Advertisement

ಐಎಎಸ್‌, ಐಪಿಎಸ್‌ಗೆ ಹೊಸ ಕೇಡರ್‌ ನೀತಿ

07:55 AM Aug 24, 2017 | Team Udayavani |

ಹೊಸದಿಲ್ಲಿ: ಐಎಎಸ್‌, ಐಪಿಎಸ್‌ ಹಾಗೂ ಐಎಫ್ಒಎಸ್‌ ಅಧಿಕಾರಿಗಳ ಕೇಡರ್‌ ನೀತಿಯನ್ನು ಕೇಂದ್ರ ಸರಕಾರ ಅಂತಿಮಗೊಳಿಸಿದೆ. ತವರು ರಾಜ್ಯದ ಹೊರತಾಗಿ ಬೇರೆ ಕಡೆಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿರುವ ಸರಕಾರ, ಅನ್ಯ ರಾಜ್ಯವೇ ಸೂಕ್ತ ಸ್ಥಳ ಎಂದಿದೆ. 

Advertisement

“ರಾಷ್ಟ್ರೀಯ ಏಕೀಕರಣ’ದ ಉದ್ದೇಶವನ್ನು ಹೊಸ ನೀತಿ ಹೊಂದಿದ್ದು, ಉನ್ನತ ಅಧಿಕಾರ ವರ್ಗವಾದ ಐಎಎಸ್‌, ಐಪಿಎಸ್‌, ಐಎಫ್ಒಎಸ್‌ ಕೇಡರ್‌ನವರು ಕೆಲಸಕ್ಕಾಗಿ ರಾಜ್ಯವನ್ನು ಆಯ್ಕೆ ಮಾಡುವ ಬದಲು ವಿವಿಧ ವಲಯಗಳನ್ನು ಆಯ್ಕೆಮಾಡುವಂತೆ ರೂಪಿಸಿದೆ. ಹೊಸ ನೀತಿ ಈ ವರ್ಷದಿಂದಲೇ ಜಾರಿಗೆ ಬರುವ ನಿರೀಕ್ಷೆ ಇದೆ. ಹೊಸ ನೀತಿ ಅನ್ವಯ ಈಗಿರುವ 26 ಕೇಡರ್‌ಗಳನ್ನು ಐದು ವಿಭಾಗವಾಗಿ ವಿಭಾಗಿಸಲಾಗಿದೆ. ಇದರಲ್ಲಿ ರಾಜ್ಯಗಳನ್ನು ಹಂಚಿಕೆ ಮಾಡಲಾಗಿದ್ದು, 5ನೇ ವಿಭಾಗದಲ್ಲಿ ಕರ್ನಾಟಕ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next