶೀಲನೆ ಮತ್ತು ಅನ್ವಯಿಸುವ ಹುದ್ದೆಗಳಿಗೆ ಪ್ರಾವೀಣ್ಯತೆ ಪರೀಕ್ಷೆ ನಡೆಸಲಾಗಿದೆ.

ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ, ಕಾಯುವಿಕೆ ಪಟ್ಟಿ ಹಾಗೂ ಹೆಚ್ಚಿನ ಮಾಹಿತಿಯನ್ನು ಇಂದು( ಆಗಸ್ಟ್ 27) ಪ್ರಕಟಿಸಲಾಗಿದ್ದು, ವಿವರದ ಮಾಹಿತಿಗಾಗಿ www.karnatakabhavan.karnataka.gov.in  ವೀಕ್ಷಿಸಬಹುದಾಗಿದೆ.

ಬಾಧಿತರಾಗಬಹುದಾದ ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಯನ್ನು ದಿನಾಂಕ : 04-09-2021ರ ಸಂಜೆ 5-30ರೊಳಗೆ ಲಿಖಿತವಾಗಿ ಅಥವಾ ಇಮೇಲ್ ಮೂಲಕ ಸಲ್ಲಿಸಬಹುದಾಗಿದೆ ಎಂದು  ನೇರ ನೇಮಕಾತಿ   ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ನವದೆಹಲಿಯ ಕರ್ನಾಟಕ ಭವನದ ಉಪ ನಿವಾಸಿ ಆಯುಕ್ತರೂ ಆದ    ಎಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next