ಮಹಾನಗರ, ಜ. 2: ಹಂಪನಕಟ್ಟೆ ಜಂಕ್ಷನ್‌ನಲ್ಲಿ ಒಂದು ಭಾಗದ ರಸ್ತೆ ಕಾಮ ಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಹಂಪನಕಟ್ಟೆ ಜಂಕ್ಷನ್‌ನಿಂದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ(ಲೈಟ್ ಹೌಸ್ ಹಿಲ್) ಕಡೆಗೆ ಹೋಗುವ ವಾಹನಗಳು ಈಗ ಹೊಸ ರಸ್ತೆಯಲ್ಲೇ ಸಂಚರಿಸಲು ಅವಕಾಶ ನೀಡಲಾಗಿದೆ.
ಹಂಪನಕಟ್ಟೆ ಜಂಕ್ಷನ್- ಬಾವುಟಗುಡ್ಡೆ ರಸ್ತೆಯ ಕಾಂಕ್ರೀಟ್, ಫುಟ್‌ಪಾತ್ ಹಾಗೂ ಒಳಚರಂಡಿ ಕಾಮಗಾರಿಯನ್ನು ನ. 8ರಂದು ಆರಂಭಿಸಿ, ಭರದಿಂದ ನಡೆಸ ಲಾಗಿತ್ತು. ಇದೀಗ 180 ಮೀ. ಉದ್ದದ ರಸ್ತೆಯ ಒಂದು ಭಾಗದ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ.
ಕಾಮಗಾರಿ ಹಿನ್ನೆಲೆ ನ. 8ರಿಂದಲೇ ಹಂಪನಕಟ್ಟೆ ಪರಿಸರದಲ್ಲಿ ಸಂಚಾರ ಬದಲಾವಣೆ ಮಾಡಲಾಗಿತ್ತು. ಲೈಟ್‌ಹೌಸ್ ಹಿಲ್ – ಬಾವುಟಗುಡ್ಡೆ – ಜ್ಯೋತಿ ವೃತ್ತ ಕಡೆಗೆ ಸಂಚರಿಸುವ ವಾಹನ ಗಳು ಕೆ.ಎಸ್. ರಾವ್ ರಸ್ತೆಯಾಗಿ ಹಳೆ ಬಸ್ ನಿಲ್ದಾಣದೊಳಗಿಂದ ತೆರಳಲು ಪರ್ಯಾಯ ವ್ಯವಸ್ಥೆ ಮಾಡಿಕೊಡ ಲಾಗಿತ್ತು. ಈಗ ಹಂಪನಕಟ್ಟೆ ಜಂಕ್ಷನ್ ಮುಖಾಂತರವೇ ಸಂಚರಿಸಬಹುದು. ಇನ್ನೊಂದು ಭಾಗದ ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಜ್ಯೋತಿ – ಮಿಲಾಗ್ರಿಸ್ ಮೂಲಕ ಹಂಪನಕಟ್ಟೆ ಜಂಕ್ಷನ್ ಕಡೆಗೆ ಬರಲು ಅವಕಾಶ ಸದ್ಯಕ್ಕಿಲ್ಲ.
ಪರ್ಯಾಯ ವ್ಯವಸ್ಥೆಯಂತೆ ಜ್ಯೋತಿ ವೃತ್ತ ಕಡೆಯಿಂದ ಬರುವ ವಾಹನಗಳು ಮಿಲಾಗ್ರಿಸ್ ರಸ್ತೆ-ವೆನಾÉಕ್ ಆಸ್ಪತ್ರೆ ಸಮೀಪದ ರಸ್ತೆ-ರೈಲು ನಿಲ್ದಾಣ ರಸ್ತೆಯಾಗಿ ಸ್ಟೇಟ್‌ಬ್ಯಾಂಕ್ ಕಡೆಗೆ ಸಂಚರಿಸಬೇಕಾಗಿದೆ.
ರಥಬೀದಿ: ಹೊಸ ರಸ್ತೆ ಬಿರುಕು : ರಥಬೀದಿಯಲ್ಲಿ ಇತ್ತೀಚೆಗೆ ನಿರ್ಮಾ ಣಗೊಂಡ ನೂತನ ಕಾಂಕ್ರೀಟ್ ರಸ್ತೆಯ ಕೆಲವೆಡೆ ಬಿರುಕು ಕಾಣಸಿಕೊಂಡ ಹಿನ್ನೆಲೆ ಯಲ್ಲಿ ಅದನ್ನು ಅಗೆದು ತೇಪೆ ಹಾಕಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಹಂಪನಕಟ್ಟೆ ಜಂಕ್ಷನ್ ರಸ್ತೆಯ ಒಂದು ಭಾಗದ ಕಾಮಗಾರಿ ಪೂರ್ಣಗೊಂಡು ಅದರಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನೊಂದು ಭಾಗದ ಕಾಮಗಾರಿ ಬಾಕಿ ಇದೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಈಗ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ನಡೆಯುತ್ತಿಲ್ಲ. ಕಾಮಗಾರಿ ಮತ್ತೆ ಶೀಘ್ರ ಆರಂಭವಾಗುವ ನಿರೀಕ್ಷೆ ಇದೆ. ರಥಬೀದಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಸಮೀಕ್ಷೆ ನಡೆಸಲು ಎನ್‌ಐಟಿಕೆ ತಜ್ಞರಿಗೆ ತಿಳಿಸುತ್ತೇನೆ.
–ವೇದವ್ಯಾಸ ಕಾಮತ್, ಶಾಸಕರು