Advertisement

Uttar Pradesh:  ಅತ್ತೆ ಜತೆ ದೈಹಿಕ ಸಂಬಂಧಕ್ಕಾಗಿ ಪತಿ ಕಿರುಕುಳ; ದೂರು ನೀಡಿದ ಪತ್ನಿ!

12:30 PM Jun 26, 2024 | Team Udayavani |

ಲಕ್ನೋ(ಉತ್ತರಪ್ರದೇಶ): ಅತ್ತೆ(Mother in-laws) ಜತೆ ದೈಹಿಕ ಸಂಬಂಧ ಇರಿಸಿಕೊಳ್ಳುವ ನಿಟ್ಟಿನಲ್ಲಿ ಬಲವಂತ ಮಾಡಿ ತನಗೆ ಕಿರುಕುಳ(Harsssment) ನೀಡಿ ಪತಿ ಮತ್ತು ಅತ್ತೆ ಹಲ್ಲೆ ನಡೆಸಿರುವುದಾಗಿ ಉತ್ತರಪ್ರದೇಶದ ಆಗ್ರಾದ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Chikkamagaluru: ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು ಸೇರಿ ವಸ್ತುಗಳ ಕಳ್ಳತನ

ಎಫ್‌ ಐಆರ್‌ (FIR) ಪ್ರಕಾರ, 2022ರಲ್ಲಿ ದೂರುದಾರ ಮಹಿಳೆ ಗಾಜಿಪುರ್‌ ಜಿಲ್ಲೆಯ ಅಲೋಕ್‌ ಉಪಾಧ್ಯಾಯ ಎಂಬಾತನ ಜತೆ ವಿವಾಹವಾಗಿತ್ತು. ಮದುವೆಯಾದ ಬಳಿಕ ಕಿರುಕುಳ ನೀಡಲು ಪ್ರಾರಂಭಿಸಿರುವುದಾಗಿ ತಿಳಿಸಿದೆ.

ತನ್ನ ಜತೆ ದೈಹಿಕ ಸಂಬಂಧ ಹೊಂದುವಂತೆ ಅತ್ತೆ ಒತ್ತಡ ಹೇರಿದ್ದು, ಅದಕ್ಕೆ ಒಪ್ಪದಿದ್ದಾಗ ಅತ್ತೆ ಬ್ಲೇಡ್‌ ನಿಂದ ತನ್ನ ಮೇಲೆ ದಾಳಿ ನಡೆಸಿದ್ದು, ಇದರ ಪರಿಣಾಮ ತನ್ನ ಕೈಗೆ ಐದು ಕಡೆ ಹೊಲಿಗೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ.

ನಾದಿನಿ ಕೂಡಾ ನನ್ನ ಬಟ್ಟೆಯನ್ನೆಲ್ಲಾ ಬಚ್ಚಿಟ್ಟುಕೊಂಡಿದ್ದು, ಉಟ್ಟ ಬಟ್ಟೆಯನ್ನೇ ತಿಂಗಳು ಕಾಲ ಧರಿಸುವಂತೆ ಬಲವಂತ ಮಾಡುತ್ತಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಅಷ್ಟೇ ಅಲ್ಲ ವರ ದಕ್ಷಿಣೆ ನೀಡುವಂತೆ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Advertisement

2023ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಾಗಲೂ, ಪತಿ ಮಗುವಿನ ತಂದೆಯ ಬಗ್ಗೆ ಪ್ರಶ್ನಿಸಿ ಹಲ್ಲೆ ನಡೆಸಿ, ಮನೆಯಿಂದ ಹೊರ ಹಾಕಿದ್ದು, ಈ ಸಂದರ್ಭದಲ್ಲಿ ನೆರೆಹೊರೆಯವರು ಮಧ್ಯಪ್ರವೇಶಿಸಿ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಆಗ್ರಾ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next