Advertisement
ಸುಮಾರು 600 ಎಕರೆ ಪ್ರದೇಶಕ್ಕೆ ನೀರೊದಗಿಸುವ ಸಲುವಾಗಿ 25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನಿರ್ಮಿಸಿದ್ದ ಅಣೆಕಟ್ಟಿನ ಕಾಮಗಾರಿ ದೋಷ ಪೂರಿತವಾಗಿದ್ದು ಹಲವಾರು ಬಾರಿ ದುರಸ್ತಿ ಮಾಡಿದ್ದರೂ ಸಮಸ್ಯೆಗೆ ಮುಕ್ತಿ ದೊರೆತಿರಲಿಲ್ಲ. ಈ ಹಿನ್ನಲೆಯಲ್ಲಿ ಹಳೆಯ ಅಣೆಕಟ್ಟೆ ಬಳಿಯಲ್ಲಿಯೇ ನೂತನ ಅಣೆಕಟ್ಟು ನಿರ್ಮಿಸಲಾಗುತ್ತಿದೆ.
ಮುಳುಗಡೆ ಭೀತಿಯಿಂದ ಈಗ ನಿರ್ಮಾಣವಾಗುತ್ತಿರುವ ಅಣೆಕಟ್ಟನ್ನೂ ಹಿಂದಿನ ಅಣೆಕಟ್ಟಿನಷ್ಟೇ ಅಂದರೆ 7.5 ಮೀಟರ್‌ನಷ್ಟು ಎತ್ತರಿಸಲಾಗುತ್ತ¤ದೆ. ಅಣೆಕಟ್ಟೆಯ ನಾಲ್ಕು ಕಡೆ 4×100 ಮೀಟರ್ ವ್ಯಾಪ್ತಿಯಲ್ಲಿ ನದಿಗೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ಮೂವತ್ತಕ್ಕಿಂತ ಹೆಚ್ಚಿನ ಕಿಂಡಿಗಳನ್ನೂ ನಿರ್ಮಿಸಲಾಗುವುದು. ಕಿಂಡಿಗಳ ಸುತ್ತಳತೆಯನ್ನೂ ಹೆಚ್ಚಿಸಲಾಗುವುದು. ನಾಲ್ಕು ಕಡೆ ಗೇಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ನದಿಯಲ್ಲಿ ಬೆಡ್ ಹಾಕುವ ಕಾಮಗಾರಿ ನಡೆಯುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನ ನೀರಿನ ಮೇಲ್ಮಟ್ಟದವರೆಗಿನ ಕಾಮಗಾರಿ ಪೂರ್ಣಗೊಳಿಸುವ ಇರಾದೆಯನ್ನು ಅಧಿಕಾರಿಗಳು ಹೊಂದಿದ್ದಾರೆ. ಮರಳಿನ ಕೊರತೆಯಿಂದ ಹಿನ್ನಡೆ
ಚುನಾವಣೆ ಹಾಗೂ ಮರಳಿನ ಕೊರತೆಯಿಂದ ಯೋಜನೆ ಆರಂಭಕ್ಕೆ ಹಿನ್ನಡೆಯಾಗಿದೆ. ಮಳೆಗಾಲ ಸೇರಿದಂತೆ ಹನ್ನೆರಡು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹಿಂದಿನ ಅಣೆಕಟ್ಟೆಗೆ ಹೊಂದಿಕೊಂಡು ನಿರ್ಮಿಸಿದ್ದ ಶೆಡ್ಡು ಕೂಡಾ ಶಿಥಿಲವಾಗಿದ್ದು, ಅದನ್ನೂ ನಿರ್ಮಾಣ ಮಾಡಲಾಗುವುದು. ಅಣೆಕಟ್ಟು ನಿರ್ಮಾಣವಾದ ಬಳಿಕ ಹಳೆ ಅಣೆಕಟ್ಟನ್ನು ಕೆಡವಲಾಗುವುದು. ಅಣೆಕಟ್ಟಿಗೆ ಗೇಟ್‌ಗಳನ್ನು ನಿರ್ಮಿಸಲಾಗುತ್ತಿದೆ.
ಎಸ್. ಟಿ. ಗೌಡ, ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್
Related Articles
ಅಣೆಕಟ್ಟಿನ ನಿರ್ಮಾಣದಿಂದಾಗಿ ಸುತ್ತಮುತ್ತಲಿನ ಬಾವಿಗಳ ಅಂತರ್ಜಲ ಮಟ್ಟ ಏರಿಕೆ ಹಾಗೂ ಕೃಷಿಗೂ ಅನುಕೂಲವಾಗಲಿದೆ. ಇದರಿಂದ ಬಳ್ಕುಂಜೆ, ಇನ್ನ, ಮುಂಡ್ಕೂರು, ಸಾಣೂರುವರೆಗಿನ ಗ್ರಾಮದ ಪ್ರದೇಶಗಳ ನೀರಿನ ಮಟ್ಟ ಏರಿಕೆಗೆ ಈ ಅಣೆಕಟ್ಟು ಕಾರಣವಾಗಲಿದೆ.
-ಜಿತೇಂದ್ರ ಫುಟಾಡೋ, ಪಲಿಮಾರು ಗ್ರಾ. ಪಂ. ಅಧ್ಯಕ್ಷ.
Advertisement