Advertisement

ಹಳೇ ಪಂಟ್ರು ಸಿನಿನೆಂಟ್ರು

11:52 PM May 30, 2019 | Team Udayavani |

ಅಮಾಯಕ ಹುಡುಗರು ರೌಡಿಸಂಗೆ ಬರೋದು, ಅವರನ್ನು ಬಳಸಿಕೊಂಡು ಕೆಲಸ ಮಾಡಿಸುವ ಒಂದಷ್ಟು ಮಂದಿ, ಕೊನೆಗೊಂದು ಸಂದೇಶ … ಕನ್ನಡ ಚಿತ್ರರಂಗದಲ್ಲಿ ಈ ತರಹದ ಅದೆಷ್ಟೊ ಸಿನಿಮಾಗಳು ಬಂದಿವೆ. ಅದರಲ್ಲೂ ಚಿತ್ರರಂಗಕ್ಕೆ ಬರುವ ಕೆಲವು ಹೊಸ ನಾಯಕ ನಟರಿಗೆ ಅಂಡರ್‌ವರ್ಲ್ಡ್ ಶೇಡ್‌ನ‌ ಚಿತ್ರಗಳಲ್ಲಿ ಮಿಂಚಬೇಕೆಂಬ ಆಸೆ. ಅದೇ ಕಾರಣದಿಂದ ಕೆಲವು ಹೊಸ ತಂಡಗಳು ಈ ತರಹದ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಈಗ “ಪಂಟ್ರಾ’ ಎಂಬ
ಹೊಸಬರ ತಂಡ ಕೂಡಾ ಇದನ್ನೇ ಮಾಡಿದೆ.

Advertisement

ಹೊಸಬರೇ ಸೇರಿ ಮಾಡಿರುವ “ಪಂಟ್ರಾ’ ಚಿತ್ರದಲ್ಲಿ ಮೂವರು ಅಮಾಯಕ ಹುಡುಗರನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಮತ್ತು ಇದರಿಂದ ಏನೆಲ್ಲಾ ಆಗುತ್ತದೆ ಎಂಬ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಜೊತೆಗೆ ತಪ್ಪನ್ನು ಕ್ಷಮಿಸಿ ಒಳ್ಳೆಯವರಾಗಲು ಸಹಾಯ ಮಾಡಿ ಎಂಬ ಸಂದೇಶವೂ ಇದೆಯಂತೆ. ಚಿತ್ರದಲ್ಲಿ ರೌಡಿಸಂ ಜೊತೆಗೆ ಕಾಮಿಡಿ, ಸೆಂಟಿಮೆಂಟ್‌ಗೂ ಜಾಗ ಕಲ್ಪಿಸಲಾಗಿದೆ ಎಂಬುದು ಚಿತ್ರತಂಡದ ಮಾತು. ಧನು ಆರ್‌. ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಪ್ರಶಾಂತ್‌ ಸಿದಿಟಛಿ ಪ್ರಮುಖ ಪಾತ್ರ ಮಾಡಿದ್ದಾರೆ. ಇಲ್ಲಿವರೆಗೆ ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಪ್ರಶಾಂತ್‌ ಈ ಚಿತ್ರದಲ್ಲಿ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರಂತೆ.

ಉಳಿದಂತೆ ಶಿವಮೊಗ್ಗ ಸಂತೋಷ್‌ ಮತ್ತು ಸುನಿಲ್‌ ನಟಿಸಿದ್ದಾರೆ. ಚಿತ್ರದಲ್ಲಿ ಮಧು ಮಂದಗೆರೆ, ಮೇಘಶ್ರೀ, ಉಗ್ರಂ ರವಿ, ನಾರಾಯಣ ಸ್ವಾಮಿ ನಟಿಸಿದ್ದಾರೆ. ಲಕ್ಷೀ ಪತಿಕುಮಾರ್‌ ನಿರ್ಮಾಣ ಚಿತ್ರಕ್ಕಿದೆ. ಎಂ.ಪಿ.ಬಸವಣ್ಣ, ಅರ್ಜುನ್‌ ಶೆಟ್ಟಿ ಸಾಹಿತ್ಯದ ಹಾಡುಗಳಿಗೆ ಎಂ.ಎಸ್‌.ತ್ಯಾಗರಾಜು ಸಂಗೀತ
ನೀಡಿದ್ದಾರೆ. ಮಂಡ್ಯ, ಮಳವಳ್ಳಿ, ಬೆಂಗಳೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಅಂದಹಾಗೆ, ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next