ಬೆಂಗಳೂರು: ಆಟೋಮೋಟಿವ್ ಕ್ಷೇತ್ರದ ಖ್ಯಾತ ಸಂಸ್ಥೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ (ಎಂಆ್ಯಂಡ್‌ಎಂ) ಹೊಸ ವಿನ್ಯಾಸದ, ಅತ್ಯಾಕರ್ಷಕ ಒಳಾಂಗಣ ವಿನ್ಯಾಸದಿಂದ ಕೂಡಿರುವ, ವರ್ಧಿತ ಶಕ್ತಿ ಮತ್ತು ಟಾರ್ಕ್ ಪ್ರಿಮೀಯಂ ಎಸ್‌ಯುವಿ ವಿಭಾಗದ ನೂತನ ಮಹೀಂದ್ರಾ ಎಕ್ಸ್‌ಯುವಿ500 ವಿಲಾಸಿ ವಾಹನವನ್ನು ಬಿಡುಗಡೆ ಮಾಡಿದೆ.
ಇತೀ¤ಚೆಗೆ ನಗರದಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯ ಆಟೋಮೋಟಿವ್ ಸೆಕ್ಟರ್ ಅಧ್ಯಕ್ಷ ರಾಜನ್ ವಧೇರಾ ಅವರು ನೂತನ ವಾಹನವನ್ನು ಅನಾವರಣಗೊಳಿಸಿದರು. ಎಸ್‌ಯುವಿ ವಿಭಾಗದಲ್ಲಿ 2011ರಿಂದ ಬಹಳಷ್ಟು ಬದಲಾವಣೆಗಳ ಮೂಲಕ ಅತ್ಯಾಧುನಿಕ ಎಕ್ಸ್‌ಯುವಿ500 ವಾಹನವನ್ನು ಬಿಡುಗಡೆ ಮಾಡಿದ್ದೇವೆ.
ಇದರಲ್ಲಿ ಹೈಟೆಕ್ ವೈಶಿಷ್ಟಗಳು ಹಾಗೂ ಮೇಲ್ದರ್ಜೆಯ ತಂತ್ರಜ್ಞಾನದೊಂದಿಗೆ ಸಾಟಿಯಿಲ್ಲದ ಉತ್ತಮ ದರ್ಜೆಯ ಸುರಕ್ಷತೆಯುಳ್ಳ ವಾಹನ ಇದಾಗಿದೆ. ಪ್ರಿಮೀಯಂ ಎಸ್‌ಯುವಿ ಸೆಗೆ¾ಂಟ್‌ನಿಂದ ಸೃಷ್ಟಿಸಲ್ಪಟ್ಟ ಎಕ್ಸ್‌ಯುವಿ500 ಕೇವಲ 12 ರಿಂದ 18 ಲಕ್ಷ ರೂ. ಸರಣಿಯ ವಾಹನಗಳಲ್ಲಿ ಮುಂದಾಳತ್ವ ವಹಿಸಿದೆ. ಭಾರತದ ಎಕ್ಸ್‌ಯುವಿ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸುವ ಐಷಾರಾಮಿ ವಾಹನ ಇದಾಗಿದೆ ಎಂದು ತಿಳಿಸಿದರು.
ಎಲ್‌ಇಡಿ ಡಿಆರ್‌ಎಲ್, ಫಾಗ್ ಲ್ಯಾಂಪ್ಸ್, ಡೈಮಂಡ್ ಕಟ್ 45.72 ಸೆಂ.ಮೀ. ಅಲಾಯ್ ವೀØಲ್ಸ್, ಅತ್ಯುತ್ತಮ ಒಳಾಂಗಣ, ಲೆದರ್ ಸೀಟ್ಸ್, ಎಂಹಾಕ್155 ಹೈ-ಪವರ್ ಎಂಜಿನ್, ಉತ್ತಮ ದರ್ಜೆಯ 6 ಏರ್‌ಬ್ಯಾಗ್ಸ್ ಸುರಕ್ಷಾ ವ್ಯವಸ್ಥೆ , ಬ್ರೇಕ್ ಎನರ್ಜಿ ರಿಜರೇಷನ್ ಸಿಸ್ಟಂ, ಮಹೀಂದ್ರಾ ಬ್ಲೂ ಸೆನ್ಸ್ ತಂತ್ರಜ್ಞಾನ ಮುಂತಾದ ವೈಶಿಷ್ಟಗಳು ಇದರಲ್ಲಿವೆ.
ಎಕ್ಸ್‌ಯುವಿ500ನ ಎಕ್ಸ್‌ಶೋರೂಮ್ ದರ 12.36 ಲಕ್ಷ ರೂ.ಗಳಿಂದ ಆರಂಭವಾಗಲಿದ್ದು, ಡಬ್ಲ್ಯೂ, ಡಬ್ಲ್ಯೂ7, ಡಬ್ಲ್ಯೂ9, ಡಬ್ಲ್ಯೂ11 ಮತ್ತು ಡಬ್ಲ್ಯೂ11 ಓಪಿಟಿ ಎಕ್‌ಯುವಿ500 ಡೀಸೆಲ್ ಎಂಜಿನ್ ವಾಹನಗಳು ದೇಶಾದ್ಯಂತ ನಮ್ಮ ಎಲ್ಲ ಡೀಲರ್‌ಗಳಲ್ಲಿ ದೊರೆಯಲಿವೆ.
ಅಲ್ಲದೆ, ಆಕರ್ಷಕ ಏಳು ಬಣ್ಣಗಳಲ್ಲಿ ಲಭ್ಯ. ಫೋಟೋ ಶಿರ್ಷಿಕೆ ಬೆಂಗಳೂರಿನ ಮಹೀಂದ್ರಾ ಶೋರೂಮ್ ನೂತನ ಎಕ್ಸ್‌ಯುವಿ500 ವಾಹನವನ್ನು ಸಂಸ್ಥೆಯ ಆಟೋಮೋಟಿವ್ ಸೆಕ್ಟರ್ ಅಧ್ಯಕ್ಷ ರಾಜನ್ ವಧೇರಾ ಅನಾವರಣಗೊಳಿಸಿದರು. ಮಾರುಕಟ್ಟೆ ಮುಖ್ಯಸ್ಥ ಅನಿರ್ ಬಂಧಾಸ್ ಉಪಸ್ಥಿತರಿದ್ದರು.