Advertisement
ಈ ಹಿಂದೆ ಇದ್ದ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಆ ಜಾಗದಲ್ಲಿ ಶಾಪಿಂಗ್ ಮಾಲ್ ಸಿನಿಮಾ ಥಿಯೇಟರ್ ಅಂಗಡಿ ಮಳಿಗೆಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಯೋಜನೆ ರೂಪಿಸಿ ಹಳೆಯದರ ಪಕ್ಕದ ಹೊಸ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಮೈತ್ರಿ ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಹೈಟೆಕ್ ಮಾಲ್ ಯೋಜನೆಗೆ ಗ್ರಹಣ ಹಿಡಿದಿದೆ.
Related Articles
Advertisement
ಹೆಸರಿಗೆ ಮಾತ್ರ ಸಹಾಯವಾಣಿ: ನಿಲ್ದಾಣದಲ್ಲಿ ಸಮಸ್ಯೆಗಳು ಕಂಡು ಬಂದಾಗ ಸಹಾಯವಾಣಿಗೆ ಕರೆ ಮಾಡಿ ಎಂದು ಬೊಬ್ಬೆ ಹೊಡೆಯುವ ಸಾರಿಗೆ ಇಲಾಖೆ ಈ ಸಂಬಂಧ ದೂರು ನೀಡಲು ಸಹಾಯವಾಣಿಗೆ ಕರೆ ಮಾಡಿದ ಮಹಿಳೆಗೆ ಸಾರಿಗೆ ಇಲಾಖೆ ಸಮಸ್ಯೆ ಬಗೆಹರಿಸುವುದು ಇರಲಿ ಕರೆಯನ್ನೇ ಸ್ವೀಕರಿಸುವ ಸೌಜನ್ಯವನ್ನೂ ತೋರಲಿಲ್ಲ. ಶೌಚಾಲಯ ನಿರ್ವಹಣೆಗೆ ಸ್ಥಳೀಯರಿಗೆ ಅವಕಾಶ ನೀಡಿದೆ ಸ್ಥಳೀಯ ಭಾಷೆ ತಿಳಿಯದ ಅನ್ಯ ಭಾಷಿಕರಿಗೆ ಗುತ್ತಿಗೆ ನೀಡಿ ಸಾರಿಗೆ ಇಲಾಖೆಗೆ ಸಾರ್ವಜನಿಕರ ಸಮಸ್ಯೆ ಗಳನ್ನು ಆಲಿಸುವ ಸೌಜನ್ಯವೂ ಇಲ್ಲದಂತಾಗಿದೆ.
ಬಸ್ ಕೊರತೆ: ಪ್ರಯಾಣಿಕರಿಗೆ ನಿಲ್ದಾಣದ ಸಮಸ್ಯೆಗಿಂತ ಬಸ್ಸಿನ ಸಮಸ್ಯೆ ಹೆಚ್ಚಾಗಿದ್ದು ಪ್ರತಿದಿನ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳುವ ನೂರಾರು ಸಾರ್ವಜನಿಕರು ಎರಡು ತಾಸು ನಿಂತು ಪ್ರಯಾಣಿಸಲು ಆಗದೆ ಬಸ್ಸಿನ ಹಿಂದೆ ಓಡಿಹೋಗಿ ಸೀಟು ಹಿಡಿದುಕೊಳ್ಳುವು ಸಾಹಸ ಪಡಬೇಕು ಸರ್ಕಾರಿ ರಜಾ ದಿನಗಳು ಬಂದರಂತೂ ಪ್ರಯಾಣಿಕರ ಪಾಡು ಹೇಳತೀರದು ಬೆಂಗಳೂರಿಗೆ ಖಾಸಗಿ ಬಸ್‌ಗಳ ವ್ಯವಸ್ಥೆ ಇಲ್ಲದೆ ಅನ್ಯಮಾರ್ಗವಿಲ್ಲದೆ. ಪ್ರತಿನಿತ್ಯ ಕಾರ್ಯ ನಿಮಿತ್ತ ತೆರಳುವ ಪ್ರಯಾಣಿಕರು ಸಾರಿಗೆ ಇಲಾಖೆಯ ಬಸ್‌ಗಳನ್ನೇ ಅವಲಂಬಿಸಿದ್ಧಾರೆ. ಎಲ್ಲವನ್ನೂ ತಿಳಿದಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿದು ತಿಳಿಯದಂತೆ ವರ್ತಿಸುತ್ತಿರುವುದು ತಾಲೂಕಿ ನಲ್ಲಿ ಸಾರಿಗೆ ಇಲಾಖೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಂತಿದೆ.
ಸುರಕ್ಷತೆ ಇಲ್ಲ: ಹಳೆ ಬಸ್ ನಿಲ್ದಾಣದಲ್ಲಿ ಇದ್ದ ಎಲ್ಲಾ ಸೌಲಭ್ಯಗಳನ್ನು ತೆರವುಗೊಳಿಸಲಾಗಿದ್ದು, ಬೆಂಗಳೂರು ಪ್ರಯಾಣಿಕರಿಗೆ ಮಾತ್ರ ಸೀಮಿತವಾಗಿದ್ದ ಹಳೆ ಬಸ್ ನಿಲ್ದಾಣದಲ್ಲಿ ವಿದ್ಯುತ್ ದೀಪಗಳು ಕೆಟ್ಟು ನಿಂತಿದ್ದು, ರಾತ್ರಿ ವೇಳೆ ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿದೆ. ಬೆಂಗಳೂರು ಮತ್ತು ಇತರೆ ಭಾಗ ಗಳಿಂದ ಬಂದು ತಮ್ಮ ಪೋಷಕರ ಬರುವಿಕೆಗಾಗಿ ಕಾದು ಕುಳಿತುಕೊಳ್ಳುವ ಮಹಿಳೆಯರು ವಿದ್ಯಾರ್ಥಿ ನಿಯರಿಗೆ ಹಳೆ ಬಸ್ ನಿಲ್ದಾಣದಲ್ಲಿ ಸುರಕ್ಷತೆ ಇಲ್ಲದಂತಾಗಿದೆ.