Advertisement

ಕೋಲಾರ ನಗರಸಭೆಗೆ ನೂತನ ಕಟ್ಟಡ

03:07 PM Sep 29, 2021 | Team Udayavani |

ಕೋಲಾರ: ನಗರಸಭೆ ಕಚೇರಿ ನೂತನ ಕಟ್ಟಡ ನಿರ್ಮಾಣದ ಕರಡು ವಿನ್ಯಾಸ ನಕಾಶೆಗೆ ಹಲವು ಬದಲಾವಣೆಗಳನ್ನು ಮಾಡಲು ಸಭೆ ಯಲ್ಲಿ ಸದಸ್ಯರು ಸೂಚಿಸಿ, ಹಲವು ಸಲಹೆ ನೀಡುವ ಮೂಲಕ ಅನುಮೋದನೆ ನೀಡಿದರು.

Advertisement

ನಗರಸಭೆ ಸಭಾಂಗಣದಲ್ಲಿ ಮಂಗಳವಾರಅಧ್ಯಕ್ಷೆ ಶ್ವೇತಾ ಆರ್‌.ಶಬರೀಶ್‌ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿ ಚರ್ಚೆ ಆದ ನಂತರ ನೂತನ ಕಟ್ಟಡ ತಾಲೂಕು ಕಚೇರಿ ಪಕ್ಕದಲ್ಲಿರುವ ನಗರಸಭೆ ಆಸ್ತಿಯಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡವನ್ನು 10 ಕೋಟಿ ರೂ. ನಲ್ಲಿ ಕಟ್ಟಲು ಸಭೆ ಅನುಮೋದನೆ ನೀಡಿತು. ನೂತನ ಕಟ್ಟಡದಲ್ಲಿ ಬ್ಯಾಂಕ್‌, ಎಟಿಎಂ, ಕ್ಯಾಂಟೀನ್‌, ಲೈಬ್ರೆರಿ, ಮುಂದಿನ ದಿನಗಳಲ್ಲಿನಗರಸಭೆ ಮೇಲ್ದರ್ಜೆಗೆ ಹೋಗುವುದರಿಂದ ನೂರು ಆಸನಗಳ ಸುಸಜ್ಜಿತ ಮೀಟಿಂಗ್‌ಹಾಲ್‌ ಮಾಡಲು ಸೂಚನೆಗಳನ್ನು ಸದಸ್ಯರು ನೀಡಿದರು.

ಬೆಸ್ಕಾಂ ರಸ್ತೆ ವೃತ್ತದಲ್ಲಿ ಪಿಲ್ಲರ್‌: ನಗರಸಭೆವ್ಯಾಪ್ತಿಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ ಆಸ್ತಿ ತೆರಿಗೆ ವಸೂಲಾತಿಯನ್ನು ಉನ್ನತೀಕರಿಸಲು ಬೆಂಗಳೂರಿನ ಸೆಮಿ ನಲ್‌ ಸಾಫ್ಟ್ವೇರ್‌ ಪ್ರೈ.ಲಿ. ಅವರಿಂದ ಆಸ್ತಿಗಳ ಸರ್ವೆ ಮಾಡಿಸಿ ಗಣಕೀಕರಣಗೊಳಿಸಲು,ನಗರದ ಬೆಸ್ಕಾಂ ರಸ್ತೆ ವೃತ್ತದಲ್ಲಿ ಸಿಎಸ್‌ಆರ್‌ಅಥವಾ ದಾನಿಗಳ ನೆರವಿನಿಂದ ಅಶೋಕಪಿಲ್ಲರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲುಸಭೆ ತೀರ್ಮಾನ ಕೈಗೊಂಡಿತು.

ಪಿಡಬ್ಲೂéಡಿ ಅಧಿಕಾರಿಗೆ ತರಾಟೆ: ಅಧ್ಯಕ್ಷರ ಅಪ್ಪಣೆ ಮೇರೆಗೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್‌ ಮಾತನಾಡಿ, ಕೋಲಾರ ನಗರದಲ್ಲಿ ರಸ್ತೆಗಳು ಹಾಳಾಗಿದ್ದು, ಟೆಂಡರ್‌ಮುಗಿದ್ದರೂ ಕಾಮಗಾರಿ ಮಗಿಯದೇ ಓಡಾಡಲು ತುಂಬಾ ಕಷ್ಟವಾಗುತ್ತಿದೆ. ಟೆಂಡರ್‌ ದಾರನಿಗೆ ನೋಟಿಸ್‌ ಕೊಡಬೇಕು ಎಂದಾಗಇದಕ್ಕೆ ಧ್ವನಿ ಗೂಡಿಸಿದ ಮಾಜಿ ಅಧ್ಯಕ್ಷೆನಾಜಿಯಾ, ಅಂಬರೀಶ್‌ ಮತ್ತು ಸದಸ್ಯರು ಸಭೆಯಲ್ಲಿ ಹಾಜರಿದ್ದ ಲೋಕೋಪ ಯೋಗಿಇಲಾಖೆಯ ಅಧಿಕಾರಿ ಮುಸ್ತಾಖ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ನೀರು ಸೋರಿಕೆ ತಡೆಗಟ್ಟಿ: ಸದಸ್ಯ ಅಂಬರೀಶ್‌ ಮಾತನಾಡಿ, ಕೋಡಿಕಣ್ಣೂರು ಕೆರೆ ಬಿರುಕು ಬಿಟ್ಟಿದ್ದು ನೀರು ಸೋರಿಕೆಯಿಂದ ಮನೆಗಳಿಗೆ ತೊಂದರೆ ಆಗುತ್ತಿದೆ. ತಡೆಯಲು ಕಟ್ಟೆಗೆ ರಿವಿಟ್ಮೆಂಟ್‌ ಮಾಡಬೇಕು, ಕೋಲಾರಮ್ಮ ಕರೆಯಲ್ಲಿ ಬೆಳದಿರುವ ಜೊಂಡು ತೆಗೆಸಲು ಕ್ರಮ ಕೈಗೊಳ್ಳಲು ವಿನಂತಿಸಿದರು.

Advertisement

ಕಾಮಗಾರಿ ಪ್ರಾರಂಭ: ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮುಸ್ತಾಖ್‌ ಮಾತನಾಡಿ, ಆದಷ್ಟು ಬೇಗ ಗುತ್ತಿಗೆದಾರರ ಮೂಲಕ ರಸ್ತೆಗಳ ಕಾಮಗಾರಿ ಪ್ರಾರಂಭ ಮಾಡಿಸುವುದಾಗಿ ಸಭೆಗೆ ತಿಳಿಸಿದರು.

ಕೋಲಾರಮ್ಮ ಕೆರೆ ಕೋಡಿ ಹರಿಯುತ್ತಿದ್ದು,ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಅಧ್ಯಕ್ಷರು ಹಾಗೂ ಸದಸ್ಯರು ಒಟ್ಟಿಗೆ ಸೇರಿಬಾಗಿನ ನೀಡಲು ದಿನಾಂಕ ನಿಗದಿ ಪಡಿಸುವಂತೆ ಹಾಗೂ ಕೆಂದಟ್ಟಿ ಬಳಿ ಬುಧವಾರ ಕಸವಿಲೇವಾರಿ ಘಟಕದ ಕಾಂಪೌಂಡ್‌ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಸಭೆ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಪ್ರವೀಣ್‌ ಗೌಡ,ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌, ಆಯುಕ್ತ ಪ್ರಸಾದ್‌ ಸೇರಿದಂತೆ ನಗರಸ» ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next