Advertisement

New Criminal ಕಾನೂನು ಜಾರಿ: ಪೊಲೀಸ್‌ ಠಾಣೆಗಳಲ್ಲಿ ಜು.1ಕ್ಕೆ ವಿಶೇಷ ಕಾರ್ಯಕ್ರಮ

12:39 AM Jun 29, 2024 | Team Udayavani |

ಹೊಸದಿಲ್ಲಿ: ಜು.1ರಂದು ದೇಶಾದ್ಯಂತ ಎಲ್ಲ 17,500ಕ್ಕೂ ಹೆಚ್ಚು ಪೊಲೀಸ್‌ ಠಾಣೆಗಳಲ್ಲಿ ವಿಶೇಷ ಕಾರ್ಯಕ್ರಮ ವನ್ನು ಆಯೋಜಿಸಲು ನಿರ್ಧರಿಸಲಾ ಗಿದೆ. ಈ ದಿನದಂದು ಹೊಸ ಕ್ರಿಮಿನಲ್‌ ಕಾನೂನುಗಳು ಜಾರಿಯಾಗುವ ಹಿನ್ನೆ ಲೆಯಲ್ಲಿ ಎಲ್ಲರಿಗೂ ಮಾಹಿತಿ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಈ ಕಾರ್ಯಕ್ರಮದಲ್ಲಿ ಮಹಿಳೆಯರು, ಯುವಕರು, ಹಿರಿಯ ನಾಗರಿಕರು ಮತ್ತು ಅಸಾಧಾರಣ ವ್ಯಕ್ತಿಗಳು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಠಾಣೆಯ ಅಧಿಕಾರಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜ ನೆಗೊಳ್ಳಲಿದ್ದು, ಹೊಸ ಕಾನೂನಿನ ಬಗ್ಗೆ ಮಾಹಿತಿ ನೀಡಲು ಇದನ್ನು ಆಯೋ ಜಿಸಲಾಗಿದೆ ಎಂದು ಮೂಲಗಳು ಹೇಳಿವೆ. ಝೀರೋ ಎಫ್ಐಆರ್‌, ದೂರು ದಾಖಲು, ಎಲೆಕ್ಟ್ರಾನಿಕ್‌ ಮಾಧ್ಯಮದ ಮುಖಾಂತರ ಸಮನ್ಸ್‌ ಜಾರಿ ಮತ್ತು ಅಪರಾಧ ಸ್ಥಳಗಳ ಕಡ್ಡಾಯ ವೀಡಿಯೋ ಚಿತ್ರೀಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಲಾಗುತ್ತದೆ ಎನ್ನಲಾಗಿದೆ.

ನೂತನ ಕ್ರಿಮಿನಲ್‌ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಭಾರತೀಯ ಸಾಕ್ಷ್ಯ ಅಧಿನಿಯಮ ಗಳು ಜು.1ರಂದು ಜಾರಿಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next