Advertisement

ಬುಲೆಟ್‌ ರೈಲುಗಳಲ್ಲಿರುತ್ತೆ ಹೈಫೈ ಶೌಚಾಲಯ ವ್ಯವಸ್ಥೆ!

02:50 PM Jun 12, 2017 | Team Udayavani |

ಹೊಸದಿಲ್ಲಿ: ಸ್ವಚ್ಛ, ಶುಭ್ರವಾಗಿರುವ, ಫ‌ಳ ಫ‌ಳ ಹೊಳೆಯುವ ಹೊಚ್ಚಹೊಸ ಶೌಚಾಲಯಗಳು, ಪಾಶ್ಚಾತ್ಯ ಶೈಲಿಯ ಟಾಯ್ಲೆಟ್‌, ಮಹಿಳೆಯರಿಗೇ ಬೇರೆ, ಪುರುಷರಿಗೇ ಬೇರೆ ಟಾಯ್ಲೆಟ್‌, ವ್ಹೀಲ್‌ ಚೇರ್‌ ಪ್ರಯಾಣಿಕರಿಗೂ ಅವರದ್ದೇ ಶೌಚ ಸ್ಥಳ, ಎಲ್ಲ ಶೌಚಾಲಯಗಳಲ್ಲಿ ಬಳಸಲು ಬಿಸಿ ನೀರು… ಇವು ಶೀಘ್ರದಲ್ಲೇ ಭಾರತದ ರೈಲುಗಳಲ್ಲಿ ಲಭ್ಯ! ಕೇಳಲು ಅಚ್ಚರಿಯೆನಿಸಿದರೂ ಸತ್ಯ. ಆದರೆ ಹೆಚ್ಚು ಖುಷಿಪಡುವ ಅಗತ್ಯವಿಲ್ಲ. ಕಾರಣ, ಈ ಎಲ್ಲ ವ್ಯವಸ್ಥೆಗಳು ಲಭ್ಯವಿರುವುದು ಸಾಮಾನ್ಯ ರೈಲುಗಳಲ್ಲಿ ಅಲ್ಲ. ಶೀಘ್ರದಲ್ಲೇ ದೇಶದ ಹಳಿ ಏರಲಿರುವ ಬುಲೆಟ್‌ ಟ್ರೇನ್‌ಗಳಲ್ಲಿ. ಮೊದಲ ಬುಲೆಟ್‌ ರೈಲಿನ ಸ್ಪರ್ಶಕ್ಕಾಗಿ ಭಾರತ ಸಿದ್ಧವಾಗಿದೆ. ಲಕ್ಷ ಕೋಟಿ ಅಂದಾಜು ವೆಚ್ಚದ ಹೈಸ್ಪೀಡ್‌ ಕಾರಿಡಾರ್‌ ಯೋಜನೆಯ ಚೊಚ್ಚಲ ಕೊಡುಗೆಯಾಗಿ, ಇ5 ಶಿನ್‌ಕನ್ಸೇನ್‌ ಶ್ರೇಣಿಯ ಬುಲೆಟ್‌ ರೈಲು ಮುಂಬಯಿ – ಅಹಮದಾಬಾದ್‌ ನಡುವೆ ಚಲಿಸಲಿದೆ. ಇದರಲ್ಲಿ ಈ ಮೇಲಿನ ಎಲ್ಲ ಸೌಲಭ್ಯಗಳ ಜತೆಗೆ ಬಹೂಪಯೋಗಿ ಕೊಠಡಿಗಳಿರಲಿದ್ದು, ಮಕ್ಕಳಿಗೆ ಎದೆಹಾಲುಣಿಸಲು, ಅನಾರೋಗ್ಯದಿಂದ ಬಳಲುವವರು ಈ ಕೊಠಡಿಗಳನ್ನು ಬಳಸಬಹುದಾಗಿದೆ.

Advertisement

ಒಂದರಲ್ಲಿ ಮೂತ್ರ, ಒಂದರಲ್ಲಿ ಶೌಚ
ಬುಲೆಟ್‌ ರೈಲಿನಲ್ಲಿ 10 ಬೋಗಿಗಳಿರಲಿದ್ದು, ಈ ಪೈಕಿ ಒಂದರಲ್ಲಿ ಯೂರಿನಲ್‌ ವ್ಯವಸ್ಥೆ ಇದ್ದರೆ, ಮತ್ತೂಂದರಲ್ಲಿ ಶೌಚಾಲಯವಿರಲಿದೆ. ಅಂದರೆ, 1, 3, 5, 7ನೇ ಬೋಗಿಯಲ್ಲಿ ಮೂತ್ರವಿಸರ್ಜನೆ ವ್ಯವಸ್ಥೆ ಮತ್ತು 2, 4, 6, 8ನೇ ಬೋಗಿಯಲ್ಲಿ ಶೌಚಾಲಯಗಳಿರಲಿವೆ. ಪುರುಷ ಮತ್ತು ಮಹಿಳೆಯರ ವಾಶ್‌ ರೂಮ್‌ಗಳೂ ಇದೇ ಮಾದರಿಯಲ್ಲಿರಲಿವೆ.

ಮಕ್ಕಳಿಗೆ ಸಿಗೋದೇನು?
ಮಕ್ಕಳ ಬಟ್ಟೆ ಬದಲಿಸಲು ಪ್ರತ್ಯೇಕ ಕೊಠಡಿ (ಬೇಬಿ ಚೇಂಜಿಂಗ್‌ ರೂಮ್‌), ಬೇಬಿ ಟಾಯ್ಲೆಟ್‌ ಸೀಟ್‌ಗಳು, ಡೈಪರ್‌ ತೆಗೆಯಲು ಟೇಬಲ್‌ ವ್ಯವಸ್ಥೆ, ಚಿಕ್ಕ ಮಕ್ಕಳು ಕೈ ತೊಳೆಯಲು ಕೆಳ ಹಂತದಲ್ಲಿ ಸಿಂಕ್‌ ಸೌಲಭ್ಯ.

ಸ್ತ್ರೀ – ಪುರುಷರ ಪಾಲಿಗೆ…
ಪುರುಷ, ಮಹಿಳೆಯರಿಗೆ ಪ್ರತ್ಯೇಕ ರೆಸ್ಟ್‌ ರೂಮ್‌, ಪ್ರತ್ಯೇಕ ಯೂರಿನಲ್‌, ಪ್ರತ್ಯೇಕ ಶೌಚಾಲಯ, ಪುರುಷರಿಗೆ ವಾಲ್‌ ಮೌಂಟೆಡ್‌ ಯೂರಿನಲ್‌ಗ‌ಳು, ಬಳಸಲು ಬಿಸಿ ನೀರು, ವಾಷಿಂಗ್‌ ಕ್ಲೋಸೆಟ್‌ ಸೀಟ್‌, ಮಲ – ಮೂತ್ರ ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆ,  ಮಕ್ಕಳಿಗೆ ಹಾಲುಣಿಸಲು ಕೊಠಡಿ, ಮೇಕಪ್‌ಗೆಂದೇ 3 ಕನ್ನಡಿ, ಶಿಶುಗಳ ಕಾಳಜಿಗೆ ವಿಶೇಷ ಕೊಠಡಿ ಇತ್ಯಾದಿ… ಪ್ರಧಾನಿ ಮೋದಿ ಸರಕಾರ 5000 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವ ಮೊದಲ ರೈಲು ಮುಂಬೈ- ಅಹಮದಾಬಾದ್‌ ನಡುವೆ ಸಂಚರಿಸಲಿದೆ.

508 ಕಿ.ಮೀ : ಮುಂಬೈ- ಅಹಮದಾಬಾದ್‌ ನಡುವಿನ ಅಂತರ
127 ನಿಮಿಷ : ಬುಲೆಟ್‌ ರೈಲು ತೆಗೆದುಕೊಳ್ಳುವ ಸಮಯ
21ಕಿ.ಮೀ.: ಥಾಣೆ – ವಿರಾರ್‌ ನಡುವಿನ ಸುರಂಗ
07ಕಿ.ಮೀ.: ಥಾಣೆ ಸಮೀಪ ಸಮುದ್ರ ದಡಿಯಲ್ಲಿನ ಸುರಂಗ
9,800 ಕೋಟಿ ರೂ.: ಯೋಜನೆಗೆ ಭಾರತೀಯ ರೈಲ್ವೇ ಹೂಡಲಿರುವ ಹಣ

Advertisement
Advertisement

Udayavani is now on Telegram. Click here to join our channel and stay updated with the latest news.

Next