Advertisement
ಹೌದು, ಚೀನಾದ ಸಂಶೋಧಕರು ಬಾವಲಿಗಳಲ್ಲಿ ರೈನೋಲೋಫಸ್ ಪುಸಿಲಸ್ ವೈರಸ್ ಎಂಬ ಹೊಸದೊಂದು ವೈರಸ್ ನನ್ನು ಪತ್ತೆ ಹಚ್ಚಿದ್ದು, ಇದು ಕೋವಿಡ್ ಸೋಂಕಿನ ಮತ್ತೊಂದು ರೂಪಾಂತರ ಎಂದು ಹೇಳಲಾಗುತ್ತಿದೆ.
Related Articles
Advertisement
ಕೋವಿಡ್ ಸೋಂಕಿನ ಮತ್ತೊಂದು ತಳಿ..!?
2020 ರಲ್ಲಿ ಚೀನಾದ ವುಹಾನ್ ನಲ್ಲಿ SARS-CoV-2 ಎಂಬ ಸಾಂಕ್ರಾಮಿಕ ಸೋಂಕು ಗುರುತಿಸಲ್ಪಟ್ಟಿತ್ತು, ಇಡೀ ಜಗತ್ತಿಗೆ ಹಬ್ಬಿ ನಾಗರಿಕ ವ್ಯವಸ್ಥೆಯನ್ನೇ ಅಡಿಮೇಲಾಗಿಸಿತ್ತು. ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡ SARS-CoV-2 ಸೋಂಕಿನ ಮತ್ತೊಂದು ತಳಿ ಇದು ಎಂದು ಅಲ್ಲಿನ ಸಂಶೋಧಕರು ಹೇಳಿರುವುದಾಗಿ ವರದಿಯಾಗಿದೆ.
ಸಂಶೋಧಕರು ಮೇ 2019 ಮತ್ತು ನವೆಂಬರ್ 2020 ರ ನಡುವೆ ಯುನ್ನಾನ್ ಪ್ರಾಂತ್ಯದ ಒಂದು ಕೌಂಟಿಯಲ್ಲಿ ಉಷ್ಣವಲಯದ ಸಸ್ಯೋದ್ಯಾನ ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬಾವಲಿಗಳಿಂದ 283 ಮಲ ಮಾದರಿಗಳು, 109 ಸ್ವ್ಯಾಬ್ ಗಳು ಮತ್ತು 19 ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳ ಪಡಿಸಿದಾಗ ಈ ಹೊಸ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಇನ್ನು, ವಿವಿಧ ಬಾವಲಿ ಪ್ರಭೇದಗಳಿಂದ ಒಟ್ಟು 24 ಕರೋನ ವೈರಸ್ ವಂಶವಾಹಿಗಳನ್ನು ಸಂಯೋಜಿಸಿದ್ದೇವೆ, ಇದರಲ್ಲಿ ನಾಲ್ಕು SARS-CoV-2 ಗೆ ಸಂಬಂಧಿಸಿದವು ಎಂದು ಚೀನಾದ ಶಾಂಡೊಂಗ್ ವಿಶ್ವವಿದ್ಯಾಲಯದ ಚೀನಾದ ಸಂಶೋಧಕರು ಹೇಳಿರುವುದಾಗಿ ಸೆಲ್ ಜರ್ನಲ್ ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.
ಇದನ್ನೂ ಓದಿ : ಬೈಕ್ ಅಪಘಾತ : ನಟ ಸಂಚಾರಿ ವಿಜಯ್ ಗಂಭೀರ ಗಾಯ