ತಾಳಿಕೋಟೆ: ಸರ್ಕಾರಿ ಪ್ರೌಢಶಾಲೆಗೆ (ಆರ್‌ಎಂಎಸ್) ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಸದ್ಯ 31.50 ಲಕ್ಷ ರೂ. ಅನುದಾನ ಬಿಡುಗೊಳಿಸಿದ್ದು ಈ ಕೊಠಡಿಗಳ ನಿರ್ಮಾಣದಿಂದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ನುಡಿದರು.
ರವಿವಾರ ಪಟ್ಟಣದ ಕನ್ನಡ ಶಾಲಾ ಮೈದಾನದಲ್ಲಿ 2020-21ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ 31.50 ಲಕ್ಷ ರೂ. ಅನುದಾನದಡಿ ನಿರ್ಮಿತಿ ಕೇಂದ್ರದ ವತಿಯಿಂದ ಆರ್‌ಎಂಎಸ್ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಶಾಲಾ ಮೈದಾನ ಸುಮಾರು 10 ಎಕರೆ ಭೂಪ್ರದೇಶವನ್ನು ಹೊಂದಿದ್ದರ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಪ್ರದೇಶದಲ್ಲಿ ಎಲ್ ಕೆಜಿಯಿಂದ ಪಿಯುಸಿವರೆಗೆ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೇ ಈ ಮೈದಾನದ ಭೂ ಪ್ರದೇಶ ಗುರುತಿಸಿಕೊಡಲು ತಹಶೀಲ್ದಾರ್‌ಗೂ ಸೂಚಿಸಿದ್ದೇನೆ ಎಂದರು. ಕೊಠಡಿ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮವನ್ನು ಖಾಸತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ನೆರವೇರಿಸಿದರು.
ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಸದಸ್ಯ ವಾಸುದೇವ ಹೆಬಸೂರ, ಅಣ್ಣಾಜಿ ಜಗತಾಪ, ಮುದಕಣ್ಣ ಬಡಿಗೇರ, ಬಸವರಾಜ ಹೊಟ್ಟಿ, ಎಸ್.ಎಂ. ಸಜ್ಜನ,
ಶಿವಶಂಕರ ಹಿರೇಮಠ, ರಾಜು ಹಂಚಾಟೆ, ಶರಣಗೌಡ ಗೊಟಗುಣಕಿ, ಮಾನಸಿಂಗ್ ಕೊಕಟನೂರ, ಸುರೇಶ ಗುಂಡಣ್ಣವರ, ಡಿ.ಕೆ. ಪಾಟೀಲ, ವಿಠಲ ಮೋಹಿತೆ, ರಾಘವೇಂದ್ರ ಮಾನೆ, ಬಾಬು ಹಜೇರಿ, ರವಿ ಕಟ್ಟಿಮನಿ, ಈಶ್ವರ ಹೂಗಾರ, ಗಂಗು ಹಜೇರಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಜಿ.ಎನ್. ಮಲಜಿ, ಕಿರಿಯ ಅಭಿಯಂತರ ರಾಘವೇಂದ್ರ ಮಾಳಜಿ ಇದ್ದರು.
ಶಾಲಾ ಕೊಠಡಿಗಳ ಪರಿಶೀಲನೆ: ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಭೂಮಿಪೂಜಾ ಕಾರ್ಯಕ್ರಮದ ನಂತರ ಶಾಲಾ ಕೊಠಡಿಗಳನ್ನು ಪರಿಶೀಲನೆ ನಡೆಸಿದರು. ಶಾಲಾ ಮುಖ್ಯಸ್ಥರಿಗೆ ಆವರಣದ ವಿಸ್ತೀರಣ ಕುರಿತು ಮಾಹಿತಿ ಪಡೆದುಕೊಂಡರಲ್ಲದೇ ಅಗತ್ಯ ದಾಖಲೆಗಳನ್ನು ತಮಗೆ ಸಲ್ಲಿಸಲು ಸೂಚಿಸಿದ ಶಾಸಕರು, ಶಾಲಾ ವಿಸ್ತೀರ್ಣದ ಕುರಿತು ಗುರುತಿಸಿಕೊಡಲು ತಹಶೀಲ್ದಾರ್‌ಗೆ ಸೂಚಿಸುತ್ತೇನೆ. ಅದಕ್ಕೆ ಸಂಬಂಧಿಸಿ ಶಾಲೆ ವತಿಯಿಂದ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಲು ಶಾಲಾ ಮುಖ್ಯಸ್ಥರಿಗೆ ಸೂಚಿಸಿದರು.