Advertisement

New Delhi: ಹುಸಿ ಬಾಂಬ್‌ ಕರೆ ಪತ್ತೆಗೆ ಇಂಟರ್‌ಪೋಲ್‌ ಮೊರೆ!

09:14 AM Nov 01, 2024 | Team Udayavani |

ಹೊಸದಿಲ್ಲಿ: ಕಳೆದ 2 ವಾರಗಳಲ್ಲಿ ಭಾರತದ 400ಕ್ಕೂ ಅಧಿಕ ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆಗಳು ಬಂದಿದ್ದು, ಈ ಕುರಿತ ತನಿಖೆಗೆ ಕೇಂದ್ರ ಸರಕಾರ ಈಗ ಅಮೆರಿಕ ಸರಕಾರ ಹಾಗೂ ಇಂಟರ್‌ಪೋಲ್‌ನ ಸಹಾಯ ಕೋರಿದೆ. ವಿಶೇಷವಾಗಿ ಅಮೆರಿಕದಲ್ಲಿರುವ ಖಲಿಸ್ಥಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ನೇತೃತ್ವದ ಸಿಖ್‌ ಫಾರ್‌ ಜಸ್ಟಿಸ್‌ ಜತೆಗೆ ಬೆದರಿಕೆ ಒಡ್ಡಿದವರು ಸಂಪರ್ಕ ಹೊಂದಿದ್ದರೇ ಎಂಬ ಮಾಹಿತಿ ಕಲೆಹಾಕಲು ಮುಂದಾಗಿದೆ.

Advertisement

ನ.1ರಿಂದ 19ರವರೆಗೆ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ಭಾರತೀಯ ಸಿಕ್ಖ್ರಿಗೆ ಉಗ್ರ ಪನ್ನು ಕರೆ ನೀಡಿರುವಂತೆಯೇ ಕೇಂದ್ರ ಸರಕಾರದ ಈ ಕ್ರಮ ಮಹತ್ವ ಪಡೆದಿದೆ. ಭಾರತದ ಮನವಿಗೆ ಸ್ಪಂದಿಸಿರುವ ಅಮೆರಿಕದ ಫೆಡರಲ್‌ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ (ಎಫ್ಬಿಐ) ಭಾರತಕ್ಕೆ ನೆರವು ನೀಡಲು ಮುಂದಾಗಿದೆ. ವಿಮಾನಗಳಿಗೆ ಬೆದರಿಕೆ ಒಡ್ಡಲು ದುಷ್ಕರ್ಮಿಗಳು ವಿಪಿಎನ್‌ ನೆಟ್‌ವರ್ಕ್‌ ಬಳಸಿದ್ದಾರೆ. ತನಿಖೆಯಲ್ಲಿ ಬ್ರಿಟನ್‌ ಮತ್ತು ಜರ್ಮನಿಯ ಕೆಲವು ಪ್ರದೇಶಗಳಿಂದ ಬೆದರಿಕೆ ಕರೆ ಮತ್ತು ಇ-ಮೇಲ್‌ ಬಂದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆ 2 ರಾಷ್ಟ್ರಗಳಿಂದ ತನಿಖೆಗೆ ಪೂರಕವಾದ ಮಾಹಿತಿ ಪಡೆಯುವುದಾಗಿ ಇಂಟರ್‌ಪೋಲ್‌ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next