Advertisement

“ಗಂಗೆಯ ಮಗಳು”: ಗಂಗಾ ನದಿಯಲ್ಲಿ ಮರದ ಡಬ್ಬದಲ್ಲಿ ತೇಲಿ ಬಂತು ಹೆಣ್ಣು ಮಗು

09:08 AM Jun 17, 2021 | Team Udayavani |

ಗಾಜೀಪುರ: ನವಜಾತ ಹೆಣ್ಣು ಮಗುವೊಂದು ಗಂಗೆಯಲ್ಲಿ ತೇಲಿ ಬಂದಿದೆ. ಮರದ ಡಬ್ಬದಲ್ಲಿ ಶಿಶುವನ್ನಿರಿಸಿ ಗಂಗೆಯಲ್ಲಿ ತೇಲಿ ಬಿಡಲಾಗಿದೆ. ವಿಚಿತ್ರ ಏನೆಂದರೆ ಆ ಡಬ್ಬದಲ್ಲಿ ಮಗುವಿನೊಂದಿಗೆ ಒಂದು ಕಾಗದ ತುಂಡೂ ಇತ್ತು. ಅದರಲ್ಲಿ ‘ಗಂಗೆಯ ಮಗಳು’ ಎಂದು ಬರೆಯಲಾಗಿತ್ತು.

Advertisement

ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಗಾಜೀಪುರದಲ್ಲಿ. ನೀರಿನಲ್ಲಿ ಮರದ ಬಾಕ್ಸ್ ತೇಲಿಕೊಂಡು ಬರುತ್ತಿರುವುದನ್ನು ಕಂಡ ಸ್ಥಳೀಯ ಮೀನುಗಾರ ಗುಲ್ಲು ಚೌಧರಿ ಅದನ್ನು ಎತ್ತಿಕೊಂಡು ನೋಡಿದ್ದ. ಬಾಕ್ಸ್ ತೆರೆದು ಒಳಗೆ ನೋಡಿದಾಗ ಅದರಲ್ಲಿ ಮಗುವೊಂದು ಸಿಕ್ಕಿತ್ತು. ಮಗು ಮಾತ್ರವಲ್ಲದೆ ಒಂದು ಕಾಗದ, ದುರ್ಗಾ ಮಾತೆಯ ಚಿತ್ರ, ಜಾತಕ ಮತ್ತು ಅಗರಬತ್ತಿಯ ತುಂಡುಗಳಿದ್ದವು.

ಇದನ್ನೂ ಓದಿ:3500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್ ಲೈನ್ ಶಿಕ್ಷಣವನ್ನು ಬೋಧಿಸುವ ಶಿಕ್ಷಕ.!

ಮೀನುಗಾರ ಚೌಧರಿ ಮಗುವನ್ನು ಮನೆಗೆ ಎತ್ತಿಕೊಂಡು ಹೋಗಿದ್ದಾನೆ. ಈ ಮಾಹಿತಿ ಪ್ರಚಾರ ಪಡೆಯುತ್ತಿದ್ದಂತೆ ಪೊಲೀಸರು ಚೌಧರಿ ಮನೆಗೆ ಭೇಟಿ ನೀಡಿದ್ದಾರೆ. ನಂತರ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಕಳೆದ ಮಂಗಳವಾರ ದದ್ರಿ ಘಾಟ್ ನಲ್ಲಿದ್ದಾಗ ಗುಲ್ಲು ಚೌಧರಿಗೆ ಮಗುವಿನ ಅಳುವಿನ ಶಬ್ಧ ಕೇಳಿಸಿದೆ. ಇದರಿಂದಾಗಿ ಆತ ಬಾಕ್ಸ್ ತೆರೆದು ನೋಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಮಾಹಿತಿ ಪಡೆದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದು, ಮೀನುಗಾರನ ಕೆಲಸವನ್ನು ಕೊಂಡಾಡಿದ್ದಾರೆ. ಮಗುವಿನ ಬೆಳವಣಿಗೆಯ ಎಲ್ಲಾ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತದೆ ಎಂದಿದ್ದಾರೆ. ಮಗುವಿನ ಜೀವ ಕಾಪಾಡಿದ ಮೀನುಗಾರ ಮಾನವೀಯತೆಗೆ ಮಾದರಿಯಾಗಿದ್ದಾನೆ. ಈತನ ಈ ಕೆಲಸವನ್ನು ಮೆಚ್ಚಿ ಸರ್ಕಾರದಿಂದ ಸಿಗಬಹುದಾದ ಎಲ್ಲಾ ಸವಲತ್ತುಗಳು ಆತನಿಗೆ ಸಿಗುವಂತೆ ಮಾಡುಲಾಗುವುದು ಎಂದು ಸಿಎಂ ಆದಿತ್ಯನಾಥ್ ಹೇಳಿದ್ದಾರೆ.

ಇದನ್ನೂ ಓದಿ:ಫ್ರಾನ್ಸ್‌ನಲ್ಲಿ ದೈತ್ಯ ಮ್ಯಾಗ್ನೆಟ್‌! ವಿಮಾನ ಸೆಳೆಯುವ ಶಕ್ತಿ ಇದೆಯಂತೆ ಈ ಆಯಸ್ಕಾಂತಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next