Advertisement

15 ದಿನಗಳಲ್ಲಿ ಹೊಸ ಬಜೆಟ್‌

06:00 AM Jun 06, 2018 | |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾಗಿರುವುದರಿಂದ ಹೊಸ ಬಜೆಟ್‌ ಮಂಡಿಸಲು ನಿರ್ಧರಿಸಿದ್ದು, ಇನ್ನು
15 ದಿನಗಳಲ್ಲಿ ಬಜೆಟ್‌ ಮಂಡಿಸಲು ಯೋಚಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಹೊಸ ಬಜೆಟ್‌ ಸಿದಟಛಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತನಾಗಿದ್ದು, ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೆಡಿಎಸ್‌ ಮತ್ತು
ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಬದಟಛಿನಾಗಿದ್ದು, ಅದಕ್ಕೆ ತಕ್ಕಂತೆ ಬಜೆಟ್‌ ರೂಪಿಸಲಾಗುವುದು. ಒಟ್ಟಾರೆ ರಾಜ್ಯದ ಹಿತ ಕಾಯುವ ಬಜೆಟ್‌ ಇದಾಗಿರಲಿದೆ ಎಂದು ಹೇಳಿದರು.

ಬಜೆಟ್‌ ಮಂಡನೆ ಜತೆಗೆ ಈಗಾಗಲೇ ಹೇಳಿ ರುವ ರೈತರ ಸಾಲ ಮನ್ನಾ, ನೀರಾವರಿ ಯೋಜನೆ ಗಳಿಗೆ ಆದ್ಯತೆ ಸೇರಿದಂತೆ ಅನೇಕ ವಿಚಾರಗಳು ತಮ್ಮ ಮುಂದಿದ್ದು, ಇವೆಲ್ಲವನ್ನೂ ಪರಾಮರ್ಶಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಮತಕ್ಕೆ
ಆಸ್ಪದವಾಗದಂತೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಲಾಗುವುದು ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next