Advertisement
ರಥ ಸಮರ್ಪಣೆಯ ಬಳಿಕ ನಡೆದ ಸಭೆಯಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ನೂತನ ಬ್ರಹ್ಮರಥ ಸಮರ್ಪಣೆಯಿಂದ ಶ್ರೇಷ್ಠ ಪರಂಪರೆ, ಇತಿಹಾಸ ಹೊಂದಿರುವ ಮೂಕಾಂಬಿಕೆಯ ಸನ್ನಿ ಧಿಗೆ ಹೊಸ ಚೈತನ್ಯ ತುಂಬಿದಂತಾಗಿದೆ. ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿದರೆ ಲೋಕಕಲ್ಯಾಣವಾಗುವುದು ಎಂದರು.
Related Articles
Advertisement
ರಥ ದಾನಿಗಳಾದ ಸುನಿಲ್ ಆರ್. ಶೆಟ್ಟಿ, ಮಕ್ಕಳಾದ ಅಂಚಲ್, ಅನ್ಮೋಲ್ ಅವರನ್ನು ಶಾಸಕರು ಸಮ್ಮಾನಿಸಿದರು. ರಥಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ, ರಾಜಗೋಪಾಲ ಆಚಾರ್ಯ, ಪುಷ್ಪಲತಾ ಆಚಾರ್ಯ, ವಾಸ್ತುತಜ್ಞ ಮಹೇಶ ಮುನಿಯಂಗಳ, ರಥ ನಿರ್ಮಾಣ ಸಮಿತಿಯ ಸದಸ್ಯರಾದ ಸುರತ್ಕಲ್ ಎನ್‌ಐಟಿಕೆಯ ಡಾ| ಎಚ್. ಎಂ. ಪ್ರಶಾಂತ, ದೇಗುಲದ ಎಂಜಿನಿಯರ್ ಪ್ರದೀಪ್ ಡಿ.ಕೆ., ನಿಕಟಪೂರ್ವ ಕಾರ್ಯನಿರ್ವಹಣಾ ಧಿಕಾರಿ ಮಹೇಶ ಅವರನ್ನು ಅತಿಥಿಗಳು ಸಮ್ಮಾನಿಸಿದರು.
ದೇಗುಲದ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ ಸ್ವಾಗತಿಸಿದರು. ಇನ್ನೋರ್ವ ಸದಸ್ಯ ಡಾ| ಅತುಲ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ರಾಜು ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವರಾಮ ಭಟ್ ವಂದಿಸಿದರು.
ಜೀವ ಉಳಿಸಿದ ತಾಯಿಗೆ ರಥ! :
ರಥ ದಾನಿ ಸುನಿಲ್ ಶೆಟ್ಟಿ ಅವರು ಕೊಲ್ಲೂರು ಕ್ಷೇತ್ರದೊಡನೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಬಾಲ್ಯದಲ್ಲಿ ಇಲ್ಲಿನ ಸೌಪರ್ಣಿಕಾ ನದಿಯಲ್ಲಿ ನೀರು ಪಾಲಾದ ಅವರನ್ನು ರಕ್ಷಿಸಿದ ತಾಯಿ ಮೂಕಾಂಬಿಕೆಗೆ ನೂತನ ರಥವನ್ನು ಸಮರ್ಪಿಸಿರುವುದು ಮಹತ್ಕಾರ್ಯ ಎಂದು ಸುಕುಮಾರ ಶೆಟ್ಟಿ ಶ್ಲಾ ಸಿದರು.