Advertisement
ವಿಡಿಯೋದಲ್ಲಿ ಏನಿದೆ?ಭಾರತೀಯ ಅಭಿಮಾನಿ ಕ್ಷೌರದ ಅಂಗಡಿಯಲ್ಲಿರುತ್ತಾರೆ. ಆಗ ಅಲ್ಲಿಗೆ ಬರುವ ಪಾಕ್ ಅಭಿಮಾನಿ ಫಾದರ್ ಡೇ ಪ್ರಯುಕ್ತ ಒಂದು ಗಿಫ್ಟ್ ಕೊಡುತ್ತಾನೆ. ಅದರಲ್ಲಿ ಒಂದು ಕರವಸ್ತ್ರ ಇರುತ್ತದೆ. ಇದು ಯಾಕೆಂದು ಕೇಳಿದಾಗ ನಮ್ಮ ವಿರುದ್ಧ ಸೋತಾಗ ನಿಮಗೆ ಮುಖ ಮುಚ್ಚಿಕೊಳ್ಳಲು ಬೇಕಾಗುತ್ತದೆ ಎಂದು ಪಾಕಿ ಉತ್ತರಿಸುತ್ತಾನೆ. ಪಾಕಿಯ ಠಕ್ಕತನಕ್ಕೆ ಉತ್ತರ ಕಲಿಸುವ ಭಾರತೀಯ ಅಭಿಮಾನಿ ಮತ್ತು ಆ ಕ್ಷೌರಿಕ ಆ ಪಾಕ್ ಅಭಿಮಾನಿಗೆ ಅಭಿನಂದನ್ ರೀತಿಯ ಕ್ಷೌರ ಮಾಡುತ್ತಾರೆ. ಇದರಿಂದ ಗಲಿಬಿಲಿಗೊಂಡ ಪಾಕಿ ನಾನು ಹೇಗೆ ಹೊರಗೆ ಮುಖ ತೋರಿಸಲಿ ಎಂದಾಗ ಅದೇ ಕರವಸ್ತ್ರ ನೀಡಿ ಇದರಿಂದ ಮುಖ ಮುಚ್ಚು ಎಂದು ಹೇಳುವ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Related Articles
Advertisement