Advertisement

ಸೆ.29ರಂದು ಕುಕ್ಕೆಗೆ ಹೊರಡಲಿದೆ ನೂತನ ಬ್ರಹ್ಮರಥ

04:37 PM Aug 31, 2019 | Team Udayavani |

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥ ಕೋಟೇಶ್ವರದಲ್ಲಿ ಸಿದ್ದಗೊಳ್ಳುತಿದ್ದು ಅಂತಿಮ ಹಂತಕ್ಕೆ ತಲುಪಿದೆ. ಸೆ. 29 ರಂದು ರಥವು ಕೋಟೆಶ್ವರದಿಂದ ಕುಕ್ಕೆಗೆ ಹೊರಡಲಿದೆ.

Advertisement

ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು, ರಥ ದಾನಿಗಳು ಕೋಟೇಶ್ವರಕ್ಕೆ ಶನಿವಾರ ತೆರಳಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕಾಗಿ ನೂತನವಾಗಿ ನಿರ್ಮಿಸುತ್ತಿರುವ ಬ್ರಹ್ಮರಥದ ಅಂತಿಮ‌ ಕೆತ್ತನೆ ಕಾಮಾಗಾರಿಗಳನ್ನು ವೀಕ್ಷಿಸಿ ರಥ ಸಾಗಾಟದ ಕುರಿತು ಶಿಲ್ಪಿಗಳ ಜತೆ ಚರ್ಚಿಸಿದರು. ಭೇಟಿ ವೇಳೆ ಬ್ರಹ್ಮರಥದ ಕೆತ್ತನೆ ಇತ್ಯಾದಿ ಕೆಲಸದ ಬಗ್ಗೆ ಮಾಹಿತಿ ಪಡಕೊಂಡರು.

ರಥ ಬಾಕಿ ಇರುವ ಕೆಲಸ, ಬ್ರಹ್ಮರಥವನ್ನು ಕೋಟೇಶ್ವರದಿಂದ ಸುಬ್ರಹ್ಮಣ್ಯಕ್ಕೆ ಒಯ್ಯುವ ಬಗ್ಗೆ ಅಲ್ಲಿ ಚರ್ಚಿಸಲಾಯಿತು. ಸೆ‌.29 ರಂದು ರಥಕ್ಕೆ ಆರಂಭಿಕ ಪೂಜೆ ಸಲ್ಲಿಸಿದ ಬಳಿಕ ರಥ ಬಿಟ್ಟುಕೊಡುವ ಕಾರ್ಯಕ್ರಮ ನಡೆಯಲಿದೆ. ಟ್ರಾಲಿ‌ ಮೂಲಕ ಹೊರಡುವ ರಥವು 3 ಕ್ಕೆ ಸುಬ್ರಹ್ಮಣ್ಯ ತಲುಪಲಿದೆ.

ಶನಿವಾರ ಕೋಟೆಶ್ವರಕ್ಕೆ ತೆರಳಿದ ನಿಯೋಗದಲ್ಲಿ ಕುಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಮಿತಿ ಸದಸ್ಯರುಗಳಾದ ಬಾಲಕೃಷ್ಣ ಬಳ್ಳೇರಿ, ರಾಜೀವಿ ರೈ, ಮಾದವ ಡಿ, ದೇಗುಲದ ಕಾರ್ಯ ನಿರ್ವಾಹಣಾಧಿಕಾರಿ ರವೀಂದ್ರ ಎಮ್.ಎಚ್, ಬಿಡದಿ ರಿಯಾಲಿಟಿ ವೆಂಚರ್ ಪ್ರೋರ್ ಗ್ರೂಪ್ ಸಂಸ್ಥೆಯ ಪಾಲುದಾರರಾದ ಅಜಿತ್ ರೈ, ಕರುಣಾಕರ ರೈ, ಸುಬ್ರಹ್ಮಣ್ಯ ದೇಗುಲದ ಇಂಜಿನಿಯರ್ ಉದಯಕುಮಾರ್,ಶಿವರಾಮ ರೈ, ಇಂಜಿನಿಯರಿಂಗ್ ವಿಭಾಗದ ಎಂ.ಕೆ ಮೋಹನ್, ಗಣೇಶ್ ಆಚಾರ್ಯ, ಮತ್ತಿತರರು ಉಪಸ್ಥಿತರಿದ್ದರು. ರಥ ಶಿಲ್ಪಿಗಳಾದ ಲಕ್ಷ್ಮಿನಾರಾಯಣ, ರಾಜಗೋಪಾಲ ಮಾಹಿತಿ ಒದಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next