Advertisement
ಹೆಚ್ಚು ಶಕ್ತಿಶಾಲಿಸಾಮಾನ್ಯವಾಗಿ ಕೊರೊನಾ ವೈರಾಣುವಿನ ಮೇಲೆ ಪ್ರೊಟೀನ್‌ನಿಂದ ಕೂಡಿದ ಮುಳ್ಳಿನಂಥ ಆಕಾರವಿರುತ್ತದೆ. ಬಿ.1.1.529 ರೂಪಾಂತರಿ ವೈರಾಣುವಿನಲ್ಲಿ ಈ ಪ್ರೊಟೀನ್, ಕನಿಷ್ಟ 30 ಬಾರಿಯಾದರೂ ರೂಪಾಂತರ ಹೊಂದಿದೆ. ಹಾಗಾಗಿ, ಇದು ಈವರೆಗಿನ ಎಲ್ಲ ರೂಪಾಂತರಿಗಳಿಗಿಂತ ಹೆಚ್ಚು ವೇಗವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಹರಡಬಲ್ಲದು ಎನ್ನಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಬುಧವಾರ- ಗುರುವಾರಗಳಂದು ದಾಖಲಾಗಿರುವ 1,100 ಹೊಸ ಕೊರೊನಾ ಪ್ರಕರಣಗಳಲ್ಲಿ ಶೇ. 90ರಷ್ಟು ಹೊಸ ರೂಪಾಂತರಿ ಪತ್ತೆಯಾಗಿರುವುದು ಇದರ ತ್ವರಿತ ಹರಡುವಿಕೆಗೆ ಸಾಕ್ಷಿಯಾಗಿದೆ.
ಕೊರೊನಾಕ್ಕೆ ಈವರೆಗೆ ಅಭಿವೃದ್ಧಿಪಡಿಸಲಾಗಿರುವ ಎಲ್ಲ ಲಸಿಕೆಗಳು ಈ ಹೊಸ ರೂಪಾಂತರಿ ವೈರಾಣುವನ್ನು ಹತ್ತಿಕ್ಕುವಲ್ಲಿ ಶಕ್ತವಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನು, ಈ ವೈರಾಣುವಿನಿಂದ ಈವರೆಗೆ ಕಂಡಿರದ ಅತಿಭೀಕರ ಕೊರೊನಾ ರೋಗ ಉಂಟಾ ಗುತ್ತದೆ ಎಂಬುದಂತೂ ಸುಳ್ಳು ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ. ಇವೆರಡೂ ವಿಚಾರಗಳು ಹೊಸ ರೂಪಾಂ ತರಿಯ ಭೀತಿಯ ನಡು ವೆಯೂ ಸಮಾಧಾನ ಹಾಗೂ ಆತ್ಮವಿಶ್ವಾಸ ತರುವಂಥದ್ದಾಗಿವೆ.