Advertisement
ಈ ಮಕ್ಕಳ ಆಟಿಕೆಗಳ ವಸ್ತು ಸಂಗ್ರಹಾಲಯದಲ್ಲಿ, ಹೆಚ್ಚಿನವುಗಳು ದಕ್ಷಿಣ ಕರ್ನಾಟಕದ ವಿವಿಧ ಭಾಗಗಳಲ್ಲಿ, ಮಕ್ಕಳ ಬಾಲ್ಯಾವಸ್ಥೆಯಿಂದಲೇ ಅವರ ಪಾಲನೆಯಲ್ಲಿ ಬಳಕೆಯಾಗುತ್ತಿದ್ದ ಸಾಂಪ್ರದಾಯಿಕ ಆಟಿಕೆಗಳಾಗಿವೆ. ಇವುಗಳಲ್ಲಿ ಕೆಲವು ಮಕ್ಕಳ ಕೌಶಲ್ಯದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಉದಾ: ಮೋಟಾರು, ನರವೈಜ್ಞಾನಿಕ ಮತ್ತು ಅರಿವಿನ ಕೌಶಲ್ಯವನ್ನು ಬೆಳೆಸುವಂತವು. ಆದರೆ ಈ ಆಧುನಿಕ ಯುಗದಲ್ಲಿ ಈ ವಸ್ತುಗಳು ಈಗ ನೇಪಥ್ಯಕ್ಕೆ ಸೇರಿವೆ. ಚಿಕಣಿ ಗಾತ್ರದ ಪ್ರಾಣಿಗಳ ಆಕಾರಗಳು, ಅಡುಗೆ ಪಾತ್ರೆ ಪರಿಕರಗಳು, ಚೆನ್ನಪಟ್ಟಣದ ಮರದ ಗೊಂಬೆಗಳು, ಸಾಂಪ್ರದಾಯಿಕ ಮಣೆಯಾಟಗಳು, ಮಕ್ಕಳ ಆಸಕ್ತಿ, ಗಮನವನ್ನು ಹಿಡಿದಿಡುವ ಆಧುನಿಕ ಪ್ರಪಂಚದ ಬೇರೆ ಬೇರೆ ಪ್ರದೇಶಗಳ ಹಲವಾರು ಆಕರ್ಷಕ ಆಟಿಕೆಗಳು ಮತ್ತು ಕೊನೆಯದಾಗಿ ಚಿತ್ತಾಕರ್ಷಕವಾಗಿ ಕೆತ್ತಲ್ಪಟ್ಟ ಮರದ ಹಲವಾರು ಸುಂದರ ತೊಟ್ಟಿಲುಗಳು ಸಹ ಇವೆ.
Related Articles
Advertisement
ಹಸ್ತ ಶಿಲ್ಪ ಮನೆಯೇ ಶೆಣೈಯವರ ಅವರ ಮೊದಲ ಪ್ರಯೋಗ ಸ್ಥಳವಾಗಿತ್ತು. ಇಲ್ಲಿ ಅವರು ತಾವು ಸಂಗ್ರಹಿಸಿ ರಕ್ಷಿಸಿದ, ಹಳೆಯ ವಸ್ತುಗಳನ್ನು ಸುಂದರ ಮತ್ತು ಸಾಂಸ್ಕೃತಿಕ ಚೌಕಟ್ಟಿನಲ್ಲಿ ಅವುಗಳನ್ನು ಒಪ್ಪ ಓರಣವಾಗಿ ಜೋಡಿಸಿ ಪ್ರದರ್ಶಿಸಿದ್ದರು. ಇಲ್ಲಿಯೇ ಅವರು ಕೇವಲ ಕಲಾಕೃತಿಗಳ ಅವಶೇಷಗಳನ್ನು ಸಂಗ್ರಹಿಸುವ ಬದಲಿಗೆ ಇಡೀ ಮನೆಗಳನ್ನೇ ಸ್ಥಳಾಂತರಿಬೇಕೆನ್ನುವ ಕನಸನ್ನು ಕಂಡದ್ದು ಮತ್ತು ಅದರ ಫಲಸ್ವರೂಪವೇ ಹಸ್ತ ಶಿಲ್ಪ ಸಂಸ್ಕೃತಿ ಗ್ರಾಮದ ಹುಟ್ಟು. ಈ ಮಕ್ಕಳ ಆಟಿಕೆಗಳ ವಸ್ತು ಸಂಗ್ರಹಾಲಯವನ್ನು ಈ ಮನೆಯಲ್ಲಿ ಸ್ಥಾಪಿಸುವ ಉದ್ದೇಶ ಎಳೆಯ ವಯಸ್ಸಿನ ಮಕ್ಕಳು ಪಾರಂಪರಿಕ ಸೌಂದರ್ಯವುಳ್ಳ ಪರಿಸರವನ್ನು ಗಮನಿಸುವುದು ಮತ್ತು ಅದರೊಂದಿಗೆ ಬೆರೆಯುವುದಕ್ಕೆ ಪ್ರೇರಣೆ ನೀಡುವುದಾಗಿದೆ.
ಹಸ್ತ ಶಿಲ್ಪ ಸಂಸ್ಕೃತಿ ಮನೆಯ ಮಕ್ಕಳ ಆಟಿಕೆಗಳ ವಸ್ತು ಸಂಗ್ರಹಾಲಯವನ್ನು ಶಾಲಾ ಮಕ್ಕಳಿಗಾಗಿಯೇ ಮೀಸಲಿರಿಸಲಾಗಿದ್ದು, ಅತಿ ಶೀಘ್ರದಲ್ಲಿಯೇ ಮಕ್ಕಳಿಗೆ ರೋಂಮಾಚನ ನೀಡುವ ಕಲಿಕಾ ತಾಣವಾಗಲಿದೆ.ಪ್ರದರ್ಶನಗಳು, ಕಥೆ ಹೇಳುವ ಕಾರ್ಯಚಟುವಟಿಕೆಗಳು, ಶಾಲಾ ಮಕ್ಕಳಿಗೆ ಸೂಕ್ತವಾದ ಬೇಸಿಗೆ ಶಿಬಿರಗಳು ಮತ್ತು ಕಾರ್ಯಗಾರಗಳನ್ನು ನಡೆಸುವುದರ ಬಗ್ಗೆ ಸಹ ಯೋಜನೆ ರೂಪಿಸಲಾಗಿದೆ. ಹಸ್ತ ಶಿಲ್ಪ ಟ್ರಸ್ಟ್ ಗೆ ಈ ಮಕ್ಕಳ ಆಟಿಕೆಗಳ ವಸ್ತು ಸಂಗ್ರಹಾಲಯವನ್ನು ಈ ಹಂತಕ್ಕೆ ತರಲು ಬೇಕಾದ ಗಣನೀಯ ಪ್ರಮಾಣದ ಹಣಕಾಸು ಸಂಪನ್ಮೂಲಗಳನ್ನು ದಕ್ಷಿಣ ಕನ್ನಡದ ಹೊರಗಿನ ವ್ಯಕ್ತಿಗಳ ಸಹಾಯದಿಂದ ಪಡೆಯಲು ಸಾಧ್ಯವಾಯಿತು. ಜಗನ್ನಾಥ ಶೆಣೈ,ಮೈಸೂರು, ಅರುಣ್ ಜೋತಿ, ಮುಂಬಯಿ, ವೈದೇಹಿ ನಂದ್ಯಾಲ್ ಮತ್ತು ರಘು ವರದನ್ (ಸ್ಯಾನ್ ಫ್ರಾನ್ಸಿಸ್ಸ್ಕೊ ಮತ್ತು ಬೆಂಗಳೂರು) ಇವರು ಈ ಯೋಜನೆಗೆ ಉದಾರವಾದ ಕೊಡುಗೆ ನೀಡಿದ್ದಾರೆ. ಮಕ್ಕಳ ಆಟಿಕೆಗಳ ವಸ್ತು ಸಂಗ್ರಹಾಲಯವು ವಿಶೇಷವಾಗಿ ಶಾಲಾ ಮಕ್ಕಳಿಗಾಗಿಯೇ ಮೀಸಲಿದ್ದು, ನವೆಂಬರ್ ತಿಂಗಳಿನಿಂದ ಆರಂಭವಾಗಿ ಫೆಬ್ರವರಿ ತಿಂಗಳ ಕೊನೆವರೆಗೆ ಪ್ರತಿ ವಾರದಲ್ಲಿ ಮೂರು ದಿನಗಳು ಮಾತ್ರ ವೀಕ್ಷಣೆಗಾಗಿ ತೆರೆದಿರಲಿದ್ದು, ಈಮೇಲ್ ಅಥವಾ ದೂರವಾಣಿ ಮುಖಾಂತರ ಮುಂಗಡ ಕಾಯ್ದಿರಿಸುವಿಕೆಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಮುಂಗಡ ಕಾಯ್ದಿರಿಸುವಿಕೆಗೆ ಸಂಪರ್ಕಿಸಬೇಕಾದ ವಿವರ:
ಅನುರೂಪಾ ಶೆಣೈ, ಮೊಬೈಲ್ ಸಂಖ್ಯೆ +91 9483634576, ಈಮೇಲ್: hastashilpahouse@gmail.com